ದಿನ ರಾಶಿ ಭವಿಷ್ಯ, ಬುಧವಾರ, 26-12-2018

ಮೇಷ

ಗ್ರಹಗಳು ನಿಮ್ಮನ್ನು ಸುಮ್ಮನೆ ಕೂರಲು ಬಿಡುತ್ತಿಲ್ಲ. ಜೀವನದಲ್ಲಿ ಉತ್ಸಾಹ ಹೆಚ್ಚುತ್ತದೆ. ಇದರಿಂದಾಗಿ ನಿಮ್ಮೊಳಗಿನ ಉತ್ತಮ ಕ್ರಿಯಾಶೀಲತೆಯನ್ನು ದುಡಿಸಿಕೊಳ್ಳಿ. ಬೇರೆಯವರ ಕಷ್ಟಸುಖಗಳಿಗೆ ಸ್ಪಂದಿಸುವ ನಿಮ್ಮ ಗುಣ ಮೆಚ್ಚುಗೆಗೆ ಪಾತ್ರವಾಗುವುದು.

ವೃಷಭ

ಮನಸ್ಸು ಅತ್ಯಂತ ಚಂಚಲತೆಯಿಂದ ಕೂಡಿರುವುದರಿಂದ ಈ ದಿನದ ಕಾರ್ಯಗಳಲ್ಲಿ ಹಿನ್ನಡೆ ಅನುಭವಿಸುವಿರಿ. ಗ್ರಹಸ್ಥಿತಿಗಳು ಉತ್ತಮವಾಗಿಲ್ಲ. ಹಾಗಾಗಿ ಸಕಲ ಗ್ರಹಬಲ ನೀನೇ ಸರಸಿಜಾಕ್ಷ ಎಂದು ಹರಿಯನ್ನು ಪ್ರಾರ್ಥಿಸಿ.

ಮಿಥುನ

ಸೋಲು, ಗೆಲುವು ಒಂದೇ ನಾಣ್ಯದ ಎರಡು ಮುಖಗಳು. ಹಾಗಾಗಿ ಹೆಚ್ಚು ಚಿಂತಿಸದೆ ನಿಮ್ಮ ಕಾರ್ಯ ಯೋಜನೆಗಳನ್ನು ರೂಪಿಸಿ. ಅದರಲ್ಲಿ ಗೆಲ್ಲುವ ಅವಕಾಶ ಹೇರಳವಾಗಿದೆ. ಗುರುವನ್ನು ಮನಸಾ ಸ್ಮರಿಸಿ ಕಾರ್ಯ ಆರಂಭಿಸಿ.

ಕಟಕ

ಹೊಸ ರೀತಿಯ ಕಾರ್ಯ ಮಾಡುವಂತೆ ಗ್ರಹಗಳು ಪ್ರೇರೇಪಿಸುತ್ತವೆ. ಅದರಲ್ಲಿ ಯಶಸ್ಸನ್ನು ಕಾಣುವ ಸೌಭಾಗ್ಯ ನಿಮ್ಮದಾಗುವುದು. ದೈವದತ್ತವಾಗಿ ಬಂದ ಜಾಣ್ಮೆಯನ್ನು ಉಪಯೋಗಿಸಿಕೊಳ್ಳಿ. ಮಾತಿನಲ್ಲಿ ಮೃದುತ್ವ ರೂಢಿಸಿಕೊಳ್ಳಿ.

ಸಿಂಹ

ದೃಢ ನಿರ್ಧಾರವನ್ನು ತಳೆಯುವಲ್ಲಿ ಹೆಸರು ವಾಸಿಯಾದ ನೀವು ಇಂದಿನ ಸಂಕಷ್ಟ ಪರಿಸ್ಥಿತಿಯನ್ನು ಸೂಕ್ಷ ್ಮವಾಗಿ ಗಮನಿಸಿ ಅದರಲ್ಲಿ ವಿಜಯವನ್ನು ತಂದುಕೊಳ್ಳಲು ನಿಮ್ಮ ಪರಿಪಕ್ವ ಮನಸ್ಸು ಸಹಾಯ ಮಾಡುವುದು. ಇದಕ್ಕೆ ಸಂಗಾತಿಯ ನೆರವು ಸಿಗುವುದು.

today astrology

ಕನ್ಯಾ

ವ್ಯವಹಾರಕ್ಕೆ ಸಂಬಂಧಪಟ್ಟಂತೆ ಲೆಕ್ಕಪತ್ರಗಳನ್ನು ಸರಿಯಾಗಿಟ್ಟುಕೊಂಡಿರುವ ಬಗ್ಗೆ ಮೇಲಧಿಕಾರಿಗಳಿಂದ ಪ್ರಶಂಸೆಗೆ ಒಳಗಾಗುವಿರಿ. ಅವಶ್ಯಕತೆಗಿಂತ ಹೆಚ್ಚು ಪ್ರಾಮಾಣಿಕತನ ನಿಮ್ಮನ್ನು ಸಂಕಷ್ಟಕ್ಕೆ ಸಿಲುಕಿಸುವುದು. ಈ ಬಗ್ಗೆ ಹಿರಿಯರಿಂದ ಸೂಕ್ತ ಸಲಹೆ ಪಡೆಯಿರಿ.

