virat century ಕೊಹ್ಲಿ ದಾಖಲೆ ಶತಕ: ವಿಂಡೀಸ್ ತಕಧಿಮಿತ

virat century
centurion captain kohli

virat century ದಾದಾ ಗಂಗೂಲಿ ದಾಖಲೆ ಮುರಿದ ಕೊಹ್ಲಿ, ವಿಂಡೀಸ್‌ಗೆ 69 ರನ್ ಸೋಲು

ಗಯಾನಾ: ನಾಯಕ ವಿರಾಟ್ ಕೊಹ್ಲಿ ಪರಮಾಧ್ಭುತ, ದಾಖಲೆಯ ಶತಕದ ( virat century ) ನೆರವಿನಿಂದ ಭಾರತ ಎರಡನೇ ಏಕದಿನ ಪಂದ್ಯದಲ್ಲಿ ಆತಿಥೇಯ ವೆಸ್ಟ್ ಇಂಡೀಸ್ ವಿರುದ್ಧ ಅಧಿಕಾರಯುತ ಜಯ ದಾಖಲಿಸಿದೆ.

ಇದನ್ನೂ ಓದಿ: ತಕ್ಷಣ 3 ಸಾವಿರ ಕೋಟಿ ಕೊಡಿ ಎಂದ ಬಿಎಸ್ವೈ: ಖಚಿತ ಭರವಸೆ…

ಟಾಸ್ ಗೆದ್‌ಉ ಮೊದಲು ಬ್ಯಾಟ್ ಮಾಡಿದ ಭಾರತ ನಾಯಕ ಕೊಹ್ಲಿ ಅವರ 42ನೇ ಶತಕ (120) ಮತ್ತು ಶ್ರೇಯಸ್ ಅಯ್ಯರ್ ಗಳಿಸಿದ 71 ರನ್‌ಗಳ ನೆರವಿನಿಂದ ನಿಗದಿತ 50 ಓವರುಗಳಲ್ಲಿ 7 ವಿಕೆಟ್ ಕಳೆದುಕೊಂಡು 279 ರನ್ ಗಳಿಸಿತು.

ಗೆಲ್ಲಲು 280 ರನ್ ಸವಾಲು ಬೆನ್ನತ್ತಿದ ವೆಸ್ಟ್ ಇಂಡೀಸ್ ತಂಡವು 42 ಓವರುಗಳಲ್ಲಿ 210 ರನ್ನುಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡು ಸೋಲನುಭವಿಸಿತು. ಆರಮಭಿಕ ಲೂಯಿಸ್ 65 ಹಾಗೂ ಪೂರಣ್ 42 ರನ್ ಗಳಿಸಿದ್ದು ಬಿಟ್ಟರೇ ಉಳಿದವರಾರೂ ವಿಂಡೀಸ್ ಕೈಹಿಡಿಯಲಿಲ್ಲ. ಭಾರತದ ಪರ ಭುವನೇಶ್ವರ 4 ವಿಕೆಟ್ ಪಡೆದರೇ ಶಮಿ ಹಾಗೂ ಕುಲ್ದೀಪ್ ತಲಾ 2 ವಿಕೆಟ್ ಕಿತ್ತರು.

ಆರಂಭಿಕ ಕ್ರಿಸ್ ಗೇಯ್ಲ್ (11) 10353 ರನ್ ಗಳಿಸುವ ಮೂಲಕ ಅತೀ ಹೆಚ್ಚು ರನ್ ಗಳಿಸಿದ ವಿಂಡೀಸ್ ಆಟಗಾರ ಎಂಬ ಬ್ರಯಾನ್ ಲಾರಾ ದಾಖಲೆ ಮುರಿದರು.

ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯ ಮಳೆಗಾಹುತಿಯಾದ ಕಾರಣ ಈ ಜಯದೊಂದಿಗೆ ಭಾರತ ಆತಿಥೇಯರ ವಿರುದ್ಧ 1-0 ಪಂದ್ಯದ ಮುನ್ನಡೆ ಪಡೆದಿದೆ.

ಇದಕ್ಕೆ ಮುನ್ನ ಮೊದಲು ಬ್ಯಾಟ್ ಮಾಡಿದ ಭಾರತಕ್ಕೆ ಆರಂಭಿಕರು ಕೈಹಿಡಿಯಲಿಲ್ಲ. 101 ರನ್‌ಗೆ 3 ವಿಕೆಟ್ ಕಳೆದುಕೊಂಡಿದ್ದ ತಂಡಕ್ಕೆ ನೆರವಾಗಿದ್ದು ಕೊಹ್ಲಿ ಮತ್ತು ಅಯ್ಯರ್‍. 42ನೇ ಶತಕ ಸಿಡಿಸಿದ ಕೊಹ್ಲಿ 125 ಎಸೆತಗಳಲ್ಲಿ 120 ರನ್ ಗಳಿಸಿದರು.

ದಾದಾ ದಾಖಲೆ ಮುರಿದ ಕೊಹ್ಲಿ

ಈ ಮಧ್ಯೆ ಶತಕ ಬಾರಿಸುವ ಹಾದಿಯಲ್ಲಿ ಕೊಹ್ಲಿ ಮಾಜಿ ನಾಯಕ ಸೌರವ್ ಗಂಗೂಲಿ ದಾಖಲೆ ಮುರಿದರು. ಸಚಿನ್ ತೆಂಡುಲ್ಕರ್ (18,426)ಬಳಿಕ ಗರಿಷ್ಠ ರನ್ ಗಳಿಸಿರುವ ಭಾರತದ ಎರಡನೇ ದಾಂಡಿಗನೆಂಬ ಕೀರ್ತಿಗೆ ಕೊಹ್ಲಿ ಭಾಜನರಾದರು.

ಹಾಲಿ ನಾಯಕ ವಿರಾಟ್ ಕೊಹ್ಲಿ ತಮ್ಮ 238ನೇ ಪಂದ್ಯದಲ್ಲಿ ಗಂಗೂಲಿಯ ಸಾಧನೆಯನ್ನು ಹಿಂದಿಕ್ಕಿದರು. ಗಂಗೂಲಿ 311 ಏಕದಿನ ಪಂದ್ಯಗಳಲ್ಲಿ 11,363 ರನ್ ಗಳಿಸಿದ್ದರು.

ಮತ್ತೊಂದು ತುದಿಯಲ್ಲಿ ಶ್ರೇಯಸ್ ಅಯ್ಯರ್(71) ರನ್ ಬಾರಿಸಿ ನಾಯಕನಿಗೆ ತಕ್ಕ ಸಾಥ್ ನೀಡಿದರು. ಈ ಜೋಡಿ 4ನೇ ವಿಕೆಟ್ ಜೊತೆಯಾಟದಲ್ಲಿ 125 ರನ್ ಸೇರಿಸಿತು. ಈ ಇಬ್ಬರು ಬೇರ್ಪಟ್ಟ ಬಳಿಕ ಯಾವುದೇ ದೊಡ್ಡ ಜೊತೆಯಾಟ ಮೂಡಿಬರಲಿಲ್ಲ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...