ಪ್ರತಿದಿನ ಬೆಳ್ಳುಳ್ಳಿ ಬಳಸಿ ಆರೋಗ್ಯವಾಗಿರಿ

ಬೆಳ್ಳುಳ್ಳಿ ಎಲ್ಲರಿಗೂ ಸುಲಭವಾಗಿ ದೊರೆಯುವ ಹಾಗೂ ಅತ್ಯಂತ ಉಪಯುಕ್ತವಾದ ಔಷಧೀಯ ಗುಣವುಳ್ಳ ಬಹೂಪಯೋಗಿ ಪದಾರ್ಥವಾಗಿದೆ. ಬೆಳ್ಳುಳ್ಳಿಯು ನಮ್ಮ ಅಡುಗೆ ಮನೆಯಲ್ಲಿಸಿಗುವ ಔಷಧಿಗಳಲ್ಲಿ ಒಂದು. ಕೆಲವರು ಬೆಳ್ಳುಳ್ಳಿಯನ್ನು ತಿನ್ನುವುದೇ ಇಲ್ಲ. ಆರೋಗ್ಯದ ದೃಷ್ಟಿಯಿಂದ ಇದು ಸರಿಯಲ್ಲ. ಪ್ರತಿದಿನ ಎರಡು- ಮೂರು ಎಸಳು ಬೆಳ್ಳುಳ್ಳಿ ನುಂಗುವ ಅಭ್ಯಾಸ ಬೆಳೆಸಿಕೊಳ್ಳಿ. ಕಚ್ಚಿ ತಿನ್ನಲಾಗದಿದ್ದರೆ ಅರ್ಧ ಮಾಡಿ ನುಂಗಿ ನೀರು ಕುಡಿಯಿರಿ.

ಬೆಳ್ಳುಳ್ಳಿಯನ್ನು ಹೆಚ್ಚು ಹೊತ್ತು ಬೇಯಿಸುವುದರಿಂದ ಅದರ ಸತ್ವಗಳು ನಾಶವಾಗುತ್ತವೆ. ಆದ್ದರಿಂದ ಅಡುಗೆಯ ಕೊನೆಯಲ್ಲಿ ಬೆಳ್ಳುಳ್ಳಿಯನ್ನು ಜಜ್ಜಿ ಅಥವಾ ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಮಾಡಿ ಅಡುಗೆಗೆ ಉಪಯೋಗಿಸುವುದು ಉತ್ತಮ.

 • ಪ್ರತಿದಿನ ಹಸಿ ಬೆಳ್ಳುಳ್ಳಿ ತಿನ್ನುವುದರಿಂದ ಡೈ ಅಲೈಲ್ ಡೈ ಸಲ್ಪೈಡ್ ಎಂಬ ರಾಸಾಯನಿಕ ವಸ್ತು ಹೃದಯಾಘಾತ ಮತ್ತು ಪಾರ್ಶ್ವವಾಯುವಿನಲ್ಲಿ ಉಂಟಾಗುವ ರಕ್ತಹೆಪ್ಪುಗಟ್ಟುವಿಕೆಯನ್ನು ತಡೆಯುತ್ತದೆ. ಏರು ರಕ್ತದೊತ್ತಡ ಇರುವವರು ಪ್ರತಿದಿನ 4-5 ಬೆಳ್ಳುಳ್ಳಿ ಎಸಳುಗಳನ್ನು ತೆಗೆದುಕೊಳ್ಳಬೇಕು.
 • ಅಸ್ತಮಾದಿಂದ ಬಳಲುತ್ತಿರುವವರು ಬೆಳ್ಳುಳ್ಳಿ ರಸವನ್ನು ದಿನಕ್ಕೆರಡು ಬಾರಿ ಬಿಸಿ ನೀರಿನೊಂದಿಗೆ ಸೇವಿಸಬಹುದು ಅಥವಾ ಹತ್ತು ಹನಿ ಬೆಳ್ಳುಳ್ಳಿ ರಸಕ್ಕೆ ಎರಡು ಚಮಚ ಜೇನುತುಪ್ಪವನ್ನು ಹಾಕಿ ಪ್ರತಿದಿನ ತೆಗೆದುಕೊಂಡರೆ ಅಸ್ತಮಾ ನಿಯಂತ್ರಿಸಲು ಸಹಕಾರಿಯಾಗುತ್ತದೆ.
