wankhede t20 ವಿಂಡೀಸ್ ದಾಳಿಯನ್ನು ಚೆಂಡಾಡಿದ ರಾಹುಲ್, ರೋಹಿತ್, ಕೊಹ್ಲಿ; ಭಾರತಕ್ಕೆ ಸರಣಿ

wankhede t20
kl rahul

wankhede t20  ಕೊನೆಯ ಟಿ20ಯಲ್ಲಿ ಗೆದ್ದ ಭಾರತ 240/3, ವಿಂಡೀಸ್ 173/8

ಮುಂಬೈ: ಆರಂಭಿಕರಾದ ಕೆಎಲ್. ರಾಹುಲ್,  ( wankhede t20 ) ರೋಹಿತ್ ಶರ್ಮಾ ಹಾಗೂ ನಾಯಕ ವಿರಾಟ್ ಕೊಹ್ಲಿ ಅವರ ಬಿರುಗಾಳಿ ಬ್ಯಾಟಿಂಗ್ ಮುಂದೆ ತತ್ತರಿಸಿದ ವೆಸ್ಟ್ ಇಂಡೀಸ್ ಮೊನೆಯ ಟಿ20 ಪಂದ್ಯವನ್ನು 67 ರನ್ನುಗಳಿಂದ ಸೋತು ಸರಣಿ ಕೈಬಿಟ್ಟಿದೆ

ಇದನ್ನೂ ಓದಿ: ರಣಜಿ: ಗೌತಮ‍್ ಕೈಚಳಕ: ತಮಿಳುನಾಡು ಪರದಾಟ

ಪಂದ್ಯ ಗೆಲ್ಲಲು 241 ರನ್ ಗಳಿಸಬೇಕಾದ ಸವಾಲು ಎದುರಿಸಿದ ವೆಸ್ಟ್ ಇಂಡೀಸ್ ತನ್ನ ನಿಗದಿ 20 ಓವರುಗಳಲ್ಲಿ 173 ರನ್ನುಗಳಿಗೆ ಎಂಟು ವಿಕೆಟ್ ಕಳೆದುಕೊಂಡು ಹೋರಾಕ್ಕೆ ತೆರೆ ಎಳೆಯಿತು. ನಾಯಕ ಪೊಲಾರ್ಡ್ 68 ಮತ್ತು ಹೆಟ್ಮೆಯರ್ 41 ರನ್ ಗಳಿಸಿದ್ದು ಬಿಟ್ಟರೆ ಉಳಿದ ದಾಂಡಿಗರು ಸವಾಲಿಗೆ ಸ್ಪಂದಿಸಲಿಲ್ಲ. ಭಾರತದ ಪರ ಚಾಹರ್, ಭುವಿ, ಶಮಿ ಮತ್ತು ಕುಲ್ದೀಪ್ ತಲಾ 2 ವಿಕೆಟ್ ಕಿತ್ತರು.

ಟಾಸ್ ಗೆದ್ದು ಭಾರತವನ್ನು ಬ್ಯಾಟ್ ಮಾಡಲು ಆಹ್ವಾನಿಸಿದ ವೆಸ್ಟ್ ಇಂಡೀಸ್ ನಾಯಕ ಕೀರನ್ ಪೊಲಾರ್ಡ್ ಕೈ ಹಿಸುಕಿಕೊಳ್ಳುವಂತೆ ಮಾಡಿದ್ದು ರಾಹುಲ್ (91)  ಮತ್ತು ರೋಹಿತ್ ಅವರ ಆಕ್ರಮಣದ ಜುಗಲಬಂದಿ ಎಂದರೆ ತಪ್ಪಿಲ್ಲ.

ವಿಂಡೀಸ್ ಬೌಲರುಗಳನ್ನು ಮನಬಂದಂತೆ ದಂಡಿಸಿದ ಈ ಜೋಡಿ ಮೊದಲ ವಿಕೆಟ್ಟಿಗೆ ಕೇವಲ 11.4 ಓವರುಗಳಲ್ಲಿ 135 ರನ್ ಸಂಗ್ರಹಿಸಿ ತಂಡವನ್ನು ಭಾರೀ ಮೊತ್ತದತ್ತ (240/3)  ಸಾಗಲು ಅಣಿಗೊಳಿಸಿತು. ಅದ್ಭುತವಾಗಿ ಆಡುತ್ತಿದ್ದ ರೋಹಿತ್ ಶರ್ಮಾ 71 ರನ್ ಮಾಡಿ ನಿರ್ಗಮಿಸಿದರು.

ರೋಹಿತ್ ಬೆನ್ನಿಗೇ ರಿಶಬ್ ಂತ್ ಕೂಡ ಹೊರ ನಡೆದರು. ಈ ಹಂತದಲ್ಲಿ ,ಮೂರನೇ ವಿಕೆಟ್ಟಿಗೆ ರಾಹುಲ್ ಅವರನ್ನು  ಜೊತೆಗಡಿದ ನಾಯಕ ಕೊಹ್ಲಿ (70 )ರೋಹಿತ್ ಆಟವನ್ನು ಮುಂದುವರಿಸುವವರಂತೆ ಆಡಿದರು.  ಈ ಜೋಡಿ ಮೂರನೇ ವಿಕೆಟ್ಟಿಗೆ ಕೇವಲ 7.2 ಓವರುಗಳಲ್ಲಿ 5 ರನ್ ಸೇರಿಸಿತು.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...