ದಿನ ರಾಶಿ ಭವಿಷ್ಯ, ಶುಕ್ರವಾರ, 28-12-2018

ಮೇಷ

ಮಕ್ಕಳನ್ನು ಅಲಕ್ಷಿಸಲು ಮುಂದಾಗಬೇಡಿ. ಅವರೊಡನೆ ಸ್ನೇಹದಿಂದ ಮಾತನಾಡಿ ಅವರ ವಿಶ್ವಾಸವನ್ನು ಪಡೆಯಿರಿ. ಈ ದಿನ ಉಲ್ಲಾಸ, ಸಂಭ್ರಮದಿಂದ ಕಾಲ ಕಳೆಯುವಿರಿ. ಮಕ್ಕಳೆದುರು ನೀವು ಉತ್ತಮ ಅಂಕಲ್‌ ಎನಿಸಿಕೊಳ್ಳುವಿರಿ.

ವೃಷಭ

ಸ್ಪಷ್ಟವಾಗಿ ಮಾತನಾಡಿ. ನಿಮ್ಮೊಳಗೆ ನೀವು ಗೊಣಗಿಕೊಳ್ಳವುದನ್ನು ಮತ್ತು ಏರುಧ್ವನಿಯಲ್ಲಿ ಮಾತನಾಡುವುದನ್ನು ತಡೆದಲ್ಲಿ ಒಳಿತಾಗುವುದು. ಇದರಿಂದ ಮನದ ಸಂಕಲ್ಪವನ್ನು ಪೂರೈಸಿಕೊಳ್ಳಲು ಸಹಾಯ ಆಗುವುದು ಮತ್ತು ಸಂಗಾತಿಯ ಪ್ರೀತಿ ಸಂಪಾದಿಸುವಿರಿ.

today astrology

ಮಿಥುನ

ಹೊಸ ಚೈತನ್ಯವು ನಿಮ್ಮಲ್ಲಿ ಕಂಡುಬರುವುದು. ಇದರಿಂದ ವ್ಯಾಪಾರ, ವ್ಯವಹಾರಗಳಲ್ಲಿ ಅಧಿಕ ಲಾಭಾಂಶವನ್ನು ಕಂಡುಕೊಳ್ಳುವಿರಿ. ನಿಮಗೆ ವಿದ್ಯಾದಾನ ಮಾಡಿದ ಗುರುವೊಬ್ಬರ ಭೇಟಿ ಮತ್ತು ಅವರೊಡನೆ ಮಾತುಕತೆ ನಡೆಯುವುದು.

ಇದನ್ನು ಓದಿ: ಇಂದು ಶುಕ್ರವಾರ, ಶುಭವ ತರುವ ವಾರ: ಧನ-ಧಾನ್ಯ ಪ್ರಾಪ್ತಿಗಾಗಿ ಈ ಕೆಲಸ ಮಾಡಿ

ಕಟಕ

ಅನುಭವವಿಲ್ಲದಿರುವ ಕಾರ್ಯಕ್ಷೇತ್ರಕ್ಕೆ ಧುಮುಕಿ ಮನಸ್ಸಿನ ಶಾಂತತೆಯನ್ನು ಹಾಳು ಮಾಡಿಕೊಳ್ಳದಿರಿ. ಸದ್ಯಕ್ಕೆ ಇರುವ ನೌಕರಿ ನಿಮಗೆ ವಿರುದ್ಧವಾಗಿದ್ದಲ್ಲಿ ಬೇರೆ ನೌಕರಿಯನ್ನು ಹೊಂದುವಿರಿ. ತಾಯಿಯ ಆರೋಗ್ಯದಲ್ಲಿ ಸುಧಾರಣೆ ಕಂಡುಬರುವುದು.

ಸಿಂಹ

ಯಾರೋ ಒಬ್ಬರು ನಿಮ್ಮನ್ನು ಟೀಕಿಸಿಬಿಟ್ಟರು ಎಂದು ಕೊರಗದಿರಿ. ಟೀಕೆ,ಟಿಪ್ಪಣಿಗಳು ಮನುಜ ಜೀವನದಲ್ಲಿ ಬರುವ ಉಳಿಪೆಟ್ಟುಗಳು. ಆ ಪೆಟ್ಟುಗಳನ್ನು ತಿನ್ನದೆ ಇದ್ದಲ್ಲಿ ನೀವು ಪರಿಪೂರ್ಣ ವ್ಯಕ್ತಿ ಆಗಲಾರಿರಿ. ಆದಷ್ಟು ತಾಳ್ಮೆಯಿಂದ ಇರಿ.