 • ರಕ್ತದ ಒತ್ತಡ, ವಾಯುರೋಗ, ಕೆಮ್ಮು, ದಮ್ಮು: ಪ್ರತಿದಿನ ಆಹಾರದೊಡನೆ ಸೇವಿಸುವುದು. ರಕ್ತದೊತ್ತಡ ಇರುವವರಿಗಂತೂ ಬೆಳ್ಳುಳ್ಳಿಯ ನಿತ್ಯ ಸೇವನೆ ಅನಿವಾರ್ಯವೆಂದು ತಿಳಿದುಬಂದಿದೆ.
 • ಹೊಟ್ಟೆ ಜಂತು ನಾಶಕ್ಕೆ ಒಂದು ಚಮಚ ಜೇನು ಮತ್ತು ಬೆಳ್ಳುಳ್ಳಿಯ ರಸ ಸೇವನೆ ಅತ್ಯುಪಯುಕ್ತವಾಗಿದೆ.
 • ಜೀರ್ಣಶಕ್ತಿ ವೃದ್ದಿಯಲ್ಲೂ ಬಿಸಿಬೂದಿ ಕಾವಿನಲ್ಲಿ ಸುಟ್ಟು ಬೆಳ್ಳುಳ್ಳಿಯ ಸೇವನೆ ಹೊಟ್ಟೆಯುಬ್ಬರ ನಿವಾರಿಸಿ, ಜೀರ್ಣಶಕ್ತಿಯನ್ನೂ ವೃದ್ದಿಸಲು ಸಹಕಾರಿಯಾಗಿದೆ.
 • ಜಂತು ನಿವಾರಕವಾಗಿ ಜೇಡ, ಹಲ್ಲಿ, ಜಿರಳೆ ಕಾಟದಿಂದ ದೂರವಿರಲು ಬೆಳ್ಳುಳ್ಳಿ ಹೊಟ್ಟಿನ ಹೊಗೆ ಹಾಕಬಹುದಾಗಿದೆ.
 • ಚೇಳು ಕಡಿತದಲ್ಲಿ ತಕ್ಷಣ ಜಡೆಹತ್ತಿ ಸೊಪ್ಪು, ಸಾಸಿವೆ ಜತೆ ಬೆಳ್ಳುಳಿಯನ್ನು ಅರೆದು ಕಡಿದ ಜಾಗಕ್ಕೆ ಹಚ್ಚುವುದರಿಂದ ವಿಷ ಇಳಿಯುವುದು.
 • ಕಿವಿನೋವಿನಲ್ಲಿ ಸೈಂಧವ ಲವಣವನ್ನೂ ಬೆಳ್ಳುಳ್ಳಿ ರಸದೊಡನೆ ಸೇರಿಸಿ ಕಿವಿಗೆ ಬಿಡುವುದರಿಂದ ನೋವು ನಿವಾರಣೆಯಾಗುವುದು.
 • ಮುಟ್ಟಿನ ದೋಷದಿಂದಾಗಿ ಸ್ತ್ರೀ ಗರ್ಭಾಶಯದಲ್ಲಿ ಉರಿ, ನೋವು ಇದ್ದಾಗ ಒಂದೂವರೆ ಲೋಟ ನೀರಲ್ಲಿ ಬೆಳ್ಳುಳ್ಳಿಯನ್ನು ಚೆನ್ನಾಗಿ ಬೇಯಿಸಿ ತ್ರಿಕಾಲ ಸೇವಿಸುವುದರಿಂದ ಉರಿಶಮನವಾಗುವುದು.
