ಹಬ್ಬಕ್ಕೆ ಕರ್ಜಿಕಾಯಿ

ಕೊಬ್ಬರಿ ಕರ್ಜಿಕಾಯಿ, ಬೆಲ್ಲದ ಕರ್ಜಿಕಾಯಿ, ಎಳ್ಳಿನ ಕರ್ಜಿಕಾಯಿ, ಖೋವಾದ ಕರ್ಜಿಕಾಯಿ ಇನ್ನು ಅನೇಕ ಕರ್ಜಿಕಾಯಿ ವಿಧಗಳಿವೆ. ದೀಪಾವಳಿ ಹಬ್ಬಕ್ಕೆ ಸುಲಭವಾಗಿ ಎಳ್ಳಿನ ಕರ್ಜಿಕಾಯಿ ಮಾಡೋದು ಹೇಗೆ ಹೇಳುತ್ತೇವೆ.

1 ಕಪ್ ಮೈದಾಹಿಟ್ಟು, ಕಪ್ ಎಳ್ಳು, ಏಲಕ್ಕಿ, 1/2 ಕಪ್ ಹುರಿಗಡಲೆ, 1/4 ಕಪ್ ಗಸಗಸೆ, ಒಂದೂವರೆ ಕಪ್ ಕೊಬ್ಬರಿ, ಒಂದೂವರೆ ಕಪ್ ಸಕ್ಕರೆ, ಎಣ್ಣೆ

ತಯಾರಿಸುವ ವಿಧಾನ

ಎಳ್ಳನ್ನು ಹುರಿದು ಪುಡಿ ಮಾಡಿ. ನಂತರ ಎಳ್ಳಿನ ಪುಡಿಗೆ ಗಸಗಸೆ, ಕೊಬ್ಬರಿ ತುರಿ, ಏಲಕ್ಕಿಪುಡಿ, ಬೆಲ್ಲದ ಪುಡಿ ಹಾಕಿ ಬೆರೆಸಿ. ಮೈದಾಹಿಟ್ಟಿಗೆ ಅರ್ಧ ಸ್ಪೂನ್ ಉಪ್ಪು, 2 ಚಮಚ ತುಪ್ಪ ಮತ್ತು ನೀರು ಹಾಕಿ ಗಟ್ಟಿಯಾಗಿ ಕಲೆಸಬೇಕು.

ನಂತರ ಈ ಹಿಟ್ಟುನಿಂದ ಸಣ್ಣ ಸಣ್ಣ ಉಂಡೆಯನ್ನಾಗಿ ಮಾಡಿ ಲಟ್ಟಿಸಿ, ಅದಕ್ಕೆ ತಯಾರಿಸಿದ ಪುಡಿಯನ್ನು ಹಾಕಿ ಅರ್ಧ ಚಂದ್ರಾಕೃತಿ ಮಾಡಿ ಅಂಚುಗಳನ್ನು ಗಟ್ಟಿಯಾಗಿ ಒತ್ತಿ. ನಂತರ ಎಣ್ಣೆಯಲ್ಲಿ ಕಂದು ಬಣ್ಣ ಬರುವವರೆಗೆ ಕರಿದರೆ ಎಳ್ಳಿನ ಕರ್ಜಿಕಾಯಿ ರೆಡಿ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...