united nations ದಿವಾಳಿಯತ್ತ ಸಾಗಿದೆ ವಿಶ್ವಸಂಸ್ಥೆ

united nations
united nations hq

united nations ಸಂಬಳ-ಸಾರಿಗೆಗೂ ವಿಶ್ವಸಂಸ್ಥೆ ಬಳಿ ದುಡ್ಡಿಲ್ಲ

ಜಿನಿವಾ: ಜಗತ್ತಿನ ಎಲ್ಲ ದೇಶಗಳನ್ನೂ ತನ್ನ ಸದಸ್ಯತ್ವದ ಯಾದಿಯಲ್ಲಿ ( united nations) ಇರಿಸಿಕೊಂಡಿರುವ ವಿಶ್ವಸಂಸ್ಥೆಯ ಖಜಾನೆ ಖಾಲಿಯಾಗುತ್ತಿದ್ದು ದಿವಾಳಿತನದತ್ತ ಸಾಗಿದೆ.

ಇದನ್ನೂ ಓದಿ: ಭಾರತದ ಕೈಸೇರಿತು ಸ್ವಿಸ್ ಬ್ಯಾಂಕ್ ಕಾಳಕುಬೇರರ ಪಟ್ಟಿ

ಈ ಮಾಸಾಂತ್ದವರೆಗೆ ನಡೆಸುವಷ್ಟು ಮಾತ್ರ ದುಡ್ಡಿದ್ದು, ಹಣಕಾಸಿನ ನೆರವು ಬಾರದಿದ್ದರೇ ಸಂಬಳ ಸಾರಿಗೆಗೂ ಖಜಾನೆಯಲ್ಲಿ ಕಾಸಿಲ್ಲ ಎಂದು ವಿಶ್ವಸಂಸ್ಥೆ ಮುಖ್ಯಸ್ಥ ಆಂಟೊನಿಯೋ ಗುಟೆರೆಸ್ ಅವರು ಸಿಬ್ಬಂದಿಗೆ ಬರೆದಿರುವ ಪತ್ರದಲ್ಲಿ ಹೇಳಿದ್ದಾರೆ.

ವಿಶ್ವಸಂಸ್ಥೆಯ ಪರವಾಗಿ ಸುಮಾರು 37 ಸಾವಿರ ಮಂದಿ ಕರ್ತವ್ಯ ನಿರ್ವಹಣೆ ಮಾಡುತ್ತಾರೆ. ಸದ್ಯ ವಿಶ್ವಸಂಸ್ಥೆ 23 ಕೋಟಿ ರೂಗಳ ಕೊರತೆಯಲ್ಲಿದೆ ಎಂದು ಹೇಳಲಾಗಿದೆ.

ಸದಸ್ಯ ದೇಶಗಳಿಂದ ಬರಬೇಕಾದ ಅನುದಾನದ ಶೇ. 70ರಷ್ಟು ಬಾಕಿ ಇರುವ ಕಾರಣ ವಿಶ್ವಸಂಸ್ಥೆಗೆ ತೀವ್ರ ಆರ್ಥಿಕ ಸಂಕಷ್ಟ ಎದುರಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಹಣಕಾಸಿನ ಕೊರತೆಯ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆಯ ಹಲವಾರು ಸಭೆ ಸಮಾರಂಭಗಳನ್ನು ಸದ್ಯದ ಮಟ್ಟಿಗೆ ಮುಂದೂಡಲಾಗಿದ್ದು, ಅಧಿಕಾರಿಗಳ ಓಡಾಟದ ಮೇಲೆಯೂ ನಿರ್ಬಂಧ ವಿಧಿಸಲಾಗಿದೆ ಎಂದು ಗುಟರೆಸ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...