ರಾಶಿ ದಿನ ಭವಿಷ್ಯ

ಶನಿವಾರ, 15-12-2018

ಮೇಷ

ನಿಮ್ಮ ನಿರೀಕ್ಷೆಯನ್ನು ಮೀರಿ ಹಲವು ಹೊಸತನಗಳನ್ನು ರೂಪಿಸಿಕೊಳ್ಳಲು ಇಂದು ಸಕಾಲವಾಗಿದೆ. ಇದಕ್ಕೆ ನಿಮ್ಮ ಬಂಧುಗಳು, ಸ್ನೇಹಿತರು ಸಹಾಯ ಹಸ್ತ ನೀಡುವರು. ಆದರೆ ಅದಕ್ಕಾಗಿ ವಿಶೇಷ ಖರ್ಚು ಮಾಡಬೇಕಾಗುವುದು.

ವೃಷಭ

ಸ್ನೇಹಿತರೇ ನಿಮ್ಮನ್ನು ಯಾಮಾರಿಸುವ ಸಾಧ್ಯತೆ ಇದ್ದು ಇದಕ್ಕೆ ವಿಚಲಿತರಾಗದಿರಿ. ಅದೃಷ್ಟವು ನಿಮ್ಮ ಬೆನ್ನಿಗಿದೆ. ಮಕ್ಕಳ ವಿದ್ಯಾಭ್ಯಾಸವು ಪ್ರಗತಿಯತ್ತ ಸಾಗುವುದು. ಸಂಗಾತಿಯ ಬೇಕು ಬೇಡಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ಒಳಿತಾಗುವುದು.

ಮಿಥುನ

ಹಣ ದ್ವಿಗುಣಗೊಳಿಸುವ ಮೋಸದ ಜಾಲ ನಿಮ್ಮನ್ನು ದಾರಿ ತಪ್ಪಿಸುವ ಸಾಧ್ಯತೆ ಅಪಾರವಾಗಿದೆ ಇಂದು. ಆದಷ್ಟು ವ್ಯವಧಾನ ಇರಲಿ. ಯಾರಿಗೂ ಹಣಕಾಸಿನ ವಿಷಯವನ್ನು ತಿಳಿಸದಿರಿ. ಇದರಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾಗುವಿರಿ.

ಕಟಕ

ನಿಮ್ಮ ಮನಸ್ಸೇ ನಿಮಗೆ ವಿರೋಧವನ್ನುಂಟು ಮಾಡುವುದು. ಹಾಗಾಗಿ ಒಲ್ಲದ ಮನಸ್ಸಿನಿಂದ ಕಾರ್ಯಗಳನ್ನು ಮಾಡಲು ಹೋಗಿ ಸಿಕ್ಕಿ ಹಾಕಿಕೊಳ್ಳುವಿರಿ. ಆದಷ್ಟು ಕುಲದೇವತೆಯನ್ನು ಪ್ರಾರ್ಥಿಸಿರಿ. ಎಲ್ಲವೂ ಒಳಿತಾಗುವುದು.

ಸಿಂಹ

ಪ್ರಾಮಾಣಿಕತೆಯಿಂದ ಹೆಜ್ಜೆ ಇರಿಸಿದ ಪರಿಣಾಮವಾಗಿ ಎಲ್ಲೆಡೆ ಯಶಸ್ಸು ನಿಮ್ಮದಾಗುವುದು. ಗುರುವಿನ ಶ್ರೀರಕ್ಷೆಯಿಂದ ಈ ದಿನ ಹಮ್ಮಿಕೊಂಡ ಕಾರ್ಯಗಳು ಸುಲಲಿತವಾಗುವುದು.

ಕನ್ಯಾ

ಬಾಕಿ ಇರುವ ಕೆಲಸ ಕಾರ್ಯಗಳನ್ನು ಬೇಗನೆ ಮುಗಿಸುವುದು ಒಳ್ಳೆಯದು. ಕಚೇರಿಗೆ ಸಂಬಂಧಪಟ್ಟ ದಾಖಲೆಗಳನ್ನು ಒಪ್ಪವಾಗಿ ಜೋಡಿಸುವುದು ಒಳ್ಳೆಯದು. ಇದರಿಂದ ಅನಗತ್ಯ ಟೀಕೆಗಳಿಂದ ಮುಕ್ತರಾಗುವಿರಿ.

