telangana ತೆಲಂಗಾಣ ವೈದ್ಯೆಯ ಹತ್ಯಾಚಾರ, ತ್ವರಿತ ವಿಚಾರಣೆಗೆ ವಿಶೇಷ ಕೋರ್ಟ್: ಕೆಸಿಆರ್

telangana

telangana ಕಾಮಾಂಧರಿಗೆ ಶೀಘ್ರ ಶಿಕ್ಷೆ ಆಗುವಂತೆ ವಿಶೇಷ ಕೋರ್ಟ್‌ ಘೋಷಿಸಿದ ತೆಲಂಗಾಣ ಸಿಎಂ

ಹೈದರಾಬಾದ್: ಬರ್ಬರವಾಗಿ ಹತ್ಯಾಚಾರಕ್ಕೀಡಾದ ವೈದ್ಯೆಯ ಆರೋಪಿಗಳ ( telangana) ತ್ವರಿತ ವಿಚಾರಣೆಗೆ ವಿಶೇಷ ನ್ಯಾಯಾಲಯ ಸ್ಥಾಪನೆಗೆ ತೆಲಂಗಾಣ ಸಿಎಂ ಚಂದ್ರಶೇಖರ್‍ ರಾವ್ ಆದೇಶಿಸಿದ್ದಾರೆ.

ಇದನ್ನೂ ಓದಿ: ತಿರುಪತಿ ತಿಮ್ಮಪ್ಪನ ವೆಬ್‌ಸೈಟಲ್ಲಿ ಏಸು ಕ್ರಿಸ್ತನ ಹೆಸರು

ಮಹಿಳೆಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಮಾಡಿ ನಂತರ ಆಕೆಯನ್ನು ದಹಿಸಿದ ನಾಲ್ವರು ಆರೋಪಿಗಳು ಈಗಾಗಲೇ ಪೊಲೀಸರ ವಶದಲ್ಲಿದ್ದು, ವಿಚಾರಣೆ ಶೀಘ್ರ ಗತಿಯಲ್ಲಿ ನಡೆಯುವಂತಾಗಲು ವಿಶೇಷ ನ್ಯಾಯಾಲಯ ಸ್ಥಾಪನೆಗೆ ತೆಲಂಗಾಣ ಸರಕಾರ ನಿರ್ಧರಿಸಿದೆ.

ನಾಲ್ವರು ಕಾಮಾಂಧರು 26 ವರ್ಷ ವಯಸ್ಸಿನ ಪಶು ವೈದ್ಯೆಯನ್ನು ಅತ್ಯಾಚಾರಗೈದು ಅಮಾನುಷವಾಗಿ ದಹನ ಮಾಡಿ ನಂತರ ಪೊಲೀಸರ ಅತಿಥಿಗಳಾಗಿದ್ದು, ಇವರಿಗೆ ಅತ್ಯುಗ್ರ ಶಿಕ್ಷೆಗೆ ಆಗ್ರಹಿಸಿ ತೆಲಂಗಾಣದಲ್ಲಿ ವ್ಯಾಪಕ ಪ್ರತಿಭಟನೆ ನಡೆದಿದೆ.

ಈ ಮಧ್ಯೆ ಹತ್ಯಾಚಾರದ ಸಂಬಂಧ ಪೊಲೀಸರ ರಿಮಾಂಡ್ ವರದಿ ಸಿದ್ಧವಾಗಿದ್ದು, ಇದರಲ್ಲಿ ಕೃತ್ಯದ ಭೀಕರತೆಯನ್ನು ದಾಖಲಿಸಲಾಗಿದೆ. ವರದಿಯ ಪ್ರಕಾರ ನಾಲ್ವರು ಕೀಚಕರು ವೈದ್ಯೆಯ ಬಾಯಿಗೆ ಬಲವಂತವಾಗಿ ವಿಸ್ಕಿ ಸುರಿದು ನಂತರ ಆಕೆಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ.

ಬಳಿಕ ಆಕೆಯನ್ನು ಕೊಂದು ಸುಮಾರು 60 ಕಿಮೀ ದೂರ ಸೇತುವೆಯೊಂದರ ಕೆಳಗೆ ದೇಹವನ್ನು ಎಸೆದು, ಪೆಟ್ರೋಲ್, ಡೀಸೆಲ್ ಸುರಿದು ದಹನ ಮಾಡಿದ್ದಾರೆ ಎಂದು ಪೊಲೀಸರ ವರದಿ ಹೇಳಿದೆ. ನಾಲ್ವರು ಆರೋಪಿಗಳೂ ತಪ್ಪೊಪ್ಪಿಕೊಂಡಿರುವುದಾಗಿ ಪೊಲೀಸರು ಹೇಳಿದ್ದಾರೆ

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...