ದಿನ ರಾಶಿ ಭವಿಷ್ಯ, ಬುಧವಾರ, 02-01-2019

ಮೇಷ

ಎಷ್ಟೇ ಹಣ ಇದ್ದರೂ ವ್ಯಾಪಾರ, ವ್ಯವಹಾರಗಳಿಗೆ ಸಾಲದಾಗಬಹುದು. ಹಾಗಂತ ಹಣವನ್ನು ಪರರಿಂದ ಎರವಲು ಪಡೆಯದಿರಿ. ಪಡೆದ ಸಾಲವನ್ನು ತೀರಿಸಲು ನಿಮಗೆ ಕಷ್ಟವಾಗುವುದು. ಗುರುವಿನ ಮೊರೆ ಹೋಗುವುದು ಒಳಿತು.

ವೃಷಭ

ಬಂಧುಮಿತ್ರರನ್ನು ಪ್ರೀತಿಯಿಂದ ಆದರಿಸಬೇಕು ನಿಜ. ಆದರೆ ಅವರಿಗೆ ಪ್ರೀತಿಯನ್ನು ತೋರಿದಲ್ಲಿ ಅವರು ನಿಮ್ಮ ಬಗ್ಗೆ ಇಲ್ಲಸಲ್ಲದ ನಂಜನ್ನೆ ಕಾರುವರು. ಹಾಗಾಗಿ ಎಷ್ಟು ಬೇಕೋ ಅಷ್ಟು ಅವರೊಡನೆ ವ್ಯವಹರಿಸಿ.

rashi bhavishya
rashi bhavishya

ಮಿಥುನ

ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವ ಸಂದರ್ಭ ಎದುರಾಗಲಿದೆ. ಆದರೆ ಇದಕ್ಕೂ ಮುಂಚೆ ಸಂಗಾತಿಯ ಸಲಹೆಯನ್ನು ಸ್ವೀಕರಿಸುವುದು ಒಳ್ಳೆಯದು. ಇಲ್ಲದೆ ಇದ್ದಲ್ಲಿ ಅವರು ಮಧ್ಯ ಪ್ರವೇಶಿಸಿ ಆಗುವ ಕೆಲಸಕ್ಕೆ ಕಲ್ಲು ಹಾಕುವರು.

ಕಟಕ

ಹಣಕಾಸಿನ ಪರಿಸ್ಥಿತಿ ಉತ್ತಮವಾಗಿದೆ. ಆದರೆ ಕೇವಲ ಹಣದಿಂದ ಮಾನಸಿಕ ನೆಮ್ಮದಿಯನ್ನು ಪಡೆಯಲು ಆಗುವುದಿಲ್ಲ. ಮನೋನಿಯಾಮಕ ರುದ್ರದೇವರನ್ನು ಭಜಿಸಿ ಮತ್ತು ಮನೆಯಲ್ಲಿನ ಗುರು, ಹಿರಿಯರ ಆಶೀರ್ವಾದ ಪಡೆಯಿರಿ.

ಇದನ್ನು ಓದಿ: ಹುಷಾರ್‌! ನಿಮ್ಮ ಹುಟ್ಟಿದ ದಿನಾಂಕ ತಿಳಿಸುತ್ತದೆ, ನಿಮಗೆ ಬರಬಹುದಾದ ರೋಗಗಳು!

ಸಿಂಹ

ಯಾವ ಹುತ್ತದಲ್ಲಿ ಯಾವ ಹಾವೋ ಎಂಬ ವಾಸ್ತವವನ್ನು ಅರಿತು ಹೆಜ್ಜೆ ಇಡಿ. ನೀವು ನಡೆಯುವ ದಾರಿ ಸರಿಯಾದದ್ದೇ ಆದರೆ ನಿಮ್ಮ ಆಪ್ತ ಹಿತೈಷಿಗಳು ನಿಮ್ಮ ದಾರಿಗೆ ಅಡ್ಡಬರುವರು. ಇಲ್ಲವೆ ಹಾದಿ ತಪ್ಪಿಸುವರು.

ಕನ್ಯಾ

ಅವಕಾಶಗಳು ನಿಮ್ಮ ಸುತ್ತಲೇ ಗಿರಕಿ ಹೊಡೆಯುತ್ತಿರುವುದು. ಬಹುದಿನದ ಕನಸು ನನಸಾಗುವ ಕಾಲವಿದೆ. ಆದರೆ ಅದನ್ನು ಎದುರಿಸುವ ಧೈರ್ಯವನ್ನು ಸಂಪಾದಿಸಿ. ಧೈರ್ಯಂ ಸರ್ವತ್ರ ಸಾಧನಂ ಎಂಬುದನ್ನು ಮರೆಯದಿರಿ.

