wall collapse ಮಂಗಳೂರು: ಗೋಡೆ ಕುಸಿದು ಇಬ್ಬರು ಮಕ್ಕಳ ದಾರುಣ ಸಾವು

wall collapse
wall collapse in mangaluru

wall collapse ಮಂಗಳೂರಿನ ಪಡೀಲ್ ಶಿವನಗರದಲ್ಲಿ 2 ಮಕ್ಕಳ ಬಲಿ ಪಡೆದ ಗೋಡೆ ಕುಸಿತ ಅವಘಡ

ಮಂಗಳೂರು: ಇಲ್ಲಿನ ಪಡೀಲ್ ಶಿವನಗರದಲ್ಲಿ ಮನೆಯ ಆವರಣ ಗೋಡೆ ( wall collapse ) ಮೈ ಮೇಲೆ ಕುಸಿದು ಬಿದ್ದು ಇಬ್ಬರು ಮಕ್ಕಳು ದಾರುಣವಾಗಿ ಮೃತಪಟ್ಟಿರುವ ಘಟನೆ ವರದಿಯಾಗಿದೆ. ಈ ದುರಂತದಲ್ಲಿ ವೇದಾಂತ್ (7), ವರ್ಷಿಣಿ (8) ಮೃತಪಟ್ಟವರು ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: ಕಿರಾತಕರ ಕುಕೃತ್ಯ: ಬೆಟಗೇರಿ ಮಾಂಕಾಳಿ, ನಾಗಪ್ಪನ ಪ್ರತಿಮೆ ಭಗ್ನ

ಕೊಡಕ್ಕಲ್ ಶಿವನಗರ ಮನೆಯ ರಾಮಚಂದ್ರ, ರಜನಿ ದಂಪತಿಯ ಮಕ್ಕಳು ಮೃತಪಟ್ಟಿರುವುದಾಗಿ ವರದಿಯಾಗಿದೆ. ಜೋರು ಮಳೆ ಸುರಿಯುತ್ತಿದ್ದು, ಪಕ್ಕದ ಮನೆಯ ಆವರಣಗೋಡೆ ಕುಸಿದು ಬಿದ್ದು ಇಬ್ಬರು ಮಕ್ಕಳು ದಾರುಣವಾಗಿ ಮೃತಪಟ್ಟಿದ್ದಾರೆ ಎಂದು ದೂರು ದಾಖಲಾಗಿದೆ.

ಈ ಕುಟುಂಬ ಕಣ್ಣೂರಿನ ಸೆರಾಮಿಕ್ ಫ್ಯಾಕ್ಟರಿಯೊಂದರಲ್ಲಿ ಕಳೆದ 15 ವರ್ಷಗಳಿಂದ ಕೆಲಸ ಮಾಡಿಕೊಂಡಿದ್ದರು. ಇತ್ತೀಚೆಗೆ ಪಡೀಲ್‌ನಲ್ಲಿ ವಾಸವಾಗಿದ್ದರು. ಮಂಗಳೂರು ನಗರದ ಶಾಲೆಯಲ್ಲಿ ನಾಲ್ಕನೇ ತರಗತಿಯಲ್ಲಿ ವರ್ಷಿಣಿ ಹಾಗೂ ಎರಡನೇ ತರಗತಿಯಲ್ಲಿ ವೇದಾಂತಿ ವಿದ್ಯಾಭ್ಯಾಸ ಮಾಡುತ್ತಿದ್ದರು.

ಸೆ.9ರಂದು ಶಾಲೆಯಲ್ಲಿ ಪರೀಕ್ಷೆ ಇತ್ತು. ಪರೀಕ್ಷೆಯ ಸಿದ್ಧತೆಗಾಗಿ ಮನೆಯ ಆವರಣ ಗೋಡೆ ಸಮೀಪ ಮಕ್ಕಳು ಓದುತ್ತಿದ್ದರು. ಭಾನುವಾರ ರಾತ್ರಿ ಆವರಣ ಗೋಡೆ ಬಿದ್ದಿದೆ. ಈ ವೇಳೆ ಪುಸ್ತಕ ಓದುತ್ತಿದ್ದ ಮಕ್ಕಳಿಬ್ಬರೂ ಮಣ್ಣಿನ ಕೆಳಗೆ ಸಿಲುಕಿದ್ದಾರೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...