timeline ಅಯೋಧ್ಯೆ ವಿವಾದದ ಕಾಲದರ್ಶಿ

timeline
hearing on ayodya dispute ends in supreme court

timeline ರಾಮಜನ್ಮ ಭೂಮಿ ವಿವಾದದ ಪೂರ್ವಾಪರ

ಹೊಸದಿಲ್ಲಿ: ಇಡೀ ದೇಶದ ಗಮನ ( timeline ) ಈಗ ಸುಪ್ರೀಂ ಕೊರ್ಟ್‌ನತ್ತ ನೆಟ್ಟಿದೆ. ದಶಕಗಳಿಂದ ಇತ್ಯರ್ಥ ಕಾಣದೇ ಉಳಿಸದಿರುವ ಅಯೋಧ್ಯೆಯಲ್ಲಿನ ರಾಮಜನ್ಮ ಭೂಮಿ ವಿವಾದಕ್ಕೆ ಪರಿಹಾರ ದೊರಕುವ ಕ್ಷಣ ಕೊನೆಗೂ ಎದುರಾಗಿದೆ.

ಇದನ್ನೂ ಓದಿ: ಸಿಜೆ ಕಾರ್‍ಯಪ್ರವೃತ್ತ, ಅಯೋಧ್ಯೆ ತೀರ್ಪು ಸನ್ನಿಹಿತ

ಇಷ್ಟಕ್ಕೂ ಏನಿದು ವಿವಾದ, ಯಾವಾಗಿದರ ಆರಂಭ, ಆಗಿನಿಮದ ಈವರೆಗೆ ಏನೆಲ್ಲ ನಡೆಯಿತು ಎಂಬುದರ ಕಾಲದರ್ಶಿ ಇಲ್ಲಿದೆ.

1528 – ಮೊಘಲರ ದೊರೆ ಬಾಬರ್‌ನ ಸೇನಾಧಿಪತಿ ಮಿರ್ ಬಾಕಿ ಅಯೋಧ್ಯೆ ಈಗಿನ ವಿವಾದಿತ ಪ್ರದೇಶದಲ್ಲಿ ಬಾಬ್ರಿ ಮಸೀದಿ ಕಟ್ಟಿದ. ಅಲ್ಲಿ ದೇವಾಲಯ ಇತ್ತೆಂಬುದು ಹಿಂದೂಗಳ ನಂಬಿಕೆ ಮತ್ತು ವಾದ.
1949–50: ರಾಮಲಲ್ಲಾ ವಿಗ್ರಹಗಳ ಪ್ರತಿಷ್ಠಾಪನೆ. ವಿಗ್ರಹ ಪೂಜೆಗೆ ಅನುಮತಿ ಕೋರಿ ಫೈಜಾಬಾದ್ ಕೋರ್ಟ್‍ಗೆ ಅರ್ಜಿ.
1959 – ವಿವಾದಿತ ಪ್ರದೇಶದ ಭೂಮಿಯ ಸ್ವಾಧೀನ ಕೋರಿ ನಿರ್ಮೋಹಿ ಅಖಾಡದಿಂದ ಅರ್ಜಿ
1981 – 22 ವರ್ಷಗಳ ನಂತರ ಜಾಗದ ಒಡೆತನಕ್ಕೆ ಸುನ್ನಿ ವಕ್ಫ್ ಮಂಡಳಿಯಿಂದ ದಾವೆ
1986 – ವಿವಾದಗ್ರಸ್ತ ಜಾಗದಲ್ಲಿ ಹಿಂದೂಗಳ ಪೂಜೆಗೆ ಅನುವು ಮಾಡಿಕೊಡುವಂತೆ ಕೋರ್ಟ್ ಆದೇಶ
1989 – ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಅಲಹಬಾದ್ ಹೈಕೋರ್ಟ್ ಆದೇಶ
1990 – ಬಿಜೆಪಿಯ ಲಾಲ್ ಕೃಷ್ಣ ಆಡ್ವಾಣಿ ಅವರಿಂದ ರಾಮಜನ್ಮ ಭೂಮಿಗಾಗಿ ರಥಯಾತ್ರೆ.
1992 – ಡಿಸೆಂಬರ್ 6 – ಬಾಬ್ರಿ ಮಸೀದಿಯ ಧ್ವಂಸ
2002 – ಜಾಗದ ಒಡೆತನದ ಬಗ್ಗೆ ಅಲಹಬಾದ್ ಹೈಕೋರ್ಟ್‍ನಲ್ಲಿ ವಿಚಾರಣೆ
2010 – ರಾಮಜನ್ಮ ಭೂಮಿಯ ವಿವಾದಿತ ಸ್ಥಳ ಮೂರ್ಭಾಗ. ಸುನ್ನಿ ವಕ್ಫ್ ಮಂಡಳಿ, ನಿರ್ಮೋಹಿ ಅಖಾಡ ಮತ್ತು ರಾಮ್ ಲಲ್ಲಾ ನ್ಯಾಸಗಳಿಗೆ ಸಮಾಣ ಹಂಚಿಕೆ.
2011 – ಅಲಹಾಬಾದ್ ಹೈಕೋರ್ಟ್ ತೀರ್ಪಿಗೆ ಸುಪ್ರೀಂ ಕೋರ್ಟ್‌ ತಡೆ
2017 – ಸಂಧಾನದ ಮೂಲಕ ವ್ಯಾಜ್ಯ ಪರಿಹಾರಕ್ಕೆ ಅಂದಿನ ಸಿಜೆಐ ಖೇಹರ್ ಸಲಹೆ
2017 – ಅಲಹಾಬಾದ್ ಹೈಕೋರ್ಟ್‍ನ 1994ರ ತೀರ್ಪಿನ ವಿರುದ್ಧ ಸಲ್ಲಿಕೆಯಾದ ಅರ್ಜಿಗಳ ವಿಚಾರಣೆಗೆ ಸುಪ್ರೀಂಕೋರ್ಟ್‍ನಲ್ಲಿ ವಿಶೇಷ ಪೀಠ ರಚನೆ

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...