vizag test ರೋಹಿತ್ ಮತ್ತೊಂದು ಶತಕ, ಭಾರತಕ್ಕೆ ಜಯದ ತವಕ

rohit double
double ton up rohit

vizag test ಮೊದಲ ಟೆಸ್ಟ್, ಎರಡನೇ ಇನಿಂಗ್ಸ್: ರೋಹಿತ್ 127, 4/323 ಡಿ., ಆಫ್ರಿಕಾ 1/11. ಗುರಿ 395

ವಿಶಾಖಪಟ್ಟಣ: ಆರಂಭಿಕನಾಗಿ ಕಣಕ್ಕಿಳಿದ ಮೊದಲ ಪಂದ್ಯದಲ್ಲಿಯೇ ( vizag test ) ಎರಡು ಶತಕ ದಾಖಲಿಸಿದ ರೋಹಿತ್ ಶರ್ಮಾ ಅವರ ಭರ್ಜರಿ ಆಟದ ನೆರವಿನಿಂದ ಭಾರತ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟೆಸ್ ಪಂದ್ಯದಲ್ಲಿ ಬಿಗಿ ಹಿಡಿತ ಸಂಪಾದಿಸಿದೆ.

ಇದನ್ನೂ ಓದಿ: ಮೊದಲ ಟೆಸ್ಟ್: ಅಶ್ವಿನ್‌ಗೆ 5, ಮುನ್ನಡೆಯತ್ತ ಭಾರತ

ಭಾರತದ 502 ರನ್‌ಗಳ ಮೊದಲ ಸರದಿಗೆ ಉತ್ತರವಾಗಿ ಆಫ್ರಿಕಾ 431 ರನ್ ಗಳಿಸಿತು. 71 ರನ್ನುಗಳ ಮುನ್ನಡಯಿಂದಿಗೆ ಕಣಕ್ಕಿಳಿದ ಭಾರತ ರೋಹಿತ್ ಶರ್ಮಾ ಅವರ ಭರ್ಜರಿ ಶತಕದ ನೆರವಿನಿಂದ ನಾಲ್ಕು ವಿಕೆಟ್ ನಷ್ಟಕ್ಕೆ 323 ರನ್ ಗಳಿಸಿ ಘೋಷಿಸಿಕೊಂಡಿತು.

ಪಂದ್ಯ ಗೆಲ್ಲಲು 395 ರನ್ ಗಳಿಸಬೇಕಾದ ಗುರುತರ ಸವಾಲು ಎದುರಿಸಿರುವ ದಕ್ಷಿಣ ಆಫ್ರಿಕಾ ತಂಡ ನಾಲ್ಕನೇ ದಿನದಾಟದ ಅಂತ್ಯಕ್ಕೆ ಮೊದಲ ಸರದಿಯ ಶತಕಧಾರಿ ಡೀನ್ಲ್ಗಾ ಎಲ್ಗಾರ್ ಅವರ ವಿಕೆಟ್ ಕಳೆದುಕೊಂಡು 11 ರನ್ ಗಳಿಸಿತ್ತು.

ಇದಕ್ಕೆ ಮುನ್ನ ಭಾರತದ ಎರಡನೇ ಸರದಿ ಸಂಪೂರ್ಣವಾಗಿ ರೋಹಿತ್ ಮಯವಾಗಿತ್ತು ಎಂದರೆ ತಪ್ಪಲ್ಲ. ಅವರಸರದಲ್ಲಿ ರನ್ ಗಳಿಸಬೇಕಾದ ಅನಿವಾರ್‍ಯತೆ ಮನಗಂಡ ರೋಹಿತ್ ಮೊದಲ ಎಸೆತದಿಂದಲೇ ಆಕ್ರಮಣಕ್ಕೆ ಮುಂದಾದರು.

ಕೇವಲ 149 ಎಸೆತಗಳಲ್ಲಿ 127 ಸಿಡಿಸಿದ ರೋಹಿತ್ ಶರ್ಮಾ ಅವರ ಶತಕದಲ್ಲಿ 10 ಬೌಂಡರಿ ಹಾಗೂ 7 ಭರ್ಜರಿ ಸಿಕ್ಸರ್‍ ಒಳಗೊಂಡಿತ್ತು. ಮೊದಲ ಸರದಿಯಲ್ಲಿ ಆರು ಸಿಕ್ಸರ್‍ ಬಾರಿಸಿದ್ದ ರೋಇತ್ ಪಂದ್ಯವೊಂದರಲ್ಲಿ ಅತಿ ಹೆಚ್ಚು ಸಿಕ್ಸರ್‍ ದಾಖಲೆಯನ್ನೂ ಬರೆದರು.

ಮಾಯಂಕ್ ಕೇವಲ 7 ರನ್ ಮಾಡಿ ನಿರ್ಗಮಿಸಿದ ನಂತರ ಪೂಜಾರ 81 ರನ್ ಮಾಡಿ ರೋಹಿತ್‌ಗೆ ಉತ್ತಮ ಸಾಥ್ ನೀಡಿದರು. ಉಳಿದಂತೆ ಜಡೇಜಾ 40, ನಾಯಕ ಕೊಹ್ಲಿ 31 ಹಾಗೂ ರಹಾನೆ 27 ರನ್ ಮಾಡಿದರು.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...