vaiko ದೇಶದ್ರೋಹ: ತಮಿಳು ನಾಯಕ ವೈಕೋಗೆ ವರ್ಷದ ಜೈಲುವಾಸ

ಮೇಲ್ಮನವಿ ಸಲ್ಲಿಸಲು ವೈಕೋ ಅವರಿಗೆ ಒಂದು ತಿಂಗಳ ಕಾಲಾವಕಾಶ

vaiko
mdmk leader vaiko

vaiko ಚೆನ್ನೈನ ವಿಶೇಷ ನ್ಯಾಯಾಲಯದಿಂದ ಮಹತ್ವದ ತೀರ್ಪು

ಚೆನ್ನೈ: ದಶಕದ ಹಿಂದೆ ಆಡಿದ್ದ ಮಾತು ತಮಿಳು ನಾಯಕ ವೈಕೋ ಅವರಿಗೆ ( vaiko ) ಈಗ ಮುಳುವಾಗಿದೆ. ಲಂಕಾ ತಮಿಳರ ಬಗ್ಗೆ ಮಾತನಾಡುತ್ತ ಭಾರತ ವಿರೋಧಿ ಹೇಳಿಕೆ ನೀಡಿದ್ದ ಆಧಾರದ ಮೇಲೆ ದೇಶದ್ರೋಹದ ಆರೋಪದಡಿ ಇಲ್ಲಿನ ವಿಶೇಷ ನ್ಯಾಯಾಲಯವು ವೈಕೋಗೆ ವರ್ಷದ ಜೈಲುವಾಸ ಶಿಕ್ಷೆ ವಿಧಿಸಿದೆ.

ಇದನ್ನೂ ಓದಿ: ಮನಮೋಹನ್‌ ಕಚೇರಿ ಸಿಬ್ಬಂದಿ ಕಡಿತ ಮಾಡಿದ ಮೋದಿ ಸರಕಾರ

ದ್ವೀಪರಾಷ್ಟ್ರದಲ್ಲಿ ಎಲ್ಟಿಟಿಇ ಉಗ್ರಗಾಮಿಗಳ ವಿರುದ್ಧ ಲಂಕಾ ಯುದ್ಧ ಸಾರಿದ್ದ ಸಂದರ್ಭದಲ್ಲಿ ಸ್ಥಳೀಯ ಕಾರ್‍ಯಕ್ರಮದಲ್ಲಿ ಮಾತನಾಡಿದ್ದ ವೈಕೋ ಈ ಯುದ್ಧ ನಿಲ್ಲದಿದ್ದರೇ ಭಾರತ ಇಡಿಯಾಗಿ ಉಳಿಯದು ಎಂದು ಗುಡುಗಿದ್ದರು.

ವೈಕೋ ಅವರ ಈ ಮಾತುಗಳನ್ನು ವಿರೋಧಿಸಿ ಅವರ ವಿರುದ್ಧ ಡಿಎಂಕೆ ಪ್ರಕರಣ ದಾಖಲಿಸಿತ್ತಲ್ಲದೆ, ಅವರು ಭಾರತದ ಸಾರ್ವಭೌಮತೆಯ ವಿರುದ್ಧ ಮಾತನಾಡಿದ್ದಾರೆಂದು ಆರೋಪಿಸಿತ್ತು. ವಿಪರ್‍ಯಾಸವೆಂದರೆ ಈಗ ಅದೇ ಡಿಎಂಕೆಯು ತನ್ನ ಕೋಟಾದಡಿ ವೈಕೋ ಅವರನ್ನು ರಾಜ್ಯಸಭೆಗೆ ಕಳುಹಿಸುತ್ತಿದೆ!

ಈ ತೀರ್ಪು ನೀಡಿದ ನ್ಯಾಯಾಧೀಶರ ವಿರುದ್ಧವೇ ವೈಕೋ ವಾಗ್ದಾಳಿ ನಡೆಸಿದ್ದಾರೆ. ನ್ಯಾಯಧೀಶರು ಪೀತ ಉದ್ದೇಶ ಹೊಂದಿರುವವರು ಎಂದೆನಿಸುತ್ತದೆ ಎಂದು ಟೀಕಿಸಿದ್ದಾರೆ. ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ವೈಕೋ ಅವರಿಗೆ ನ್ಯಾಯಲಯವು ಒಂದು ತಿಂಗಳ ಕಾಲಾವಕಾಶ ನೀಡಿದೆ.

ಎರಡು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದ ವೈಕೋ ಮೂರು ಬಾರಿ ರಾಜ್ಯಸಭಾ ಸದಸ್ಯರಾಗಿಯೂ ಸಂಸತ್ತಿನಲ್ಲಿ ತಮಿಳುನಾಡನ್ನು ಪ್ರತಿನಿಧಿಸಿದ್ದಾರೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...