tirupati website ತಿರುಪತಿ ತಿಮ್ಮಪ್ಪನ ವೆಬ್‌ಸೈಟಲ್ಲಿ ಏಸು ಕ್ರಿಸ್ತನ ಹೆಸರು

tirupati
tirumala tirupati

tirupati website ಲಿಂಕ್ ತೆಗೆದುಹಾಕಿ ತನಿಖೆಗೆ ಆದೇಶಿಸಿದ ಆಡಳಿತ ಮಂಡಳಿ

ತಿರುಪತಿ: ತಿರುಪತಿ ತಿಮ್ಮಪ್ಪನ ಸನ್ನಿಧಾನದಲ್ಲಿ ಅನ್ಯ ಧರ್ಮೀಯರ ( tirupati website ) ಇರುವಿಕೆ ಬಗ್ಗೆ ವಿವಾದಗಳು ಹೊಸದೇನಲ್ಲ. ಅದರ ಮುಂದುವರಿದ ಭಾಗದಂತೆ ಈಗ ತಿರಮಲ ತಿರುಪತಿ ದೇವಸ್ವ ಮಂಡಳಿಯ ವೆಬ್‌ಸೈಟಲ್ಲಿ ಏಸು ಕ್ರಿಸ್ತನ ಹೆಸರು ಪ್ರಸಾಪಿಗೊಮಡಿರುವುದು ಮತ್ತೊಂದು ವಿವಾದಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಶಬರಿಮಲೆ: ಅಯ್ಯಪ್ಪ ಭಕ್ತೆಯ ಮೇಲೆ ’ಖಾರದ ಪುಡಿ’ ಆಕ್ರಮಣ

ಟಿಟಿಡಿಯ ವೆಬ್‌ಸೈಟಲ್ಲಿ ವೆಂಕಟೇಶ್ವರನ ಹೆಸರಿನ ಜೊತೆಗೆ ಒಂದು ಕಡೆ ಶ್ರೀ ಏಸಯ್ಯ ಎಂದು ಬರೆಯಲಾಗಿದ್ದು ಇದು ಬಯಲಾಗುತ್ತಿದ್ದಂತೆಯೇ ದೊಡ್ಡ ವಿವಾದಕ್ಕೆ ಕಾರಣವಾಯಿತು. ಇದು ಅಪಾಯವನ್ನು ಅರಿತ ತಿಮ್ಮಪ್ಪನ ದೇಗುಲದ ಆಡಳಿತ ಮಂಡಳಿ ಈ ಲಿಂಕ್ ಅನ್ನು ತೆಗೆದು ಹಾಕಿತಲ್ಲದೇ ಈ ಸಂಬಂಧ ತನಿಖೆಗೆ ಆದೇಶಿಸಿತು.

ದೇವಸ್ಥಾನದ ವೆಬ್‌ಸೈಟಲ್ಲಿ 2020ರ ಪಂಚಾಂಗದ ಲಿಂಕ್‌ನಲ್ಲಿ ವೆಂಕಟೇಶಾಯ ನಮಃ ಎಂಬ ಪದಕ್ಕೆ ಮುನ್ನ ಶ್ರೀ ಏಸಯ್ಯ ಎಂಬ ಪದವನ್ನು ಸೇರಿಸಲಾಗಿತ್ತು. ಕೂಡಲೇ ಎಚ್ಚೆತ್ತುಕೊಂಡ ಆಡಳಿತ ಮಂಡಳಿ ಆ ಹೆಸರನ್ನು ತೆಗೆದುಹಾಕಿತು ಎಂದು ಎಸ್‌ಎಇ ನ್ಯೂಸ್ ವರದಿ ಮಾಡಿದೆ.

ಟಿಟಿಡಿಯಲ್ಲಿ ಅನ್ಯಧರ್ಮೀಯರು ಇನ್ನೂ ಕರ್ತವ್ಯ ನಿರ್ವಹಿಸುತ್ತಿದ್ದು, ಇದು ಇಂತಹ ಅನಾಹುತಗಳಿಗೆ ಕಾರಣವಿರಬಹುದು ಎಂದು ಆರೋಪಿಸಿರುವ ಆಂಧ್ರ ಪ್ರದೇಶ ಬಿಜೆಪಿ ನಾಯಕರು, ಕೂಡಲೇ ಅವರನ್ನು ಕರ್ತವ್ಯಮುಕ್ತಗೊಳಸುವಂತೆ ಸರಕಾರವನ್ನು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...