women safety ಮಹಿಳೆಯರ ಸುರಕ್ಷತೆ: ಪೊಲೀಸರಿಗೆ ಬೆಂಗಳೂರು ಕಮಿಷನರ್ ಖಡಕ್ ಎಚ್ಚರಿಕೆ

women safety

women safety ಮಹಿಳೆಯರ ಸುರಕ್ಷತೆ ವಿಚಾರದಲ್ಲಿ ರಾಜೀ ಇಲ್ಲ: ಬೆಂಗಳೂರು ಕಮಿಷನರ್ ಭಾಸ್ಕರ ರಾವ್ ಕಟ್ಟೆಚ್ಚರಿಕೆ

ಬೆಂಗಳೂರು: ಹೈದರಾಬಾದಿನಲ್ಲಿ ವೈದ್ಯೆಯ ಭೀಕರ ಹತ್ಯಾಚಾರದಂತಹ ಘಟನೆಗಳು ( women safety ) ನಗರದಲ್ಲಿ ಮರುಕಳಿಸದಂತೆ ತೀವ್ರ ಕಟ್ಟೆಚ್ಚರ ವಹಿಸಲು ಕಮಿಷನರ್ ಭಾಸ್ಕರ್ ರಾವ್ ಅವರು ಬೆಂಗಳೂರು ಪೊಲೀಸರಿಗೆ ಕಟ್ಟೆಚ್ಚರ ನೀಡಿದ್ದಾರೆ, ಈ ವಿಚಾರದಲ್ಲಿ ಯಾವುದೇ ನೆಪಕ್ಕೆ ಆಸ್ಪದವಿಲ್ಲ ಎಂದು ಅವರು ಪೊಲೀಸರಿಗೆ ಸಂದೇಶ ರವಾನಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ನಿರ್ಭಯರಾಗಿರಿ, ನಾವಿದ್ದೇವೆ: ಮಹಿಳೆಯರಿಗೆ ಕಮಿಷನರ್ ಅಭಯ

ಮಹಿಳೆಯರಿಂದ ಬರುವ ದೂರುಗಳಿಗೆ ಕೂಡಲೇ ಸ್ಪಂದಿಸಬೇಕು ಮತ್ತು ಅವರಿಗೆ ಅಗತ್ಯ ರಕ್ಷಣೆ ಒದಗಿಸಬೇಕು. ಈ ಕಾರ್‍ಯದಲ್ಲಿ ಯಾರಿಂದಲೂ ಯಾವುದೇ ಲೋಪ ಆಗದಂತೆ ಎಚ್ಚರಿಕೆ ವಸಹಿಬೇಕು ಎಂದು ಭಾಸ್ಕರ ರಾವ್ ಬೆಂಗಳೂರಿನ ಪೊಲೀಸರಿಗೆ ವೈರ್‌ಲೆಸ್ ಮೂಲಕ ಸಂದೇಶ ರವಾನಿಸಿದ್ದಾರೆ.

ಮಹಿಳೆಯರು ಇರುವೆಡೆ ಹೆಚ್ಚಿನ ಭದ್ರತೆ ಕೈಗೊಳ್ಳಬೇಕು. ವಿಶೇಷವಾಗಿ ಗಾರ್ಮೆಂಟ್ ಉದ್ಯೋಗಿಗಳು, ತಡರಾತ್ರಿ ಮಹಿಳೆಯರು ಕೆಲಸ ಮಾಡುವ ಸ್ಥಳಗಳು, ಕಾಲೇಜು, ಮಾಲ್‌ಗಳ ಬಳಿ ತೀವ್ರ ನಿಗಾ ವಹಿಸಬೇಕು ಎಂದು ಬೆಂಗಳೂರು ಕಮಿಷನರ್‍ ಅಧಿಖಾರಿಗಳು ಹಾಗೂ ಕೆಳಸ್ತರದ ಸಿಬ್ಬಂದಿಗೆ ಎಚ್ಚರಿಕೆ ನೀಡಿದ್ದಾರೆ.

ಮಹಿಳೆಯರಿಂದ ಬರುವ ಯಾವುದೇ ಸಂಕಷ್ಟ ಕರೆಗಳಿಗೆ ಅದರ ಪೂರ್ವಪರ ವಿವೇಚಿಸದೇ ಸ್ಪಂದಿಸಬೇಕು. ಅವು ಹುಸ ಕರೆಗಳಾಗಿದ್ದರೂ ಚಿಂತಿಸದೇ ಕ್ರಮಕ್ಕೆ ಮುಂದಾಗಬೇಕು. ಅಲ್ಲದೇ ಈ ವಿಚಾರದಲ್ಲಿ ವ್ಯಾಪ್ರತಿ ಪ್ರದೇಶದ ಕಟ್ಟುಪಾಡುಗಳನ್ನು ಕೈಬಿಟ್ಟು ದೂರು ದಾಖಲಿಸಿಕೊಳ್ಳಬೇಕು ಎಂಬ ಸಂದೇಶ ರವಾನಿಸಲಾಗಿದೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...