ಯಾವುದೇ ಹಣ್ಣಾದರೂ ಮಲಗುವುದಕ್ಕೆ 3 ಗಂಟೆ ಮೊದಲು ಸೇವಿಸಬೇಕು

ಹಣ್ಣುಗಳ ಸೇವನೆಗೆ ಅತ್ಯುತ್ತಮ ಸಮಯ ಯಾವುದು ಎಂದು ತಿಳಿದಾಗ ನಿಮಗೆ ನಿಜವಾಗಿಯೂ ಆಶ್ಚರ್ಯವಾಗುತ್ತದೆ. ಹಣ್ಣುಗಳನ್ನು ಖಾಲಿ ಹೊಟ್ಟೆಯಲ್ಲಿ ಅಥವಾ ಎರಡು ಊಟಗಳ ನಡುವಿನ ಸಮಯದಲ್ಲಿ ಸೇವಿಸಲು ಶಿಫಾರಸು ಮಾಡಲಾಗುತ್ತದೆ.

ಈ ಸಮಯದಲ್ಲಿ ಜೀರ್ಣಕ್ರಿಯೆಯು ಅತ್ಯಂತ ಕ್ಷಿಪ್ರವಾಗಿ ನಡೆಯುತ್ತದೆ ಮತ್ತು ಈ ಸಮಯದಲ್ಲಿ ಸೇವಿಸಿದ ಹಣ್ಣುಗಳನ್ನು ಜೀರ್ಣಗೊಳಿಸಲು ಶರೀರವು ವಿವಿಧ ರೀತಿಯ ಕಿಣ್ವಗಳನ್ನು ಬಳಸಿಕೊಳ್ಳುತ್ತದೆ. ಹಣ್ಣುಗಳಲ್ಲಿ ಇರುವ ಸೂಕ್ಷ್ಮ ಸಕ್ಕರೆಯ (ಸಿಂಪಲ್‌ಶುಗರ್‌) ಅಂಶಗಳು ಸಂಪೂರ್ಣವಾಗಿ ದೇಹಗತವಾಗಲು ಸಮಯ ತೆಗೆದುಕೊಳ್ಳುತ್ತದೆ.

ಹಣ್ಣುಗಳನ್ನು ಊಟಗಳ ಮಧ್ಯೆ ಅಥವಾ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ, ಎಲ್ಲಾ ಪೋಷಕಾಂಶಗಳು, ನಾರಿನಂಶಗಳು ಮತ್ತು ಸೂಕ್ಷ್ಮ ಸಕ್ಕರೆಯ ಅಂಶಗಳು ಚೆನ್ನಾಗಿ ದೇಹಗತವಾಗುತ್ತವೆ. ಈ ಕ್ರಮದಲ್ಲಿ ಹಣ್ಣುಗಳನ್ನು ಸೇವಿಸಿದರೆ, ನೀವು ಸೇವಿಸಿದ ಹಣ್ಣಿನ ಬಹು ಅಂಶವು ಸಂಪೂರ್ಣವಾಗಿ ದೇಹಗತವಾಗುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು.

ಈ ಸಮಯ ಒಳ್ಳೆಯದಲ್ಲ

ನಿದ್ದೆ ಮಾಡಲು ತೆರಳುವ ಸ್ವಲ್ಪವೇ ಸಮಯಕ್ಕೆ ಮೊದಲು ಹಣ್ಣುಗಳನ್ನು ಸೇವಿಸುವುದು ಒಳ್ಳೆಯ ಕ್ರಮ ಅಲ್ಲ. ಇದು ಇದ್ದಕ್ಕಿದ್ದಂತೆಯೇ ರಕ್ತದ ಸಕ್ಕರೆಯ ಅಂಶವನ್ನು ಮತ್ತು ಇನ್ಸುಲಿನ್‌ಮಟ್ಟವನ್ನು ಏರಿಸುತ್ತದೆ ಮತ್ತು ಇದರಿಂದಾಗಿ ನಿರಾಳವಾಗಿ ನಿದ್ದೆ ಹೋಗಲು ಕಷ್ಟವಾಗುತ್ತದೆ. ಹಾಗಾಗಿ ಸಾಯಂಕಾಲದ ಸಮಯದಲ್ಲಿ ಹಣ್ಣುಗಳನ್ನು ತಿನ್ನುವುದನ್ನು ತಪ್ಪಿಸಿಕೊಳ್ಳಿ ಮತ್ತು ಯಾವುದೇ ಹಣ್ಣಾದರೂ ಸಹ ಅದನ್ನು ರಾತ್ರಿ ಮಲಗುವುದಕ್ಕೆ 3 ಗಂಟೆ ಮೊದಲು ಸೇವಿಸಬೇಕು ಎನ್ನುವುದನ್ನು ನೆನಪಿಡಿ.

ಹಿಪ್ಪುನೇರಳೆ ಹಣ್ಣು

ಈ ಹಣ್ಣು ನೆನಪಿನ ಶಕ್ತಿಯನ್ನು ವೃದ್ಧಿಸುತ್ತವೆ. ವಯಸ್ಸಾಗುತ್ತಾ ಹೋದಂತೆ ನೆನಪಿನ ಶಕ್ತಿಯ ಕೊರತೆಯಿಂದ, ಮರೆಗುಳಿಗಳಾಗುವ ಹಿರಿಯರಿಗೆ ಈ ಹಣ್ಣುಗಳು ಒಳ್ಳೆಯದು.

