ದಿನ ರಾಶಿ ಭವಿಷ್ಯ, ಗುರುವಾರ, 27-12-2018

ಮೇಷ

ಸಂತೋಷಪಡುವ ಸಂಭ್ರಮದ ಕಾರ್ಯಕ್ರಮವೊಂದು ದಿಢೀರಾಗಿ ನಿಶ್ಚಯವಾಗುವುದರಿಂದ ದೂರ ಪ್ರಯಾಣದ ಸಾಧ್ಯತೆ ಇರುವುದು. ಸಂತೋಷದ ಈ ದಿನದಲ್ಲಿ ಮನಸ್ಸು ಹಕ್ಕಿಯಂತೆ ಹಾರಾಡುವುದು.

ವೃಷಭ

ವಿನಾಕಾರಣ ಮನೆಯಲ್ಲಿ ಮನಸ್ತಾಪದ ಸಂದರ್ಭಗಳು ಎದುರಾಗುವ ಸಂದರ್ಭವಿರುತ್ತದೆ. ಸಣ್ಣಪುಟ್ಟ ವಿಷಯಗಳನ್ನು ದೊಡ್ಡದು ಮಾಡಬೇಡಿ. ತಪ್ಪು ಮಾಡುವುದು ಮನುಜ ಸ್ವಭಾವ. ಅಂತಹ ವ್ಯಕ್ತಿಗಳನ್ನು ಕ್ಷ ಮಿಸಿಬಿಡಿ.

ಮಿಥುನ

ಮಕ್ಕಳ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಪ್ರಗತಿ ಕಂಡುಬರುವುದು. ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವವು. ಸಮಾಜದಲ್ಲಿ ಗೌರವ, ಸನ್ಮಾನಗಳು ಏರ್ಪಡುವವು. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.

ಕಟಕ

ನಿಮ್ಮ ವಿರೋಧಿಗಳು ನಿಮ್ಮ ಸಾಮಾಜಿಕ ಗೌರವದ ಪ್ರಭಾವ ತಗ್ಗಿಸಲು ಪ್ರಯತ್ನ ಪಡುವರು. ಆದಾಗ್ಯೂ ಗೋಡೆಗೆ ಪುಟಿದ ಚೆಂಡಿನಂತೆ ನೀವು ಹೆಚ್ಚು ಜನಪ್ರಿಯರಾಗುವಿರಿ. ಹಣಕಾಸಿನ ಸ್ಥಿತಿಯು ಉತ್ತಮವಾಗಿರುತ್ತದೆ.

ಸಿಂಹ

ಕೆಲ ಗ್ರಹಗಳು ಮಕ್ಕಳಿಂದ ನಿಮ್ಮ ಕನಸುಗಳು ನನಸಾಗುವಂತೆ ಮಾಡುವವು. ಮಗನಿಗೆ ಉತ್ತಮ ಸಂಬಂಧ ಕೂಡಿಬರುವ ಸಾಧ್ಯತೆ ಇದೆ. ಹೊಸ ರೀತಿಯ ಕಾರ್ಯಗಳು ನೆರವೇರುವವು. ಕುಲದೇವತಾ ಸ್ಮರಣೆ ಮಾಡಿ.

ಕನ್ಯಾ

ಹೊಸ ಸಂಸ್ಥೆಯೊಂದನ್ನು ಹುಟ್ಟುಹಾಕುವ ಅಪರೂಪದ ಕಾಯಕದಲ್ಲಿ ಜಯಶೀಲರಾಗಲು ಅವಕಾಶವಿದೆ. ಸ್ಥಿರಾಸ್ತಿಗೆ ಸಂಬಂಧಿಸಿದ ಕಾಗದ ಪತ್ರಗಳು ನಿಮ್ಮ ಕೈಸೇರುವ ಸಾಧ್ಯತೆ ಇದೆ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ.

astrology in kannada​

ತುಲಾ

ಹಳೆಯ ಕಡತವೊಂದನ್ನು ಅಪಹರಿಸಲು ಇಲ್ಲವೆ ಹಳೆಯ ಲೆಕ್ಕಪತ್ರಗಳನ್ನು ಕೆದಕಿ ನಿಮ್ಮ ಮೇಲೆ ಅಪವಾದ ತರುವ ಹುನ್ನಾರ ನಡೆಯುತ್ತಿದೆ. ಆದಷ್ಟು ಎಚ್ಚರಿದಿಂದ ಇರಿ. ನಿಮ್ಮ ಪ್ರಾಮಾಣಿಕತೆ ನಿಮಗೆ ಸಹಾಯ ಮಾಡುವುದು.

