ಏನಿದು ಹೊಸ ಕೇಬಲ್ ಟಿವಿ ಮತ್ತು ಡಿಟಿಹೆಚ್ ನಿಯಮ?

ಬೆಂಗಳೂರು: ಡಿಸೆಂಬರ್ 29ರಿಂದ ಬದಲಾಗುತ್ತದೆ ಎಂಬ ಕೇಬಲ್‌ ಟಿವಿ ದರ ವ್ಯವಸ್ಥೆ ಜಾರಿಯನ್ನು ಜನವರಿ 31ರ ವರೆಗೆ ವಿಸ್ತರಿಸಲಾಗಿದೆ ಎಂದು ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್‌) ತಿಳಿಸಿದೆ.

ಡಿ.29ರ ಬದಲಿಗೆ ಜನವರಿ 31, 2019ರವರೆಗೆ ಗ್ರಾಹಕರು ತಮ್ಮ ನೆಚ್ಚಿನ ಚಾನೆಲ್ ಆಯ್ಕೆ ಮಾಡುವ ಅವಕಾಶ ಸಿಗಲಿದೆ. ನೂತನ ಕೇಬಲ್‌ ಟಿವಿ ವ್ಯವಸ್ಥೆ ಬಗ್ಗೆ ಸಾರ್ವಜನಿಕರಲ್ಲಿ ಇನ್ನೂ ಅರಿವಿನ ಕೊರತೆ ಇದ್ದು, ಇನ್ನೂ ಗೊಂದಲದಲ್ಲಿದ್ದಾರೆ ಎಂಬ ಕಾರಣಕ್ಕೆ, ನೂತನ ಕೇಬಲ್‌ ಟಿವಿ ದರ ವ್ಯವಸ್ಥೆ ಜಾರಿಯನ್ನು ಜನವರಿ 31ರ ವರೆಗೆ ವಿಸ್ತರಿಸಲಾಗಿದೆ ಎಂದು ಟ್ರಾಯ್‌ ಕಾರ್ಯದರ್ಶಿ ಎಸ್.ಕೆ ಗುಪ್ತ ಅವರು ತಿಳಿಸಿದ್ದಾರೆ.

tv channels

ಗ್ರಾಹಕರು ತಾವು ವೀಕ್ಷಿಸುವ ಚಾನೆಲ್‌ಗಳಿಗೆ ಮಾತ್ರ ಹಣ ಪಾವತಿಸಬೇಕೆಂಬ ನೂತನ ಕೇಬಲ್‌ ಟಿವಿ ದರ ನೂತನ ವ್ಯವಸ್ಥೆ ಜನವರಿ 31 ಜಾರಿಯಾಗಲಿದೆ ಎಂಬ ಮಾಹಿತಿಯನ್ನು ಸಹ ಟ್ರಾಯ್ ನೀಡಿದೆ.

ಕೇಬಲ್ ಹಾಗೂ ಡಿಟಿಹೆಚ್ ನಿಯಮದಲ್ಲಿ ಬದಲಾವಣೆಗೆ ಇನ್ನಷ್ಟು ಸಮಯ ಸಿಕ್ಕಿರುವುದರಿಂದ ಇದು ಗ್ರಾಹಕರಿಗೆ ಶುಭ ಸುದ್ದಿಯಾಗಿದೆ. ಅಲ್ಲದೆ, ಕೇಬಲ್ ಆಪರೇಟರ್ ಗಳಿಗೂ ಪ್ಯಾಕೇಜ್ ಗಳನ್ನು ಸರಿ ಹೊಂದಿಸಲು ಇನ್ನಷ್ಟು ಸಮಯ ಸಿಕ್ಕಿದೆ.

ಏನಿದು ಹೊಸ ಕೇಬಲ್ ಮತ್ತು ಡಿಟಿಹೆಚ್ ನಿಯಮ?

