uddhav thackeray ಮಹಾರಾಷ್ಟ್ರದಲ್ಲಿನ್ನು ಠಾಕ್ರೆ ಶಾಹಿ

sena uturn
sena chief uddhav

uddhav thackeray ಉದ್ಧವ್ ಠಾಕ್ರೆ ನೂತನ ಮಹಾ ಸಿಎಂ

ಮುಂಬೈ: ಮಹಾರಾಷ್ಟ್ರದಲ್ಲಿ ಇದೇ ಮೊದಲ ಬಾರಿಗೆ ಠಾಕ್ರೆ ಕುಟುಂಬದವರು ( uddhAv thackeray ) ಮುಖ್ಯಮಂತ್ರಿ ಆಗಲಿದ್ದಾರೆ. ಕಾಂಗ್ರೆಸ್-ಎನ್ಸಿಪಿ ಮತ್ತು ಶಿವಸೇನೆಯ ಜಂಟಿ ಶಾಸಕಾಂಗ ಪಕ್ಷದ ನಾಐಕರಾಗಿ ಉದ್ಧವ್ ಠಾಕ್ರೆ ಆಯ್ಕೆಯಾಗಿದ್ದು ನೂತ ಸರಕಾರ ರಚಿಸಲು ರಾಜ್ಯಪಾಲರ ಬಳಿ ಹಕ್ಕು ಮಂಡಿಸಿದ್ದಾರೆ.

ಇದನ್ನೂ ಓದಿ: ಅಲ್ಪಮತದ ಸರಕಾರ: ವರ್ಷದಲ್ಲಿ ಎರಡು ಬಾರಿ ಬಿಜೆಪಿಗೆ ಮುಖಭಂಗ

ಸುಪ್ರೀಂ ಕೋರ್ಟ್‌ ತೀರ್ಪಿನಂತೆ ಬುಧವಾರ ನೂತನ ಶಾಸಕರ ಪ್ರಮಾಣವಚನದ ನಂತರ ಸಂಜೆ ವೇಳೆಗೆ ಉದ್ಧವ್ ಠಾಕ್ರೆ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಲಿದ್ದಾರೆ. ಬುಧವಾರ ಬೆಳಗ್ಗೆ 8 ಗಂಟೆಗೆ ವಿಧಾಸಭೆ ಸಮಾವೇಶಗೊಳ್ಳಲಿದೆ.

ಬುಧವಾರವೇ ಬಹುಮತ ಸಾಬೀತು ಮಾಡುವಂತೆ ಸುಪ್ರೀಂ ಕೋರ್ಟು ತೀರ್ಪು ನೀಡಿದ ನಂತರ ಮೊದಲು ಡಿಸಿಎಂ ಅಜಿತ್ ಪವಾರ್‍ ಹಾಗೂ ಬಳಿಕ ಸಿಎಂ ಹುದ್ದೆಗೆ ದೇವೇಂದ್ರ ಫಡ್ನವಿಸ್ ರಾಜೀನಾಮೆ ನೀಡುವುದರೊಂದಿಗೆ ಬಿಜೆಪಿ ದುಸ್ಸಾಹಸ ನಾಲ್ಕೇ ದಿನಕ್ಕೆ ಅಂತ್ಯಗೊಂಡಿತ್ತು.

ಬಳಿಕ ಮಂಗಳವಾರ ನಡೆದ ಮೂರು ಪಕ್ಷಗಳ ಮೈತ್ರಿಕೂಟದ ಶಾಸಕಾಂಗ ಸಭೆಯಲ್ಲಿ ಉದ್ಧವ್ ಠಾಕ್ರೆ ಅವರನ್ನು ಸರ್ವಾನುಮತದಿಂದ ನಾಯಕರನ್ನಾಗಿ ಆರಿಸಲಾಯಿತು. ಉದ್ಧವ್ ಅವರೊಂದಿಗೆ ಕಾಂಗ್ರೆಸ್ ಮತ್ತು ಎನ್ಸಿಪಿಯಿಂದ ತಲಾ ಒಬ್ಬರು ಡಿಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುವ ಮಾತಿದೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...