ವೃಶ್ಚಿಕ

ಕಚೇರಿಯಲ್ಲಿ ನಿಮ್ಮ ಕೈಕೆಳಗೆ ಕೆಲಸ ಮಾಡುವವರು ಅಸಹಕಾರ ತೋರುವರು. ಇಲ್ಲವೆ ನಿಮಗೆ ತೊಂದರೆ ಕೊಡುವ ಸಾಧ್ಯತೆ ಇರುತ್ತದೆ. ಲಕ್ಷ್ಮೀನಾರಸಿಂಹನ ಸ್ಮರಣೆ ಮಾಡಿ. ಬಂದ ದುರಿತಗಳು ನಶಿಸಿಹೋಗುವುದು.

ಧನಸ್ಸು

ಹಿರಿಯರೊಬ್ಬರ ಸಕಾಲಿಕ ಹಿತನುಡಿಗಳಿಂದ ಮನೆಯಲ್ಲಿನ ಪತಿ, ಪತ್ನಿಯರ ನಡುವಿನ ಭಿನ್ನಾಭಿಪ್ರಾಯಕ್ಕೆ ಅಂತ್ಯ ಕಾಣುವುದು. ಕಚೇರಿಯ ಕೆಲಸಗಳು ಸರಾಗವಾಗಿ ನಡೆಯುವುದರಿಂದ ನೆಮ್ಮದಿಯ ವಾತಾವರಣವನ್ನು ಕಾಣುವಿರಿ.

ಮಕರ

ಬೆಲೆಬಾಳುವ ವಸ್ತುಗಳ ಕಣ್ಮರೆ ಸಾಧ್ಯತೆ ಇದೆ. ಹಾಗಾಗಿ ಎಚ್ಚರದಿಂದ ಇರಿ. ಪ್ರಯಾಣದಲ್ಲಿ ಕೂಡಾ ಎಚ್ಚರದಿಂದ ಇರುವುದು ಒಳ್ಳೆಯದು. ನೀವು ಮಾಡದೆ ಇರುವ ತಪ್ಪಿಗೆ ನೀವು ನಿಂದನೆಗೆ ಒಳಗಾಗುವಿರಿ.

ಕುಂಭ

ನಿಮ್ಮ ಬಂಧುಬಳಗದವರಿಂದ ಮತ್ತು ಆತ್ಮೀಯ ಗೆಳೆಯರಿಂದ ಬೆಂಬಲ ಸಿಗುವುದು. ಆದರೆ ಎಲ್ಲರೊಡನೆ ಎಲ್ಲಾ ವಿಷಯಗಳನ್ನು ಹಂಚಿಕೊಳ್ಳದಿರಿ. ಕೆಲವೊಂದು ವಿಷಯಗಳನ್ನು ಗೌಪ್ಯವಾಗಿ ಇಡುವುದು ಉತ್ತಮ.

ಮೀನ

‘ಸಮಯವೇ ದುಡ್ಡು’ ಎಂದು ಅನುಭಾವಿಗಳು ಹೇಳುತ್ತಾರೆ. ನನ್ನ ಸಮಯ ಸರಿಯಿಲ್ಲ ಎಂದು ಪರಿತಪಿಸುತ್ತಾ ಕಾಲಹರಣ ಮಾಡದಿರಿ. ಯಾವುದಾದರೊಂದು ಸಕಾರಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸಿ. ಆನಂದವನ್ನು ಹೊಂದಿ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...