ಕನ್ಯಾ

ವಿವಾಹಾಪೇಕ್ಷಿಗಳಿಗೆ ಉತ್ತಮ ಕಾಲ. ದೂರದಿಂದ ಬರುವ ವಾರ್ತೆಯು ನಿಮ್ಮ ಭಾವನೆಗಳಿಗೆ ಪುಕ್ಕವನ್ನು ನೀಡುವವು. ಉತ್ತಮ ದಿನವಾಗಿದ್ದು ನಿಮ್ಮ ಮನೋಕಾಮನೆಗಳು ಯಾವ ಅಡೆತಡೆಗಳಿಲ್ಲದೆ ಪೂರ್ಣಗೊಳ್ಳುವುದು.

ತುಲಾ

ಅನೇಕ ರೀತಿಯ ವಾಣಿಜ್ಯದ ವಿಚಾರಗಳನ್ನು ಪೂರ್ಣವಾಗಿ ತಿಳಿದುಕೊಳ್ಳದೆ ಅದರ ಅನುಕರಣೆ ಮತ್ತು ಅನುಷ್ಠಾನಕ್ಕೆ ತರುವುದರಿಂದ ತೊಂದರೆ ಎದುರಿಸುವಿರಿ. ನೀವು ಆಡುವ ಮಾತಿನಿಂದಲೇ ವೈರತ್ವವನ್ನು ಕಂಡುಕೊಳ್ಳುವಿರಿ. ತಾಳ್ಮೆ ಇರಲಿ.

ವೃಶ್ಚಿಕ

ನಿಮ್ಮ ಅವಿರತವಾದ ಪ್ರಯತ್ನಶೀಲತೆಯಿಂದ ಕಾರ್ಯ ಸಿದ್ಧಿಸುವುದು. ಇದರಿಂದ ಮೇಲಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗುವಿರಿ. ಆಂಜನೇಯ ಸ್ತೋತ್ರವನ್ನು ಪಠಿಸಿ ಮತ್ತು ದೇವಿ ಆರಾಧನೆ ಮಾಡುವುದು ಒಳ್ಳೆಯದು.

ಧನಸ್ಸು

ವಿವಿಧ ರೀತಿಯ ಜನರು ಆಮಿಷವನ್ನು ತೋರಿಸುವ ಮೂಲಕ ಮತ್ತು ಮೋಹಕ ಮಾತುಗಳಿಂದ ನಿಮ್ಮ ಸಖ್ಯ ಬೆಳೆಸಿ ನಿಮಗೇ ಅಪಚಾರ ಮಾಡುವ ಇಲ್ಲವೆ ಅವಮಾನವನ್ನುಂಟು ಮಾಡುವ ಪ್ರಕ್ರಿಯೆಗೆ ಇಳಿಯುವರು. ಈ ಬಗ್ಗೆ ಎಚ್ಚರ ಇರಲಿ.

ಮಕರ

ಕೃಷಿಯ ವಿಚಾರದಲ್ಲಿ ನಿರಂತರ ಕಷ್ಟನಷ್ಟಗಳನ್ನು ಅನುಭವಿಸುತ್ತಿದ್ದರೆ ಸರಿಯಾದವರ ಜೊತೆಗೆ ಸಂಪರ್ಕಿ ಬೆಳೆಸಿ. ಮಾತುಕತೆಗಳ ಮೂಲಕ ಲಾಭದಾಯಕವಾಗುವುದು. ಶ್ರೀನರಸಿಂಹ ಸ್ವಾಮಿಯನ್ನು ಮನಸಾ ಸ್ಮರಿಸಿ.

ಕುಂಭ

ನಿಮ್ಮ ಪ್ರತಿಭಾಪೂರ್ಣವಾದ ಶಕ್ತಿಯನ್ನು ಹೊರ ಹಾಕಲಿದ್ದೀರಿ. ಇದರಿಂದ ನಿಮ್ಮ ಮಾರ್ಗದರ್ಶಕನಿಗೆ ಮತ್ತು ಮುಖ್ಯಸ್ಥರಿಗೆ ಸಂತೋಷವಾಗುವುದು. ನಿಮ್ಮ ಕಾರ್ಯಗಳು ಸುಲಲಿತವಾಗುವುದು.

ಮೀನ

ಹೊಸದಾದ ಸಂತೋಷವನ್ನು, ಚೈತನ್ಯವನ್ನು ಹೊಂದುವಿರಿ. ಗುರುಗ್ರಹದ ಜಪ ಇಲ್ಲವೆ ರಾಘವೇಂದ್ರ ಸ್ವಾಮಿಯ ಆರಾಧನೆ ಮಾಡಿ. ಹಣಕಾಸಿನ ತೊಂದರೆ ಇರುವುದಿಲ್ಲ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...