ದಿನ ರಾಶಿ ಭವಿಷ್ಯ, ಸೋಮವಾರ, 24-12-2018

ಮೇಷ

ಈ ದಿನದ ನಿಮ್ಮ ಮನೋಕಾಮನೆಗಳು ಯಶಸ್ಸಿನತ್ತ ಸಾಗುವುದು. ಪರಿಶ್ರಮದಿಂದ ಧನಸಂಪಾದನೆಗೆ ಮುಂದಾಗಿರಿ. ದೈವಬಲದ ದೆಸೆಯಿಂದ ಹೆಚ್ಚಿನ ಅನುಕೂಲವಾಗುವುದು. ವಿದ್ಯಾರ್ಥಿಗಳು ಸಾಕಷ್ಟು ಓದಿನ ಕಡೆ ಗಮನ ಹರಿಸಬೇಕು.

ವೃಷಭ

ನಿಮ್ಮ ಮನೋಧೈರ್ಯವನ್ನು ಕೆಡಿಸುವಂತಹ ಅನ್ಯರ ಮಾತುಗಳನ್ನು ಬೇಗನೆ ನಂಬದಿರಿ. ಮನಸ್ಸಿನ ಸಂತುಲವನ್ನು ಕಾಯ್ದುಕೊಂಡರೆ ಆರೋಗ್ಯದಲ್ಲಿ ಸುಧಾರಣೆ ಕಂಡುಬರುವುದು. ಕೇವಲ ಔಷಧಿಗಳಿಂದ ಖಾಯಿಲೆ ವಾಸಿಯಾಗುವುದಿಲ್ಲ. ಅದರ ಬಗ್ಗೆ ನಂಬಿಕೆಯೂ ಬೇಕು.

ಮಿಥುನ

ಅನೇಕ ರೀತಿಯ ಅಡೆತಡೆಗಳನ್ನು ದಾಟಿಕೊಂಡು ಬಂದಿರುವಿರಿ. ನಿಮ್ಮ ಈದಿನದ ಸಂಕಲ್ಪ ಶಕ್ತಿಯು ಹೆಚ್ಚು ಪ್ರಖರವಾಗಿದ್ದು ಮಹತ್ತರ ಕೆಲಸವನ್ನು ಗೆಲ್ಲಲಿದ್ದೀರಿ. ಆದರೆ ಅದರ ಸಾಮಥ್ರ್ಯವು ನಿಮ್ಮಲ್ಲಿ ಅಹಂಕಾರ ಬರದಂತೆ ನೋಡಿಕೊಳ್ಳಿರಿ.

today astrology

ಕಟಕ

ಗುರು ಹಿರಿಯರ ಸೇವೆ ಎಂದರೆ ಅವರನ್ನು ಒಂದೆಡೆ ಕೂಡಿ ಅರ್ಚನೆ ಮಾಡುವುದಲ್ಲ. ಅವರಿಗೆ ಬೇಕಾದ ಇಷ್ಟನಿಷ್ಟಗಳನ್ನು ಪೂರೈಸುವುದು. ಅವರಿಗೆ ನೋವಾಗದಂತೆ ಇರುವುದೇ ಸೇವೆ. ಇಂತಹ ಸೇವೆಯಿಂದ ಈ ದಿನ ಒಳಿತಾಗುವುದು.

ಸಿಂಹ

ಸಿಂಹವು ಗಾಂಭೀರ್ಯಕ್ಕೆ ಹೆಸರಾದ ಪ್ರಾಣಿ. ಅಂತೆಯೇ ನೀವು ಉದ್ಯೋಗದಲ್ಲಿ ಗಾಂಭೀರ್ಯತೆಯನ್ನು ಕಾಯ್ದುಕೊಳ್ಳಿರಿ. ಸಣ್ಣಪುಟ್ಟ ಟೀಕೆಗಳಿಗೆ ಆತ್ಮ ಸಂಯಮವನ್ನು ಕಳೆದುಕೊಳ್ಳದಿರಿ. ಕುಲದೇವತಾ ಪ್ರಾರ್ಥನೆ ಮಾಡಿರಿ.

