16ರವರೆಗೆ ತಿರುಪತಿ ದೇವಸ್ಥಾನದ ಬಾಗಿಲು ಬಂದ್‌

ವಿಶೇಷ ಸಂಪ್ರೋಕ್ಷಣ ಕಾರ್‍ಯದ ನಿಮಿತ್ತ ತಿರುಪತಿಯ ಜಗತ್ಪ್ರಸಿದ್ಧ ತಿಮ್ಮಪ್ಪನ ದೇವಸ್ಥಾನ ಶನಿವಾರದಿಂದ 6 ದಿನಗಳ ಕಾಲ ಭಕ್ತರ ಪಾಲಿಗೆ ಬಂದ್ ಆಗಲಿದೆ.

ಸದಾ ಭಕ್ತರಿಂ ತುಂಬಿ ತುಳುಕುವ ತಿಮಲದಲ್ಲಿ ಜನರೇ ಇಲ್ಲ ಎಂದರೆ ಅದು ಹೇಗಿರಬಹುದು ಎಂದು ಊಹಿಸಿಕೊಳ್ಳುವುದೇ ಕಷ್ಟದ ಕೆಲಸ.

ತಿರುಪತಿ ತಿರುಮಲದಲ್ಲಿ 12 ವರ್ಷಗಳಿಗೆ ಒಮ್ಮೆ ಅಷ್ಟಬಂಧ ಬಾಲಾಲಯ ಮಹಾಸಂಪ್ರೋಕ್ಷಣಂ ಕಾರ್ಯ ನಡೆಯುತ್ತದೆ. ಈ ವೇಳೆ ದೇವಾಲಯಕ್ಕೆ ಭಕ್ತರ ಪ್ರವೇಶ ನಿಷೇಧಿಸಲಾಗುತ್ತದೆ.

ಅರ್ಚಕರನ್ನು ಹೊರತು ಪಡಿಸಿ ಬೇರೆಯಾರು ಈ ವೇಳೆ ದೇವಾಲಯಕ್ಕೆ ಪ್ರವೇಶ ಮಾಡುವಂತಿಲ್ಲ. ಈ ಹಿನ್ನಲೆಯಲ್ಲಿ ಐದುದಿನಗಳ ಕಾಲ ತಿಮ್ಮಪ್ಪನ ದರ್ಶನಕ್ಕೆ ಹೋಗದಿರುವುದು ಒಳಿತು.

16ರ ಗುರುವಾರ ಮಧ್ಯರಾತ್ರಿಯಿಂದ ಮತ್ತೆ ದೇವರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು. ಐದು ದಿನಗಳ ಕಾಲ ನಿಗದಿಯಾಗಿದ್ದ ಎಲ್ಲಾ ಸೇವೆಯನ್ನು ರದ್ದುಗೊಳಿಸಲಾಗಿದೆ.

ಐದು ದಿನಗಳ ಕಾಲ ನಡೆಯಲಿರುವ ಮಹಾಪ್ರೋಕ್ಷಣಂ ಬಳಿಕ 48ದಿನಗಳ ಕಾಲ ದೇವಾಲಯದಲ್ಲಿ ಮಹಾಮಸ್ತಕಾಭಿಷೇಕ ನಡೆಯಲಿದೆ.

ಕಾಲ್ನಡಿಗೆ ಮೂಲಕ ಬೆಟ್ಟ ಹತ್ತಿ ದೇವರ ದರ್ಶನಕ್ಕೂ ಯಾವುದೇ ಅಕಾಶ ವಿರುವುದಿಲ್ಲ.ಈ ಕುರಿತು ಶ್ರೀವಾರಿ ಮೆಟ್ಟಿಲು, ಅಲಿಪಿರಿ ಮೆಟ್ಟಿಲಿನ ಪ್ರವೇಶದಲ್ಲಿಯೂ ಸೂಚನಾ ಫಲಕಗಳನ್ನು ಹಾಕಲಾಗಿದೆ.