vyasaraja ಆನೆಗೊಂದಿಯಲ್ಲಿ ವ್ಯಾಸರಾಜರ ವೃಂದಾವನ ಪುನರ್ ನಿರ್ಮಾಣ

vyasaraja
vyasaraja brindavana resurrected in anegondi

vyasaraja ಪೇಜಾವರ, ಮಂತ್ರಾಲಯ, ಉತ್ತರಾಧಿ ಮಠಾಧೀಶರು ಉಸ್ತುವಾರಿ

ಆನೆಗೊಂದಿ: ಧನದಾಹಿ ಕಳ್ಳರ ಮತಹೀನ ನಡೆಯಿಂದಾಗಿ ಧ್ವಂಸಗೊಂಡಿದ್ದ ( vyasaraja ) ಶ್ರೀಮದ್ ವ್ಯಾಸರಾಜರ ನವಬೃಂದಾವನದ ಮರುನಿರ್ಮಾಣ ಸಕಲ ಪೂಜಾ ವಿಧಿವಿಧಾನಗಳೊಂದಿಗೆ ನೆರವೇರಿದೆ.

ಇದನ್ನೂ ಓದಿ: ಕಣ್ಮನ ಸೆಳೆಯುತ್ತಿರುವ ಶಿರಡಿ ಸಾಯಿ ನಿಜರೂಪದ ಮೇಣದ ಪ್ರತಿಮೆ

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿ ಬಳಿಯ ನವವೃಂದಾವನ ಗಡ್ಡೆಯಲ್ಲಿ ಬುಧವಾರ ರಾತ್ರಿ ದುಷ್ಕರ್ಮಿಗಳಿಂದ ಧ್ವಂಸಗೊಂಡಿದ್ದ ವ್ಯಾಸರಾಜರ ವೃಂದಾವನವನ್ನು ಗುರುವಾರ ರಾತ್ರಿಯಿಂದಲೇ ಪುನರ್ ಪ್ರತಿಷ್ಠಾನ ಮಾಡುವ ಕಾರ್ಯ ಪೂರ್ಣಗೊಂಡಿದೆ.

ನವ ವೃಂದಾವನ ನಿರ್ಮಾಣ ಕಾರ್ಯ ಭರದಿಂದ ಸಾಗಿತು. ವೃಂದಾವನ ನಿರ್ಮಾಣಕ್ಕೆ ಸಿಮೆಂಟ್ ಬಳಸದೇ ಬೆಲ್ಲದ ನೀರು, ಸುಣ್ಣ, ಮರಳು, ಪುಂಡಿ ನಾರು ಮಿಶ್ರಿತ ಗಾರೆಯನ್ನು ಬಳಸುವ ಮೂಲಕ ಪುನರ್ ನಿರ್ಮಾಣ ಮಾಡಲಾಗಿದೆ.

50 ಕ್ಕೂ ಹೆಚ್ಚು ಯತಿಗಳಿಂದ ಪವಮಾನ, ನವಗ್ರಹ, ವಿರಾಜಮಂತ್ರ, ನರಸಿಂಹ ಮಂತ್ರ, ತತ್ವ ಹೋಮಗಳನ್ನು ನಡೆಸಲಾಯಿತು. ಮತ್ತೊಂದೆಡೆ ವೃಂದಾವನಕ್ಕೆ ಆಗಮಿಸಿದ ಭಕ್ತರು ಅಷ್ಟೋತ್ತರ ಪಾರಾಯಣದ ಮೂಲಕ ಮಂತ್ರಗಳ ಪಠನೆಯನ್ನು ಮಾಡಿದರು.

ವೃಂದಾವನ ಪುನರ್ ಪ್ರತಿಷ್ಠಾನ ನಿರ್ಮಾಣ ಕಾರ್ಯಕ್ಕೆ ಮುಂಬೈನ ಆರ್ಕಿಟೆಕ್ ನೀರಜ್ ರನ್ನು ಕರೆಸಲಾಗಿತ್ತು. ಹಂಪೆಯ ಸುತ್ತಮುತ್ತಲಿನ ಪರಿಸರ ಬಗ್ಗೆ ಹಾಗೂ ಅಲ್ಲಿನ ಸ್ಮಾರಕಗಳ ಬಗ್ಗೆ ಅಧ್ಯಯನ ನಡೆಸಿರುವ ನೀರಜ್ ಗುರುವಾರದಿಂದಲೇ ಬಿಡುವಿಲ್ಲದೇ, ವೃಂದಾವನ ಪುನರ್ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದರು.

ವೃಂದಾವನದ ಸುತ್ತಲೂ ಕಲಾಕೃತಿಗಳ ಕೆತ್ತನೆಯನ್ನು ಮಾಡಲು ತಮಿಳು ನಾಡಿನ ವೇಲೂರಿನಿಂದ ವಿಶೇಷ ಶಿಲ್ಪಿಗಳನ್ನು ಕರೆಸಲಾಗಿತ್ತು. ರಾಘವ ಪ್ರಭ ಎಂಬುವವರ ಐದು ಜನರ ತಂಡ ವೃಂದಾವನದ ಸುತ್ತಲೂ ಇರುವ ಕಲಾಕೃತಿಗಳ ಕೆತ್ತನೆ ಕಾರ್ಯವನ್ನು ಮಾಡಿತು.

ವ್ಯಾಸರಾಜರ ವೃಂದಾವನ ಪುನರ್ ಪ್ರತಿಷ್ಠಾನಕ್ಕೆ ಪೇಜಾವರ, ಮಂತ್ರಾಲಯ, ಉತ್ತರಾಧಿ ಮಠಾಧೀಶರು ಉಸ್ತುವಾರಿ
ವಹಿಸಿದ್ದರು. ಪುನರ್ ನಿರ್ಮಾಣ ಕಂಡು ಲಕ್ಷಾಂತರ ಭಕ್ತರು ಹರ್ಷಚಿತ್ತರಾದರು.

ವೃಂದಾವನ ಧ್ವಂಸದ ಸುದ್ದಿ ತಿಳಿದು ಇಲ್ಲಿಗೆ ಧಾವಿಸಿದ ಮಂತ್ರಾಲಯ ರಾಘವೇಂದ್ರ ಮಠದ ಸುಬುಧೇಂದ್ರ ತೀರ್ಥರು, ಸೋಸಲೆ ಮಠದ ವಿದ್ಯಾಶ್ರೀಶ ತೀರ್ಥರು, ಉತ್ತರಾದಿ ಮಠದ ಸತ್ಯಾತ್ಮತೀರ್ಥರು, ಉಡುಪಿಯ ಪೇಜಾವರ ಶ್ರೀಗಳು ವ್ಯಾಸರಾಜರ ವೃಂದಾವನ ಪುನರ್ ಪ್ರತಿಷ್ಠಾನ ಕಾರ್ಯಕ್ಕೆ ಚಾಲನೆ ನೀಡಿದ್ದರು.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...