ಉತ್ತರ ಕರ್ನಾಟಕದ ಅಸಮಾಧಾನ ನೀಗಿಸಲು ಎಂಬಿ. ಪಾಟೀಲ್ ಮನವಿ

ಬೆಂಗಳೂರು: ಮೈತ್ರಿ ಸರಕಾರ ರಚನೆಯಾದಂದಿನಿಂದ ಉತ್ತರ ಕರ್ನಾಟಕದ ಭಾಗದ ನಾಯಕರಿಗೆ ಅನ್ಯಾಯವಾಗಿದೆ ಎಂಬ ಭಾವನೆ ತಲೆದೋರಿದೆ. ಸಚಿವ ಸಂಪುಟ ವಿಸ್ತರಣೆಯ ಮೂಲಕವಾದರೂ ಆ ಭಾವನೆ ದೋರಾಗುವಂತೆ ಮಾಡಿ ಎಂದೊ ಮಾಜಿ ಸಚಿವ ಎಂಬಿ ಪಾಟೀಲ್ ಮನವಿ ಮಾಡಿದ್ದಾರೆ.

ಸರಕಾರ ಅಸ್ತಿತ್ವಕ್ಕೆ ಬಂದ ದಿನದಂದಿಲೇ ಈ ರೀತಿಯ ಭಾವನೆ ಹುಟ್ಟುಪಡೆದಿದೆ. ಎಲ್ಲೋ ಒಂದು ಕಡೆ ಉತ್ತರ ಕರ್ನಾಟಕದ ಭಾಗದ ನಾಯಕರಿಗೆ ಬೆಲೆ ನೀಡಿಲ್ಲ ಎಂಬುದು ಈ ಭಾಗದವರ ಕೊರಗಾಗಿದೆ.

ಇದನ್ನೂ ಓದಿ: 22ಕ್ಕೆ ಸಂಪುಟ ವಿಸ್ತರಣೆಗೆ ಮುಹೂರ್ತ: ಸಿದ್ದರಾಮಯ್ಯ

ಈಗೇನು ಸಚಿವ ಸಂಪುಟ ವಿಸ್ತರಣೆ ಮಾಡುವ ಭರವಸೆ ನೀಡಿದ್ದಾರೆ, ಈಗಲಾದರೂ ಉತ್ತರ ಕರ್ನಾಟಕದ ನಾಯಕರನ್ನು ಕಡೆಗಣಿಸದೇ ಅಸಮಾಧಾನದ ಭಾವನೆ ಹೋಗಲಾಡಿಸಿ ಎಂದು ಪಾಟೀಲರು ಕಾಂಗ್ರೆಸ್ ಮುಖಂಡರನ್ನು ಕೋರಿದ್ದಾರೆ.

ಡಿಸೆಂಬರ್ 22ರಂದು ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯಾಗುವ ನಿರೀಕ್ಷೆ ಇದೆ. ಈ ಅವಕಾಶವನ್ನು ಬಳಸಿಕೊಂಡು ನಮ್ಮ ಭಾಗದ ನಾಯಕರಿಗೆ ಮನ್ನಣೆ ನೀಡಿ ಎಂಬುದು ಎಂಬಿಪಿ ಮನವಿಯಾಗಿದೆ.

ಇದನ್ಸಂನೂ ಓದಿ: ಪುಟ ವಿಸ್ತರಣೆ ಮಾತು: ಕಾಂಗ್ರೆಸ್‌ನಲ್ಲಿ ಕ್ಷಿಪ್ರ ಬೆಳವಣಿಗೆ

ಸಂಪುಟ ವಿಸ್ತರಣೆ ಕುರಿತು ಡಿಸೆಂಬರ್ 21ರಂದು ರಾಜ್ಯ ನಾಯಕರೊಂದಿಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸಭೆ ನಡೆಸಲಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಉಪಮುಖ್ಯಮಂತ್ರಿ ಜಿ ಪರಮೇಶ್ವರ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಸಭೆಯಲ್ಲಿ ಭಾಗಿಯಾಗಲಿದ್ದಾರೆ.

ನಾಲ್ಕೈದು ತಿಂಗಳಿನಿಂದಲೂ ಸಂಪುಟ ವಿಸ್ತರಣೆ ಕಾರ್ಯ ಹಲವು ಕಾರಣಗಳಿಂದ ಮುಂದೂಡಿಕೊಂಡು ಬರಲಾಗುತ್ತಿದೆ. ಇದರಿಂದ ಬೇಸತ್ತು ಹೋಗಿದ್ದ ಕಾಂಗ್ರೆಸ್​ ಸಚಿವಾಕಾಂಕ್ಷಿ ಶಾಸಕರು ಬಂಡಾಯ ಏಳುವ ಸೂಚನೆಯನ್ನು ನೀಡಿದ್ದ ಹಿನ್ನೆಲೆಯಲ್ಲಿ ವಿಸ್ತರಣೆ ಪ್ರಕ್ರಿಯೆಗೆ ಮತ್ತೆ ಜೀವ ಬಂದಿದೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...