tarakeshwar ತಾರಕೇಶ್ವರನಿಗೂ ಹೊಗೆ: ಲಿಂಗಕ್ಕೆ ಮುಸುಕು ಹಾಕಿ ಪೂಜೆ!

tarakeshwar
shivling coverd with mask in tarakeshwar

tarakeshwar ತಾರಕೇಶ್ವರ ಶಿವ ದೇಗುಲದಲ್ಲಿ ಮುಸಕು ಪೂಜೆ

ತಾರಕೇಶ್ವರ: ರಾಜಧಾನಿ ದಿಲ್ಲಿ ( tarakeshwar ) ಸೇರಿದಂತೆ ಉತ್ತರ ಭಾರತದ ಹಲವಾರು ಕಡೆ ವಾಯ ಮಾಲಿನ್ಯ ಅಂಕೆ ಮೀರಿದ್ದು, ಅದರಿಂದ ಕೇವಲ ಹುಲುಮಾನವರು ಮಾತ್ರವಲ್ಲ ದೇವರಿಗೂ ಸಂಕಷ್ಟ ಒದಗಿದೆ.

ಇದನ್ನೂ ಓದಿ: ಅಯೋಧ್ಯೆಯಲ್ಲಿ 4 ಸಾವಿರ ಹೆಚ್ಚುವರಿ ಯೋಧರ ನಿಯೋಜನೆ

ಹೌದು, ವಾಯು ಮಾಲಿನ್ಯದಿಂದ ದೇವರಿಗೆ ಉಸಿರಾಡಲು ಕಷ್ಟವಾಗಬಾರದು ಎಂದು ಮುಸುಕು ಹಾಕಿ ಪೂಜೆ ಮಾಡುವ ವಿನೂತನ ಸಂಪ್ರದಾಯವನ್ನು ಈ ಭಾಗದ ಅನೇಕ ದೇವಾಲಯಗಳಲ್ಲಿ ಅನುಸರಿಸಲಾಗುತ್ತಿದೆ.

ಸುಪ್ರಸಿದ್ಧ ತಾರಕೇಶ್ವರ ದೇವಸ್ಥಾನದಲ್ಲಿ ಶಿವಲಿಂಗಕ್ಕೆ ಬಟ್ಟೆಯ ಮುಸುಕು ಹಾಕಲಾಗಿದೆ. ಹಾಗೆಯೇ ಲಿಂಗಾರ್ಚನೆ, ಪೂಜೆ ಮಾಡುವ ಪೂಜಾರಿಗಳು ಸಹ ಬಾಯಿ, ಮೂಗಿಗೆ ಮುಸಕು ಧರಿಸಿಯೇ ಆ ದೇವರ ಕಾರ್ಯ ನೆರವೇರಿಸುತ್ತಾರೆ.

ಇಲ್ಲಿ ಗಾಳಿ ವಿಷವಾಗಿ ಪರಿಣಮಿಸಿದೆ. ಹೀಗಾಗಿ ಭೋಲೆ ಬಾಬಾನಿಗೆ (ಶಿವಲಿಂಗ) ಯಾವುದೇ ತೊಂದರೆ ಆಗದಿರಲಿ ಎಂದು ಮುಸುಕು ಹಾಕಿದ್ದೇವೆ. ಎಷ್ಟೆಂದರೂ ಆತ (ದೇವರು) ಚೆನ್ನಾಗಿದ್ದರೇ ನಾವು ಚೆನ್ನಾಗಿರುತ್ತೇವಲ್ಲವೇ ಎಂಬುದು ಇಲ್ಲಿನ ಭಕ್ತರ ಸಮಜಾಯಿಷಿ.

ಇದಲ್ಲದೇ ವಾರಣಾಸಿಯ ಅನೇಕ ದೇವಾಲಯಗಳಲ್ಲಿ ದೈವ ವಿಗ್ರಹಗಳಿಗೆ ಮುಸುಕು ಹಾಖಿಯೇ ಪೂಜಾ ಕೈಂಕರ್ಯ ನಡೆಸುತ್ತಿರುವ ದೃಷ್ಯಗಳನ್ನು ಭಕ್ತರು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...