vokkaliga ಡಿಕೆಶಿ ಬಿಡುಗಡೆ ಒತ್ತಾಯಿಸಿ ಬೀದಿಗಿಳಿದ ಒಕ್ಕಲಿಗ ಸಮುದಾಯ

vokkaliga
former minister dk shivakumar

vokkaliga ಮೈಸೂರಿನಲ್ಲಿ ಸೋಮವಾರ, ಬೆಂಗಳೂರಿನಲ್ಲಿ ಬುಧವಾರ ಡಿಕೆಶಿ ಬಂಧನ ವಿರುದ್ಧ ಪ್ರತಿಭಟನೆ

ಬೆಂಗಳೂರು: ಮಾಜಿ ಸಚಿವ ಡಿಕೆ ಶಿವಕುಮಾರ್‍ ಅವರ ಬಂಧನವನ್ನು ವಿರೋಧಿಸಿ ( vokkaliga ) ಒಕ್ಕಲಿಗ ಸಮುದಾಯ ಸೋಮವಾರ ಬೀದಿಗಿಳಿದು ಪ್ರತಿಭಟನೆ ನಡೆಸಿತು. ಮೈಸೂರು ಹಾಗೂ ಇತರ ಕೆಲವೆಡೆ ಒಕ್ಕಲಿಗ ಸಮುದಾಯದ ಮುಖಂಡರು ಪ್ರತಿಭಟನೆ ನಡೆಸಿ ಡಿಕೆಶಿ ಶೀಘ್ರ ಬಿಡುಗಡೆಗೆ ಒತ್ತಾಯಿಸಿದರು.

ಇದನ್ನೂ ಓದಿ: ಕೈ-ದಳ ನಾಯಕರನ್ನು ಒಂದುಗೂಡಿಸಿದ ಡಿಕೆಶಿ ಬಂಧನ

ಡಿಕೆಶಿ ಬಂಧನ‌ ಖಂಡಿಸಿ ಮೈಸೂರಿನಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಮೈಸೂರಿನ ಕೋಟೆ ಆಂಜನೇಯ ಸ್ವಾಮಿ ದೇವಾಲಯದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ವಿವಿಧ ಪ್ರದೇಶಗಳಿಂದ ಆಗಮಿಸಿದ್ದ ಡಿಕೆಶಿ ಬೆಂಬಲಿಗರು ಮತ್ತು ಸಮುದಾಯದ ಪ್ರಮುಖರು ಪ್ರತಿಭಟನ ಮೆರವಣಿಗೆ ನಡೆಸಿದರು.

ಈ ದೇಶದ ಕಾನೂನು ದುರುಪಯೋಗ ಈ ಪ್ರಾಮಾಣದಲ್ಲಿ ಯಾರು ಮಾಡಿಲ್ಲ. ಡಿಕೆಶಿ ಪ್ರಕರಣದ ಹಿಂದೆ ಪೊಲಿಟಿಕಲ್ ಮೋಟಿವ್ ಇದೆ. ಅವರ ತಂದೆ ಕಾರ್ಯಕ್ಕೆ ಅವಕಾಶ ಕೊಡದ ಬಿಜೆಪಿಗರು ಹಿಂದೂತ್ವದ ಬಗ್ಗೆ ಮಾತನಾಡ್ತಾರೆ ಬಿಜೆಪಿಗರು ಎಂದು ಸಮುದಾಯದ ಮುಖಂಡ ಡಾ. ರವೀಂದ್ರ ಹೇಳಿದರು.

ಡಿಕೆಶಿ ತನಿಖೆಗೆ ಸ್ಪಂದಿಸಿದ್ರು ಯಾಕೆ ಬಂದನ? ಡಿಕೆಶಿ ಪ್ರಕರಣದಲ್ಲಿ ಪೆನಾಲ್ಟಿ ಅಫೆನ್ಸ್ ಇದೆ ಆದ್ರೂ ಬಂದನ ಮಾಡಲಾಗಿದೆ. ಇದಕ್ಕೆ ಬಿಜೆಪಿ ತಕ್ಕ ಬೆಲೆ ತೆರಲಿದೆ. ರಾಜ್ಯದಲ್ಲಿ ಬಿಜೆಪಿ ಹೀನಾಯವಾಗಿ ಅವನತಿ ಹೊಂದಲಿದೆ ಎಂದು ಡಾ. ರವೀಂದ್ರ ಹೇಳಿದರು.

ಇದೇ ರೀತಿ ಬೆಂಗಳೂರಿನಲ್ಲಿ ಸಹ ಬುಧವಾರ ನ್ಯಾಷನಲ್ ಕಾಲೇಜು ಮೈದಾನದಿಂದ ರಾಜಭವನದವರೆಗೆ ಸಮುದಾಯದ ವತಿಯಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದ.

ಈ ಮಧ್ಯೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಡಿಕೆಶಿ ಅವರ ಬಿಡುಗಡೆಗೆ ಹರಕೆ ನಿಮಿತ್ತ ಕೊಲ್ಲೂರಿನ ಮೂಕಾಂಬಿಕೆಯ ಸನ್ನಿಧಿಯಲ್ಲಿ ಚಂಡಿಕಾ ಹೋಮ ಮಾಡಿಸಿದರು.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...