yatnal accuses ಯಡಿಯೂರಪ್ಪ ಪದಚ್ಯುತಿಗೆ ಷಡ್ಯಂತ್ರ: ಯತ್ನಾಳ್

yatnal accuses
cm bsy and yatnal

yatnal accuses ಕೇಂದ್ರದ ಇಬ್ಬರು ಸಚಿವರಿಂದ ಬಿಎಸ್ವೈ ವಿರುದ್ಧ ಮಸಲತ್ತು: ಯತ್ನಾಳ್ ಆರೋಪ

ವಿಜಯಪುರ: ಮುಖ್ಯಮಂತ್ರಿ ಯಡಿಯೂರಪ್ಪ ಪದಚ್ಯುತಿಗೆ ( yatnal accuses ) ಪಕ್ಷದಲ್ಲಿಯೇ ಷಡ್ಯಂತ್ರ ಹೆಣೆಯಲಾಗುತ್ತಿದೆ ಎಂದು ಶಾಸಕ ಬಸನಗೌಡ ಯತ್ನಾಳ್ ಗಂಭೀರ ಆರೋಪ ಮಾಡಿದ್ದಾರೆ.

ಇದನ್ನೂ ಓದಿ: ಕೇಂದ್ರದ ಕೈಕಟ್ಟಿಹಾಕಿದ ಯಡಿಯೂರಪ್ಪ ಜಾಣ ನಡೆ

ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಸಳಿಸು ಪ್ರತಿಪಕ್ಷಗಳಲ್ಲ ನಮ್ಮವರೇ ತೀವ್ರ ಪ್ರಯತ್ನ ನಡೆಸಿದ್ದಾರೆ ಎಂದು ಯತ್ನಾಳರು ಬಾಂಬ್ ಸಿಡಿಸಿದ್ದಾರೆ.

ಯಡಿಯೂರಪ್ಪ ಅವರಿಗೆ 76 ವರ್ಷ ವಯಸ್ಸಾಗಿದೆ. ಹೀಗಾಗಿ ಅವರನ್ನು ಮನೆಗೆ ಕಳುಹಿಸಲು ಇಬ್ಬರು ಕೇಂದ್ರ ಸಚಿವರು ಷಡ್ಯಂತ್ರ ಮಾಡಿದ್ದಾರೆ. ಯಡಿಯೂರಪ್ಪ ವಿರುದ್ದ ನಿರಂತರ ಮಸಲತ್ತು ನಡೆಸಲಾಗಿದೆ ಎಂದು ಯತ್ನಾಳ್ ಹೇಳಿದ್ದಾರೆ.

ಹೈಕಮಾಂಡ್ ಮೇಲೆ ಸತತ ಒತ್ತಡ ಹೇರಿ ಯಡಿಯೂರಪ್ಪ ರಾಜೀನಾಮೆ ಪಡೆಯಲು ಇಬ್ಬರು ಸಚಿವರು ಷಡ್ಯಂತ್ರ ನಡೆಸಿದ್ದಾರೆ. ಇವರ ನಡವಳಿಕೆಯಿಂದ ರಾಜ್ಯದಲ್ಲಿ ಬಿಜೆಪಿ ಹಾಳಾಗುತ್ತಿದೆ ಎಂದ ಯತ್ನಾಳ್ ಆ ಸಚಿವರ ಹೆಸರು ಹೇಳಲು ನಿರಾಕರಿಸಿದರು.

ಪ್ರಧಾನಿ ಮೋದಿ ಭೇಟಿ ಮಾಡಲು ನನಗೆ ಅವಕಾಶ ಸಿಗದಂತೆ ಇದೇ ನಾಯಕರು ವ್ಯವಸ್ಥಿತ ಪಿತೂರಿ ಮಾಡಿದ್ದಾರೆ. ಬಿಜೆಪಿ ವರಿಷ್ಠರು ನೀಡಿರುವ ಷೋಕಾಸ್ ನೋಟೀಸಿಗೆ ನಾನು ಉತ್ತರ ನೀಡಲ್ಲ. ನನ್ನನ್ನು ಪಕ್ಷದಿಂದ ಹೊರಗೆ ಹಾಕಿ ನಿಮಗೇನು ಆಗಬೇಕಿದೆ. ಕಾಲ ಬಂದಾಗ ನನ್ನ ತಾಖತ್ತು ಏನೆಂದು ತೋರಿಸುತ್ತೇನೆ ಎಂದರು.

ರಾಜ್ಯದಲ್ಲಿ ಬಿಜೆಪಿ ಕಟ್ಟಿದ್ದು ಅನಂತಕುಮಾರ್ ಮತ್ತು ಯಡಿಯೂರಪ್ಪ. ಆದರೆ ಈಗ ಯಡಿಯೂರಪ್ಪ ಅವರನ್ನು ತುಳಿಯುವ ಕೆಲಸವಾಗುತ್ತಿದೆ. ಪ್ರವಾಹ ಸಂತ್ರಸ್ತರ ವಿಚಾರದಲ್ಲಿ ಮಾತನಾಡಿದ್ದಕ್ಕೆ ನನಗೆ ನೋಟೀಸ್ ನೀಡಲಾಗಿದೆ. ನಾನು ಈ ಬಗ್ಗೆ ವರಿಷ್ಡರನ್ನು ಭೇಟಿ ಮಾಡಿ ಮನವರಿಕೆ ಮಾಡುವ ಪ್ರಯತ್ನ ಮಾಡುತ್ತೇನೆಂದರು.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...