ಕನ್ಯಾ

ಜವಾಬ್ದಾರಿಯನ್ನು ನಿರ್ವಹಿಸಿ, ಅಡೆತಡೆಗಳನ್ನು ಎದುರಿಸಿ ನಿಲ್ಲುವಂತಹ ಶಕ್ತಿಯು ಇಂದು ತನ್ನಿಂದ ತಾನೇ ಲಭಿಸುವುದು. ಹಣಕಾಸಿನ ಸ್ಥಿತಿಯು ಉತ್ತಮವಾಗಿದ್ದು, ನಿಮ್ಮ ಬಹುದಿನದ ಕನಸು ನನಸಾಗುವುದು.

ತುಲಾ

ಗೆಳೆಯನೊಬ್ಬನ ಸಹಾಯವು ಇಂದು ನಿಮಗೆ ದೊರೆಯಲಿರುವುದು. ಮತ್ತು ಭಗವಂತ ನಿಮ್ಮ ಮೇಲೆ ಅಪಾರ ಕರುಣೆಯನ್ನು ತೋರುವುದರಿಂದ ಆರಂಭಿಸಿದ ಕಾರ್ಯಗಳೆಲ್ಲವೂ ಕೈಗೂಡುವುದು.

ವೃಶ್ಚಿಕ

ಸಂಕಟ ಬಂದಾಗ ವೆಂಕಟರಮಣ ಎನ್ನುವಂತೆ ಈಗ ಯಾರನ್ನು ನಂಬದೆ ಭಗವಂತನನ್ನೆ ಮೊರೆ ಹೋಗುವುದು ಸೂಕ್ತ. ತಣ್ಣೀರನ್ನು ಆರಿಸಿ ಕುಡಿಯುವ ಕಾಲವಾದ್ದರಿಂದ ನಡೆ-ನುಡಿಯಲ್ಲಿ ಎಚ್ಚರಿಕೆ ವಹಿಸಿರಿ.

ಧನಸ್ಸು

ಊರದೇವರ ನೋಡಬೇಕಣ್ಣ ಎಂದರು ಅನುಭಾವಿಗಳು. ಅಂತೆಯೇ ಇಂದಿನ ಸುಸ್ಥಿತಿಗೆ ಕುಲದೇವರ ಅನುಗ್ರಹವೇ ಕಾರಣ. ಹಾಗಾಗಿ ಕುಲದೇವರ ಸನ್ನಿಧಿಗೆ ಹೋಗಿ ಬನ್ನಿರಿ. ಮತ್ತು ಈದಿನ ಎಲ್ಲಾ ಕೆಲಸಗಳಲ್ಲೂ ಜಯ ಗಳಿಸುವಿರಿ.

ಮಕರ

ಯಾರದೋ ಸಹಾಯ ಬರಬಹುದು ಎಂಬ ಅತಿಯಾದ ನಿರೀಕ್ಷೆಯಲ್ಲಿಯೇ ಈದಿನದ ಬಹುಪಾಲು ಸಮಯ ವ್ಯರ್ಥವಾಗುವುದು. ಹಾಗಾಗಿ ಅವರ ನಿರೀಕ್ಷೆ ಮಾಡದೆ ಅನ್ಯರ ಸಹಾಯವನ್ನು ಪಡೆಯಿರಿ ಒಳಿತಾಗುವುದು.

ಕುಂಭ

ಕಾಲವು ಶೀಘ್ರಗತಿಯಲ್ಲಿ ಉರುಳುತ್ತಿದೆ ಎನಿಸುತ್ತಿದೆ. ನೀವು ಮಾಡಬೇಕಾದ ಕಾರ್ಯಗಳು ಬಹಳಷ್ಟಿದ್ದು ಆದ್ಯತೆಯ ಮೇರೆಗೆ ಕೆಲಸ ಪೂರೈಸಿರಿ. ಮನೆಯಲ್ಲಿ ನಿಮ್ಮ ಮದುವೆಯ ಬಗ್ಗೆ ಮಾತುಕತೆಗಳು ನಡೆಯುವುದು.

ಮೀನ

ಬೆಕ್ಕು ಕಣ್ಣುಮುಚ್ಚಿ ಹಾಲು ಕುಡಿದು ಯಾರೂ ಗಮನಿಸುತ್ತಿಲ್ಲ ಎಂದು ಭಾವಿಸಿದಂತೆ ನೀವು ಮಾಡುವುದು ಬೇಡ. ಸಮಾಜದಲ್ಲಿ ಉನ್ನತ ಸ್ಥಾನಮಾನವನ್ನು ಹೊಂದಿರುವ ನೀವು ಎಲ್ಲಾ ನಡೆಯನ್ನು ಗಮನಿಸುವ ಜನರಿದ್ದಾರೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...