women devotees ಅಯ್ಯಪ್ಪನ ದರ್ಶನಕ್ಕೆ ಹೊರಟ ರಾಜ್ಯದ 9 ಮಹಿಳೆಯರು

women devotees
sabarimala ayyappa temple

women devotees ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಈವರೆಗೆ 319 ಮಹಿಳೆಯರ ನೋಂದಣಿ

ತಿರುವನಂತಪುರ: ಶಬರಿಮಲೆಯ ಅಯ್ಯಪ್ಪನ ದರ್ಶನಕ್ಕೆ ( women devotees ) ರಾಜ್ಯದಿಂದ 9 ಮಂದಿ ಮಹಿಳೆಯರು ಹೊರಟಿದ್ದಾರೆ. 15ರಿಂದ 45 ವಯೋಮಾನದ ರಾಜ್ಯ ಒಂಬತ್ತು ಮಂದಿ ಮಹಿಳೆಯರು ಅಯ್ಯಪ್ಪನ ದರ್ಶನ ಕೋರಿ ಕೇರಳ ಪೊಲೀಸರಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಅನರ್ಹರನ್ನು ಬೆಚ್ಚಿ ಬೀಳಿಸಿದ ಕುಮಾರಸ್ವಾಮಿ ತಂತ್ರ

ಸುಪ್ರೀಂ ಕೋರ್ಟು ತನ್ನ ಹಿಂದಿನ ತೀರ್ಪಿಗೆ ತಡೆ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಮಹಿಳೆಯರು ಅಯ್ಯಪ್ಪ ದರ್ಶನಕ್ಕೆ ಮುಂದಾಗಿದ್ದಾರೆ ಎಂದು ಆಂಗ್ಲ ದೈನಿಕ ವರದಿ ಮಾಡಿದೆ.

ಎರಡು ತಿಂಗಳ ಕಾಲ ತೆರೆಯುವ ಅಯ್ಯಪ್ಪ ದೇಗುಲಕ್ಕೆ ಪ್ರವೇಶ ಕೋರಿ ದೇಶಾದ್ಯಂತ ಈವರೆಗೆ 319 ಮಹಿಳೆಯರು ಕೇರಳ ಪೊಲೀಸರಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ಈ ಪೈಕಿ ರಾಜ್ಯದ ಒಂಬತ್ತು ಮಂದಿಯೂ ಸೇರಿದ್ದಾರೆ ಎನ್ನಲಾಗಿದೆ.

ಅಯ್ಯಪ್ಪ ಸ್ವಾಮಿಯ ದರುಶನ ಭಾಗ್ಯ ಕೋಡಿ ನೂರಾರು ಸಂಖ್ಯೆಯಲ್ಲಿ ಮಹಿಳೆಯರು ನೋದಮಣೀ ಮಾಡಿಕೊಂಡಿದ್ದರೂ ಅವರು ಯಾತ್ರೆ ಕಯಗೊಂಡಲ್ಲಿ ಪಂಪಾ ನದಿ ತೀರದಿಂದಲೇ ವಾಪಸಾಗಬೇಕಾದ ಪರಿಸ್ಥಿತಿ ಇದೆ. ಏಕೆಂದರೆ ಮಹಿಳೆಯರ ಯಾತ್ರೆಗೆ ಅನುವು ಮಾಡಿಕೊಡಲು ಕೇರಳ ಸರಕಾರ ನಿರಾಕರಿಸಿದೆ.

ಕಳೆದ ವರ್ಷ ಇದೇ ವೇಳೆಯಲ್ಲಿ ಸಾಕಷ್ಟು ಮಹಿಳೆಯರು ಪವಿತ್ರ ದೇಗುಲ ಪ್ರವೇಶಕ್ಕೆ ಮುಮದಾಗಿದ್ದರು. ಆಗ ಸರಕಾರವೇ ಅವರಿಗೆಲ್ಲ ರಕ್ಷಣೆ ನೀಡಿ ದಶರ್ಣಕ್ಕೆ ಅವಕಾಶ ಕಲ್ಪಿಸಿತ್ತು. ಆದರೆ ಅದರಿಂದ ಕಾನೂನು ಭಂಗ, ಹಿಂಸಾಚಾರದ ಪ್ರಕರಣಗಳು ನಡೆದಿದ್ದವು.

ಈ ಹಿನ್ನೆಲೆಯಲ್ಲಿ ಯಾವುದೇ ಅಪಾಯ ಮೈಮೇಲೆ ಎಳೆದುಕೊಳ್ಳಲು ಇಚ್ಛಿಸದ ಕೇರಳ ಸರಕಾರ ಮಹಿಳೆಯರಿಗೆ ಯಾವುದೇ ವಿಶೇಷ ಭದ್ರತೆ ಕಲ್ಪಿಸಲು ಸಾಧ್ಯವಿಲ್ಲ ಎಂದು ಹೇಳಿದೆಯಲ್ಲದೇ ದರ್ಶನಕ್ಕೆ ಬರುವ ಮಹಿಳಾ ಯಾತ್ರಿಗಳನ್ನು ಪಂಪೆಯಲ್ಲಿಯೇ ತಡೆದು ವಾಪಸ್ ಕಳುಹಿಸಲು ತೀರ್ಮಾನಿಸಿದೆ.

ಇಷ್ಟಾಗಿಯೂ ಸಾಕಷ್ಟು ಸಂಖ್ಯೆಯಲ್ಲಿ ಮಹಿಳಾ ಭಕ್ತರು ಯಾತ್ರೆಗೆ ಅನುಮತಿ ಕೋರಿ ನೋಂದಣಿ ಮಾಡಿಕೊಂಡಿದ್ದಾರೆ. ಇವರ ಪೈಕಿ ಅತಿ ಹೆಚ್ಚಿನ ಸಂಖ್ಯೆಯ ಮಹಿಳೆಯರು (160) ಆಂದ್ರಪ್ರದೇಶದವರಾದರೇ, ತಮಿಳುನಾಡಿನಿಂದ (139) ಮಂದಿ ನೋಂದಣಿ ಮಾಡಿಕೊಂಡಿದ್ದಾರೆ ಎಂದು ವರದಿ ಹೇಳಿದೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...