ಈ ಮೊದಲು ಕೇಬಲ್ ಮತ್ತು ಡಿಟಿಹೆಚ್‌ ಮಾಲಿಕರು ಹಣ ನಿಗದಿ ಮಾಡುತ್ತಿದ್ದರು. ಆದರೆ, ಈಗ ಪ್ರಸಾರ ಸಂಸ್ಥೆಗಳು ಪ್ರತಿ ಚಾನೆಲ್‌ ಅನ್ನೂ ಬಿಡಿಯಾಗಿ ವಿತರಕರಿಗೆ ನೀಡುವಂತಹ ಆಯ್ಕೆಯನ್ನು ಈ ತರಲಾಗಿದೆ. ಇದರಿಂದ, ಟಿವಿ ಗ್ರಾಹಕ ತನಗೆ ಬೇಕಾದ ಒಂದು ಚಾನೆಲ್‌ ಪಡೆಯಲು ಇಡೀ ಗುಂಪನ್ನು ಅಥವಾ ಪ್ರೀಮಿಯಂ ಚಾನೆಲ್‌ಗ‌ಳ ಸಮೂಹವನ್ನು ಕೊಳ್ಳುವುದರಿಂದ ಪಾರಾಗಬಹುದಾಗಿದ್ದು, ತನ್ನ ಇಚ್ಚೆಯ ಟಿವಿ ಚಾನಲ್ ಅನ್ನು ಚಾನಲ್‌ಗೆ ಹಣನೀಡಿ ನೋಡಬಹುದಾಗಿದೆ. ಈಗ ಇದು ಜನವರಿ 31 ರಿಂದ ಜಾರಿಯಾಗುತ್ತಿದೆ.

ಈವರೆಗೆ ಗ್ರಾಹಕರು 250ರಿಂದ 300 ರೂಪಾಯಿ ರಿಚಾರ್ಜ್ ಮಾಡುತ್ತಿದ್ದರು. ಆದರೆ, ಈಗ ದೂರದರ್ಶನದ ಉಚಿತ ಚಾನೆಲ್‌ಗಳು ಸೇರಿದಂತೆ 100 ಚಾನೆಲ್‌ಗಳ ಪ್ಯಾಕೆಜ್‌ಗೆ 184ರು ಗಿಂತ ಹೆಚ್ಚಿನ ಮೊತ್ತವಾಗುವುದಿಲ್ಲ. ಅಲ್ಲದೆ, ಕೇಬಲ್ ಅಪರೇಟರ್‌ಗಳು ಸೆಟ್‌ಅಪ್ ಬಾಕ್ಸ್ ಅಳವಡಿಕೆ, ಶುಲ್ಕವನ್ನು 500 ರುಗಿಂತ ಹೆಚ್ಚಿಗೆ ಪಡೆಯುವಂತಿಲ್ಲ ಎಂದು ಟ್ರಾಯ್ ಎಚ್ಚರಿಕೆ ನೀಡಿದೆ.

ಗ್ರಾಹಕರಿಗೆ ಅನಗತ್ಯ ಚಾನೆಲ್ ಕಿರಿಕಿರಿಯನ್ನು ತಪ್ಪಿಸಲು ಕೇಂದ್ರ ಸರ್ಕಾರ ಹೊಸ ನೀತಿ ಜಾರಿಗೆ ತರುತ್ತಿದೆ. ಇದರ ಅನ್ವಯ ಚಾನೆಲ್‌ಗಳ ಆಯ್ಕೆ ಗ್ರಾಹಕದ್ದೇ ಆಗಿರುತ್ತದೆ. ಎಷ್ಟು ಚಾನೆಲ್ ಆಯ್ಕೆ ಮಾಡುತ್ತೀರೋ? ಅಷ್ಟಕ್ಕೆ ಮಾತ್ರ ಹಣ ಪಾವತಿ ಮಾಡಿದರೆ ಸಾಕು.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...