ತುಲಾ

ಎಲ್ಲ ರೀತಿಯ ಮಾನಸಿಕ ದುಗುಡಗಳು ನಿಮ್ಮನ್ನು ಇಂದು ಆವರಿಸುವುದು ಮತ್ತು ಜೀವನದಲ್ಲಿ ನಿರುತ್ಸಾಹ ಮೂಡುವುದು. ಆದರೆ ಗುರು-ಹಿರಿಯರ ಆಶೀರ್ವಾದ ಪಡೆದಲ್ಲಿ ಮಾನಸಿಕ ದುಗುಡಕ್ಕೆ ಪರಿಹಾರ ಸಿಗುವುದು.

ವೃಶ್ಚಿಕ

ಮಕ್ಕಳ ವಿದ್ಯಾಭ್ಯಾಸದ ವಿಚಾರದ ಬಗೆಗೆ ವ್ಯಾಕುಲತೆ ತಲೆದೋರುವ ಸಾಧ್ಯತೆ ಇರುವುದು. ನೀವು ಯೋಚಿಸಿದ ರೀತಿಯಲ್ಲಿ ಮಕ್ಕಳು ಅಂಕಗಳನ್ನು ಪಡೆಯುತ್ತಿಲ್ಲ ಎಂಬ ಕೊರಗು ನಿಮ್ಮನ್ನು ಕಾಡುವುದು. ಆಂಜನೇಯ ಸ್ತೋತ್ರ ಪಠಿಸಿರಿ, ಒಳಿತಾಗುವುದು.

ಧನಸ್ಸು

ದೂರದ ಊರಿನಿಂದ ಬರುವ ಅತಿಥಿಯೊಬ್ಬರು ನಿಮ್ಮ ವ್ಯಾಪಾರ, ವಹಿವಾಟಿನ ವಿಷಯದಲ್ಲಿ ಉತ್ತಮ ಸಲಹೆ ನೀಡುವರು. ಇದರಿಂದ ನಿಮಗೆ ಹೆಚ್ಚಿನ ಲಾಭವಾಗುವುದು. ಹಣಕಾಸಿನ ಸ್ಥಿತಿ ಉತ್ತಮಗೊಳ್ಳುವುದು.

ಮಕರ

ಆಪತ್ಕಾಲದಲ್ಲಿ ಆದವನೇ ನೆಂಟ ಎಂಬಂತೆ ಈದಿನ ನಿಮಗೆ ಸಹಾಯ, ಸಹಕಾರ ನೀಡುವವನೇ ನಿಮ್ಮ ನಿಜವಾದ ಮಿತ್ರ ಅಥವಾ ಹಿತೈಷಿ. ಆತನ ಮಾತನ್ನು ಆಲಿಸಿ ಈದಿನದ ಸಂತೋಷ ಅನುಭವಿಸಿರಿ.

ಕುಂಭ

ವಿಶೇಷವಾದದ್ದು ನಿಮಗೆ ಇಂದು ಲಭ್ಯವಾಗುವುದು. ಅದಕ್ಕಾಗಿ ನೀವು ಪಟ್ಟ ಅಪಾರವಾದ ಶ್ರಮವು ನಿಮಗೆ ಶುಭಫಲವನ್ನು ಕೊಡುವುದು. ಆದಾಗ್ಯೂ ಈ ವಿಷಯದಲ್ಲಿ ಅಲ್ಪ ಕಿರಿಕಿರಿ ಇರುತ್ತದೆ. ಮುಂದಿನ ದಿನಗಳಲ್ಲಿ ಒಳಿತಾಗುವುದು.

ಮೀನ

ಯಾವುದೇ ರೀತಿಯ ಹಸ್ತಕ್ಷೇಪಗಳನ್ನು ಸಹಿಸದಿರಿ. ಆದರೂ ಬಂಧುಮಿತ್ರರ ಪ್ರಾಮಾಣಿಕ ಬೆಂಬಲದಿಂದ ಒಳಿತಾಗುವುದು. ಭಗವಂತನನ್ನು ಸ್ಮರಿಸಿ ಈದಿನ ಕಾರ್ಯೋನ್ಮುಖರಾಗಿ ಒಳಿತಿಗೆ ದಾರಿ ದೊರೆಯುವುದು.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...