vodafone ವೋಡಾಫೋನ್: ಶೀಘ್ರವೇ ಇಂಡಿಯಾದಿಂದ ’ಓಡೋ’ಫೋನ್, ಚಂದಾದಾರರಿಗೆ ಚೊಂಬು

vodafone
vodafone outlet

vodafone ಚಂದಾದಾರರೇ ಹುಷಾರ್‍! ಭಾರತದಿಂದ ಕಾಲ್ಕೀಳಲು ಸಜ್ಜಾಗಿದೆ ವೊಡಾಫೋನ್

ಮುಂಬೈ: ದೇಶದ ಅಗ್ರಮಾನ್ಯ ಟೆಲಿಕಾಂ ಕಂಪೆನಿಗಳಲ್ಲಿ ( vodafone ) ಒಂದಾಗಿರುವ ವೋಡಾಫೋನ್ ಭಾರತದಿಂದ ’ಓಡೋ’ಫೋನ್ ಆಗುವ ದಿನಗಳು ದೂರವಿಲ್ಲ.

ಇದನ್ನೂ ಓದಿ: ನಿಮ್ಮ ಮನೆಯ ಚಿನ್ನದ ಮೇಲೆ ಮೋದಿ ಸರಕಾರದ ಕಣ್ಣು

ದಿನದಿಂದ ದಿನಕ್ಕೆ ಬೆಟ್ಟದಂತೆ ಬೆಳೆಯುತ್ತಿರುವ ನಷ್ದದ ಭಾರತದಿಂದ ತಪ್ಪಿಸಿಕೊಳ್ಳಲು ವೋಡಾಫೋನ್ ಭಾರತದಿಂದಲೇ ಕಾಲ್ಕೀಳುವ ಸಿದ್ಧತೆಯಲ್ಲಿದ್ದು, ಲಕ್ಷಾಂತರ ಚಂದಾದಾರರ ಕೈಗೆ ಚೊಂಬು ನೀಡುವುದು ಪಕ್ಕಾ ಎಂದು ವರದಿಗಳು ಖಚಿತಪಡಿಸಿವೆ.

ಇತ್ತೀಚೆಗೆ ಸುಪ್ರೀಂ ಕೋರ್ಟ್‌ ನಿಡಿರುವ ತೀರ್ಪು ಮೊದಲೇ ಬಸವಳಿದಿರುವ ಕಂಪೆನಿಗೆ ಮರ್ಮಾಘಾತ ನೀಡಿದೆ. ಖಾಸಗಿ ಟೆಲಿಕಾಂ ಕಂಪೆನಿಗಳು ಸರಕಾರಕ್ಕೆ ಅಂತರ ಸಂಪರ್ಕ ಶುಲ್ಕ ಪಾವತಿಸಲೇ ಬೇಕು ಎಂದು ತೀರ್ಪು ಹೇಳಿದ್ದು ಇದರಿಂದ ವೋಡಾಫೋನ್‌ ತಲೆ ಮೇಲೆ 28 ಸಾವಿರ ಕೋಟಿ ರೂಗಳ ಹೆಚ್ಚುವರಿ ಖರ್ಚನ್ನು ಹೊರಿಸಲಿದೆ.

ಇದರರ ಜೊತೆಗೆ ಚಾಂದಾದಾರರ ಸಂಖ್ಯೆಯಲ್ಲಿ ಇಳಿಮುಖ ಮತ್ತು ಹೊಸ ಚಂದಾದಾರರ ಕೊರತೆ ವೊಡಾಫೋನ್ ಕಂಪೆನಿಯನ್ನು ಹೈರಾಣಾಗಿಸಿದೆ. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕಂಪೆನಿ ಯಾವಾಗ ಬೇಕಾದರೂ ಬೀಗ ಹಾಕಿ ಹೋಗಬಹುದಾದ ಪರಿಸ್ಥಿತಿ ಇದೆ ಎನ್ನಲಾಗಿದೆ.

ವಹಿವಾಟು ವೃದ್ಧಿ ದೃಷ್ಟಿಯಿಂದ ವೊಡಾಫೋನ್ ಕಂಪೆನಿಯು ಐಡಿಯಾ ಜೊತೆ ಕೈಜೋಡಿಸಿತ್ತಾದರೂ ಇದರಿಂದ ಯಾವುದೇ ನಿರೀಕ್ಷತ ಪ್ರಯೋಜನ ಕಾಣಲಿಲ್ಲ. ಕಳೆದ ತ್ರೈಮಾಸಿಕದಲ್ಲಿ ಕಂಪೆನಿಯು 4.067 ಕೋಟಿ ರೂಗಳ ನಷ್ಟ ಅನುಭವಿಸಿತ್ತು ಎಂದು ಇಂಡಿಯಾ ಟುಡೆ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...