tipu sultan ರಾಜ್ಯದಲ್ಲಿ ಟಿಪು ಇತಿಹಾಸಕ್ಕೆ ಇತಿಶ್ರೀ

tipu sultan
tipu jayanthi cancelled by BSY

tipu sultan ಟಿಪು ಪಠ್ಯವೂ ರದ್ದು, ಜಯಂತಿಯೂ ರದ್ದು: ಯಡಿಯೂರಪ್ಪ

ಬೆಂಗಳೂರು: ರಾಜ್ಯದಲ್ಲಿ ಟಿಪು ಸುಲ್ತಾನ್ ಇತಿಹಾಸಕ್ಕೆ ಇತಿಶ್ರೀ ಹಾಡಲು ಸರಕಾರ ( tipu sultan) ನಿರ್ಧರಿಸಿದೆ. ಟಿಪು ಆಚರಣೆ ಈಗಾಗಲೇ ಕೈಬಿಟ್ಟಿದ್ದೇವೆ, ಇನ್ನು ಶಾಲಾ ಪಠ್ಯದಲ್ಲಿ ಟಿಪು ಕಲೆಕೆಯನ್ನು ರದ್ದು ಮಾಡಲಿದ್ದೇವೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ.

ಇದನ್ನೂ ಓದಿ: ಶೀಘ್ರವೇ ಬಿಎಸ್ವೈ ಸಂಪುಟಕ್ಕೆ ಯೋಗೇಶ್ವರ್ ಸೇರ್ಪಡೆ

ಬೆಂಗಳೂರಿನಲ್ಲಿ ಮಾತನಾಡಿದ ಯಡಿಯೂರಪ್ಪನವರು ಟಿಪು ವಿಚಾರವಾಗಿ ಸರಕಾರದ ನಿಲುವು ಅಚಲ. ಹಿಂದೂಗಳ ಪಾಲಿಗೆ ಕಂಟಕಪ್ರಾಯನಾಗಿದ್ದ ಟಿಪುವಿನ ವಿಷಯ ಅಧ್ಯಯನ ಅಥವ ಆತನ ಜಯಂತಿ ಆಚರಣೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಟಿಪ್ಪು ಓರ್ವ ಮತಾಂಧ. ಖಂಡಿತ ಆತ ಸ್ವಾತಂತ್ರ್ಯ ಹೋರಾಟಗಾರನಲ್ಲ. ತನ್ನ ಅಧಿಕಾರದ ಅವಧಿಯಲ್ಲಿ ಸಾಕಷ್ಟು ಹಿಂದೂಗಳ ಹತ್ಯೆ ಮಾಡಿದ್ದಾನೆ. ಮತಾಂತರ ಮಾಡಿದ್ದಾನೆ ಎಂದು ಯಡಿಯೂರಪ್ಪ ಹೇಳಿದರು.

ಪ್ರತಿಭಟನೆಯ ಎಚ್ಚರಿಕೆ

ಈ ಮಧ್ಯೆ ಯಡಿಯೂರಪ್ಪ ಅವರ ನಿರ್ಧಾರವನ್ನು ಸಹಜವಾಗಿಯೇ ಪ್ರತಿಪಕ್ಷಗಳು ಉಗ್ರವಾಗಿ ಟೀಕಿಸಿದ್ದಾರೆ. ಒಮದು ವೇಳೆ ಸರಕಾರ ಈ ವಿಚಾರದಲ್ಲಿ ಮುಂದುವರಿದಿದ್ದೇ ಆದಲ್ಲಿ ರಾಜ್ಯಾದ್ಯಮತ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ಮಾಜಿ ಸಿಎಂ ಸಿದ್ದರಾಮಯ್ಯ ನೀಡಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ, ಟಿಪ್ಪು ಪಠ್ಯವನ್ನು ಪಠ್ಯಕ್ರಮದಿಂದ ಕೈಬಿಟ್ಟರೇ, ಇತಿಹಾಸ ತಿರುಚಿದಂತಾಗುತ್ತದೆ. ಇತಿಹಾಸವನ್ನು ತಿರುಚಬಾರದು, ಮಕ್ಕಳಿಗೆ ಇತಿಹಾಸವನ್ನು ಸರಿಯಾದ ಕ್ರಮದಲ್ಲಿ ಕಲಿಸಬೇಕು. ಇದರಿಂದ ಮಕ್ಕಳು ಅನೇಕ ವಿಚಾರಗಳನ್ನು ಕಲಿತಂತೆ ಆಗುತ್ತದೆ.

ಒಂದು ವೇಳೆ ಶಾಲಾ ಪಠ್ಯ ಕ್ರಮದಿಂದ ಟಿಪ್ಪು ಪಠ್ಯವನ್ನು ತೆಗೆದಿದ್ದೇ ಆದಲ್ಲಿ, ಉಗ್ರ ಹೋರಾಟ ಮಾಡುವುದಾಗಿ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...