ಕಿತ್ತಳೆ ಮತ್ತು ಮುಸುಂಬಿ

ಮೂಳೆಯ ಕೀಲುಗಳಿಗೆ ಶಕ್ತಿತುಂಬಲು ಮತ್ತು ದೇಹಕ್ಕೆ ಬಲಿಷ್ಠವಾಗಲು ಸಹಕಾರಿ

ಒಣ ಹಣ್ಣುಗಳು

ಇವು ಹೆಚ್ಚು ಪೋಷಕಾಂಶಗಳನ್ನು ಹೊಂದಿರುವ ಆಹಾರ. ಹೆಚ್ಚು ಪ್ರಮಾಣದಲ್ಲಿ ಖನಿಜಾಂಶ, ವಿಟಮಿನ್‌ಗಳನ್ನು ಹೊಂದಿರುವ ಒಣ ಹಣ್ಣುಗಳನ್ನು ನೀರಿನಲ್ಲಿ ರಾತ್ರಿ ನೆನೆಸಿಟ್ಟು ಬೆಳ್ಳಗ್ಗೆ ಸೇವಿಸುವುದು ಉತ್ತಮ ಎಂದು ವೈದ್ಯರ ಸೂಚನೆ.

ಸೇಬು

ದೊಡ್ಡಕರುಳಿನ ಮತ್ತು ಸಣ್ಣ ಕರುಳ ಕಾನ್ಸರ್‌ತಡೆಯಲು ಸಹಕಾರಿ. ಮಲಬದ್ಧತೆಯಂತಹ ಸಮಸ್ಯೆಗಳಿಗೆ ಪರಿಹಾರ ನೀಡಬಲ್ಲ ನ್ಯೂಟ್ರಿಶನ್‌ಹಣ್ಣು ಸೇಬು. ದೇಹಕ್ಕೆ ಬೇಕಾಗಿರುವ ಉತ್ತಮ ಕೊಬ್ಬನ್ನು ಒದಗಿಸುತ್ತದೆ.

ದ್ರಾಕ್ಷಿ ಹಣ್ಣು

ರಕ್ತದೊತ್ತಡವನ್ನು ಹತೋಟಿಗೆ ತರಲು ಸಹಕಾರಿ

ಬಾಳೆಹಣ್ಣು

ಬಾಳೆಹಣ್ಣು ಉತ್ತಮ ಪೋಷಕಾಂಶಗಳನ್ನು ಹೊಂದಿರುವ ಹಣ್ಣು. ಕಿಡ್ನಿಯ ತೊಂದರೆ ಇದ್ದವರು ಮತ್ತು ಮಲಬದ್ಧತೆಯ ತೊಂದರೆಯುಳ್ಳವರು ಬಾಳೆಹಣ್ಣನ್ನು ದಿನವೂ ಉಪಯೋಗಿಸಬೇಕು.

ಕಲ್ಲಂಗಡಿ ಹಣ್ಣು

ರಕ್ತವೃದ್ಧಿಗೆ ಸಹಕಾರಿ, ಕಜ್ಜಿ ತುರಿಕೆಯಂತಹ ಸಮಸ್ಯೆಗಳಿಗೆ ಕಲ್ಲಂಗಡಿ ಪರಿಹಾರ ನೀಡುತ್ತದೆ.

ಮಾವಿನ ಹಣ್ಣು

ನಿದ್ರಾಹೀನತೆಗೆ ಪರಿಹಾರ ನೀಡಬಲ್ಲದು, ಮೂಲವ್ಯಾಧಿ, ವಾತ-ಪಿತ್ತ, ಮಲಬದ್ಧತೆ, ಅಜೀರ್ಣ ಸಮಸ್ಯೆಗಳಿಗೆ ರಾಮಬಾಣ

ದಾಳಿಂಬೆ ಹಣ್ಣು

ಹಲ್ಲುಗಳ ಸುರಕ್ಷತೆಗೆ ಬೇಕಾದ ವಿಟಾಮಿನ್‌ಗಳನ್ನು ಒದಗಿಸುತ್ತದೆ, ಖನಿಜಾಂಶಗಳನ್ನು ಹೊಂದಿರುವ ಹಣ್ಣು

ಹಲಸಿನ ಹಣ್ಣು

ಪಿತ್ತವಿಕಾರಗಳನ್ನು ದೂರಮಾಡಬಲ್ಲದು, ಪೌಷ್ಠಿಕಾಂಶಯುಕ್ತ ಹಣ್ಣು, ನರಗಳ ದೌರ್ಬಲ್ಯಕ್ಕೆ ಪರಿಹಾರ ನೀಡಬಲ್ಲದು

ಮುರುಗಲು ಹಣ್ಣು

ಪಿತ್ತ ಸಮಸ್ಯೆಗೆ ರಾಮಬಾಣವಾಗಿರುವ ಹಣ್ಣು.

ಪಪ್ಪಾಯ

ವಿಟಮಿನ್‌ಎ ಅಧಿಕವಾಗಿರುವುದರಿಂದ ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು.

ಅಂಜೂರದ ಹಣ್ಣು

ಒತ್ತಡ, ಮಲಬದ್ಧತೆ, ಮೂಲವ್ಯಾಧಿ ಸಮಸ್ಯೆಗಳನ್ನು ಶಮನ ಮಾಡಬಲ್ಲ ಶಕ್ತಿ ಅಂಜೂರದ ಹಣ್ಣಿಗೆ ಇದೆ.

ಖರ್ಜೂರ

ಜಂತುಹುಳು ಸಮಸ್ಯೆ ಹಾಗೂ ಬೇದಿ ಸಮಸ್ಯೆಗೆ ಶೀಘ್ರ ಪರಿಹಾರ ನೀಡುವ ಹಣ್ಣು, ಪೌಷ್ಠಿಕ ಆಹಾರಗಳಲ್ಲೊಂದು

ಅನಾನಾಸು

ರೋಗ ನಿರೋಧಕ ಶಕ್ತಿ ಹೆಚ್ಚಳ, ಬೊಜ್ಜು ಕರಗುವಿಕೆ