ತುಲಾ

ಹಣಕಾಸಿನ ಸ್ಥಿತಿ ಉತ್ತಮವಾಗಿದ್ದು ಬಹುದಿನಗಳಿಂದ ಬರಬೇಕಾಗಿದ್ದ ಹಣವು ನಿಮ್ಮ ಕೈಸೇರುವುದು. ಆಕಾಶಕ್ಕೆ ಏಣಿ ಹಾಕುವ ವ್ಯರ್ಥ ಪ್ರಯತ್ನ ಬೇಡ. ನಿಮ್ಮ ಕಾರ್ಯಕ್ಷೇತ್ರದಲ್ಲಿನ ಕೆಲಸವು ಮಂದಗತಿಯಿಂದ ಆರಂಭವಾದರೂ ಒಳಿತಾಗುವುದು.

ವೃಶ್ಚಿಕ

ಸುಂಕದವನ ಮುಂದೆ ಸುಖದುಃಖ ಹೇಳಿಕೊಂಡರೆ ಏನು ಪ್ರಯೋಜನ. ಹಾಗಾಗಿ ಕಷ್ಟ ಬಂದಿದೆ ಎಂದು ಮರುಗುವುದಕ್ಕಿಂತ ಬಂದಿರುವ ಕಷ್ಟವನ್ನು ಎದುರಿಸುವ ಶಕ್ತಿ ನೀಡು ಎಂದು ದೇವರಲ್ಲಿ ಪ್ರಾರ್ಥಿಸಿ.

ಧನಸ್ಸು

ಎಲ್ಲಾ ಕೆಲಸವನ್ನು ನನ್ನಿಂದಲೇ ಆಯಿತು ಎನ್ನುವುದಕ್ಕಿಂತ ಭಗವಂತನ ಕೃಪೆಯಿಂದ ಕೆಲಸ ಆಯಿತು ಎನ್ನುವುದು ಹೆಚ್ಚು ಸೂಕ್ತ. ಹಾಗೆ ಮಾಡುವುದರಿಂದ ಕೆಲವು ಕೆಲಸಗಳು ಇನ್ನು ಹೆಚ್ಚಿನ ಪರಿಪಕ್ವತೆಯಿಂದ ಯಶಸ್ಸನ್ನು ಹೊಂದುವುದು.

ಮಕರ

ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎನ್ನುವಂತೆ ದೊಡ್ಡವರ ಸಹವಾಸದಿಂದ ದೂರ ಇರುವುದು ಒಳ್ಳೆಯದು. ಇಲ್ಲದೆ ಇದ್ದಲ್ಲಿ ಅವರು ಮಾಡುವ ತಪ್ಪುಗಳಿಗೆ ನಿಮ್ಮನ್ನು ಹೊಣೆಗಾರರನ್ನಾಗಿ ಮಾಡುವ ಸಾಧ್ಯತೆ ಇರುತ್ತದೆ.

ಕುಂಭ

ದೈವಬಲವು ನಿಮ್ಮ ಎಲ್ಲಾ ಕಾರ್ಯಗಳಲ್ಲೂ ಪ್ರಭಾವ ಬೀರುತ್ತದೆ. ಹಾಗಾಗಿ ಕಠಿಣ ಕಾರ್ಯವೂ ಸುಲಲಿತವಾಗಿ ನೆರವೇರುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ.

ಮೀನ

ಏಕಾಂತತೆಯು ನಿಮ್ಮ ಮನಸ್ಸನ್ನು ಹಿಂಡುತ್ತಿದೆ. ಮನುಜ ಸಂಘಜೀವಿ. ಹಾಗಾಗಿ ಆದಷ್ಟು ಸಂಘ ಸಂಸ್ಥೆಗಳಲ್ಲಿ ಸದಸ್ಯರಾಗಿ ಗೆಳೆಯರೊಡನೆ ಬೆರೆಯಿರಿ. ಮನಸ್ಸಿನ ಭಾವನೆಗಳನ್ನು ಮುಕ್ತವಾಗಿ ಹಂಚಿಕೊಳ್ಳಿ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...