 • ಸಾಮಾನ್ಯ ಗಾಯಗಳಿಗೆ ಅಡುಗೆ ಉಪ್ಪು, ಹೊಂಗೆ ಬೀಜ ಮತ್ತು ಬೆಳ್ಳುಳ್ಳಿಗಳನ್ನು ಅರೆದು ಹಚ್ಚುವುದರಿಂದ ಗುಣಕಾರಿಯಾಗುತ್ತದೆ.
 • ಪಾರ್ಶ್ವವಾಯು : ಅರ್ಧ ತೊಲೆ ಬೆಳ್ಳುಳ್ಳಿ ಅರೆದು ಒಂದು ಲೋಟ ಹಾಲಿನೊಡನೆ ಕಾಯಿಸಿ ರಾತ್ರಿ ಮಲಗುವಾಗ ಕುಡಿಯುವುದು.
 • ಕೀವು ಸೋರುವ ಹುಣ್ಣುಗಳು: ಬೆಳ್ಳುಳ್ಳಿಯ ಕಷಾಯದಿಂದ ತೊಳೆದು ಎಣ್ಣೆಯಲ್ಲಿ ಕುದಿಸಿ ತಯಾರಿಸಿದ ಬೆಳ್ಳುಳ್ಳಿಯ ಸಾರವನ್ನು ಹುಣ್ಣುಗಳಿಗೆ ಹಚ್ಚಬೇಕು.
 • ಉಬ್ಬಸ: ಈ ರೋಗಿಗಳು ಪ್ರತಿದಿನ ರಾತ್ರಿ ಮಲಗುವುದಕ್ಕೆ ಮುಂಚೆ ಒಂದು ಚಾ ಚಮಚದಷ್ಟು ಬೆಳ್ಳುಳ್ಳಿ ರಸವನ್ನು ಅಷ್ಟೇ ಪ್ರಮಾಣದ ಜೇನು ತುಪ್ಪದೊಂದಿಗೆ ಕಲಸಿ ಸೇವಿಸಿದರೆ ಫಲಕಾರಿ.
 • ಕೆಮ್ಮು-ದಮ್ಮುಗಳಲ್ಲಿ ಮೊಸರಲ್ಲಿ 24 ಗಂಟೆ ಇಟ್ಟು ಸುಲಿದು ಅಂಕುರ ತೆಗೆದು ಹುರಿದು ಅಥವಾ ಸುಟ್ಟು 2-5 ಬೀಜಗಳನ್ನು ಪ್ರತಿದಿನ ಬಳಸಲು ತಿಳಿಸಲಾಗಿದೆ.
 • ಅಜೀರ್ಣದಲ್ಲಿಯೂ ಬೆಳ್ಳುಳ್ಳಿ(ಶುದ್ದ)ಯನ್ನು ತುಪ್ಪದಲ್ಲಿ ಹುರಿದು 4-5 ತಿನ್ನ ಬಹುದಾಗಿದೆ.
 • ಕಿವಿನೋವಿನಲ್ಲಿ ಎಣ್ಣೆಯಲ್ಲಿ ಬೆಳ್ಳುಳ್ಳಿಯನ್ನು ಕುಟ್ಟಿ ಹಾಕಿ ಕುದಿಸಿ ಆರಿದ ಮೇಲೆ ಹಾಕಲು ಕಿವಿಗೆ ಹಾಕಿ.
 • ಉಬ್ಬಸಕ್ಕೆ ಬೆಳ್ಳುಳ್ಳಿಯ ತೊಳೆಗಳನ್ನು (3-4)ಹಾಲಲ್ಲಿ ಬೇಯಿಸಿ ಸೇವಿಸುತ್ತಾ ಬರಬೇಕು.
 • ಬಾಯಿ ಲಕ್ವಾಕ್ಕೆ ಅರ್ಧ ತೊಲ ಬೆಳ್ಳುಳ್ಳಿ ಅರೆದು ಹಾಲಲ್ಲಿ ಸೇರಿಸಿ, ಸರಿಯಾಗಿ ಕಾಯಿಸಿ ರಾತ್ರಿ ಮಲಗುವಾಗ ಸೇವಿಸಬೇಕಾಗುತ್ತದೆ.
ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...