tirupati ತಿರುಪತಿ ದೇವಳದ ಬಳಿ ವ್ಯಕ್ತಿ ಆತ್ಮಹತ್ಯೆ, ತಿಮ್ಮಪ್ಪನ ದರ್ಶನಕ್ಕೆ ಬ್ರೇಕ್

tirupati

tirupati ಟಿಟಿಡಿ ಹಾಲಿನ ಟ್ಯಾಕರ್ ಅಡಿ ಬಿದ್ದು ವ್ಯಕ್ತಿ ಆತ್ಮಹತ್ಯೆ

ತಿರುಪತಿ: ತಿರುಮಲ ತಿರುಪತಿ ದೇವಸ್ಥಾನದ ಸಮೀಪವೇ ( tirupati) ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಕಾರಣ ಶುಕ್ರವಾರ ಕೆಲಕಾಲ ತಿಮ್ಮಪ್ಪನ ದರ್ಶನ ಸ್ಥಗಿತಗೊಳಿಸಲಾಯಿತು. ದೇವಸ್ಥಾನದ ಸಮೀತ ಮಡ ವೀದಿಯಲ್ಲಿ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡರು ಎನ್ನಲಾಗಿದೆ.

ಇದನ್ನೂ ಓದಿ: ಅಯೋಧ್ಯೆ ತೀರ್ಪು ಮರು ಪರಿಶೀಲನೆಗೆ ಸುಪ್ರಿಂ ನಕಾರ

ಶುಕ್ರವಾರ ಬೆಳಗ್ಗೆ ಈ ದುರ್ಘಟನೆ ಸಂಭವಿಸಿದೆ. ತಿರುಮಲ ತಿರುಪತಿ ದೇವಸ್ಥಾನ ಆಡಳಿತ ಮಂಡಳಿಗೆ ಸೇರಿದ ಹಾಲಿನ ಟ್ಯಾಂಕರ್‌ನ ಕೆಳಗೆ ಬಿದ್ದು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ದಾಖಲಾಗಿದೆ.

ಹಾಲಿನ ಟ್ಯಾಂಕರ್‍ ರಸ್ತೆಯಲ್ಲಿ ಸಾಗುತ್ತಿದ್ದಾಗ ಅದರ ಸಮೀಪಕ್ಕೆ ತೆರಳಿದ ವ್ಯಕ್ತಿಯೊಬ್ಬ ಇದ್ದಕ್ಕಿದ್ದಂತೆಯೇ ಟ್ಯಾಂಕರ್‌ನ ಕೆಳಗೆ ಬಿದ್ದು ಟ್ಯಾಂಕರ್‌ನ ಹಿಂಬದಿ ಚಕ್ರದಡಿ ಸಿಲುಕಿ ಪ್ರಾಣತ್ಯಾಗ ಮಾಡಿಕೊಂಡ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಮೊದಮೊದಲು ಇದೊಂದು ಅಪಘಾತ ಎಂದೇ ಭಾವಿಸಲಾಯಿತಾದರೂ ನಂತರ ಸಿಸಿಟಿವಿ ದ್ಯಶ್ಯಗಳಿಂದ ಇದು ಆತ್ಮಹತ್ಯೆ ಎಂಬುದು ತಿಳಿದುಬಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡರು. ಈ ಕಾರಣ ಕೆಲ ಕಾಳ ತಿಮ್ಮಪ್ಪನ ದರ್ಶನವನ್ನು ದೇವಾಲಯ ಸ್ಥಗಿತಗೊಳಿಸಿತ್ತು.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...