ತುಲಾ

ವೃಥಾ ಮನೋವ್ಯಾಕುಲ, ಅಂಜಿಕೆ, ಅಭದ್ರತೆಗಳು ನಿಮ್ಮನ್ನು ಕಾಡುವವು. ಮನೆಯಲ್ಲಿ ಸಕಲ ಸೌಲಭ್ಯಗಳಿದ್ದರೂ ಅದನ್ನು ಅನುಭವಿಸುವ ಯೋಗವಿರುವುದಿಲ್ಲ. ಸಂಗಾತಿಯ ಕುಹಕ ನುಡಿಯು ನಿಮ್ಮ ಆತ್ಮಸ್ಥೈರ್ಯವನ್ನು ಕೆಣಕುವುದು.

ವೃಶ್ಚಿಕ

ಬಂಧುಗಳು, ಸ್ನೇಹಿತರು ನಿಮಗೆ ಸಕಾಲದಲ್ಲಿ ಸಹಾಯ ಮಾಡುವುದಿಲ್ಲ. ಗ್ರಹಗಳ ಸಂಚಾರ ವ್ಯತಿರಿಕ್ತವಾದಾಗ ಸ್ವಂತ ಮಕ್ಕಳೆ ನಿಮ್ಮನ್ನು ದೂರುವರು ಮತ್ತು ಹಣಕಾಸಿನ ನೆರವಿಗಾಗಿ ನಿಮ್ಮನ್ನು ಪೀಡಿಸುವರು. ಆಂಜನೇಯ ಸ್ತೋತ್ರವನ್ನು ಪಠಿಸಿ.

ಧನಸ್ಸು

ನಿಮ್ಮ ಹಲವು ರೀತಿಯ ಪ್ರವಾಸ ಯೋಜನೆಗಳ ಪಟ್ಟಿಯು ಒಂದು ಹಂತಕ್ಕೆ ತಲುಪುವುದು. ಆತ್ಮೀಯ ಸ್ನೇಹಿತರು ನಿಮಗೆ ಸಹಕಾರಿಯಾಗಿ ನಿಲ್ಲುವರು. ವಿವಿಧ ಮೂಲಗಳಿಂದ ಹಣಕಾಸು ಬರುವುದು.

ಮಕರ

ಪ್ರತಿಯೊಬ್ಬರ ಮನೆಯ ದೋಸೆಯೂ ತೂತೇ. ಆದರೆ ಹಾಗಂತ ನಿಮ್ಮ ಮನೆಯ ದೋಸೆಯ ತೂತು ದೊಡ್ಡದಾಗಲು ಬಿಡಬೇಡಿ. ಮನೆ ಸದಸ್ಯರೆಲ್ಲರೂ ಒಂದೆಡೆ ಸೇರಿ ಈಗಿರುವ ಸಮಸ್ಯೆಯ ಪರಿಹಾರಕ್ಕಾಗಿ ಚಿಂತಿಸಿ.

ಕುಂಭ

ಹಣಕಾಸು ವಿಚಾರದಲ್ಲಿ ನಿಮ್ಮ ಎಚ್ಚರದ ಜಾಗೃತೆ ಅವಶ್ಯ. ನಿಮ್ಮ ಸ್ನೇಹಿತರು, ಸಹಪಾಠಿಗಳು ಮತ್ತು ಕಾರ್ಯಕ್ಷೇತ್ರದಲ್ಲಿನ ಸಹೋದ್ಯೋಗಿಗಳ ನೆರವು ನಿಮಗೆ ನಿರಂತರವಾಗಿರುತ್ತದೆ. ನೀವು ನಂಬಿದ ಗುರುಗಳನ್ನು ಅನನ್ಯ ಭಜಿಸಿ.

ಮೀನ

ನೀವು ಆದರಿಸುವ ಜನರಿಂದಲೇ ವಿಶ್ವಾಸದ್ರೋಹ ಆಗುವ ಸಾಧ್ಯತೆ ಇರುತ್ತದೆ. ನಿಮ್ಮನ್ನು ಆಗಂತುಕರು ವಿಪರೀತ ಹೊಗಳಿ ನಿಮ್ಮಿಂದ ದ್ರವ್ಯವನ್ನು ಅಪಹರಿಸುವರು. ಈ ಬಗ್ಗೆ ಸದಾ ಎಚ್ಚರಿಕೆಯಿಂದ ಇರುವುದು ಒಳ್ಳೆಯದು.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...