t-20 final ಕ್ರಿಕೆಟ್: ನಾಯಕ ಮನೀಶ್ ಮಿಂಚು: ಕರ್ನಾಟಕ ಚಾಂಪಿಯನ್

t-20 final
karnataka captain mansih pandey

t-20 final ಮುಷ್ತಾಕ್ ಅಲಿ ಟಿ-20 ಫೈನಲ್: ಕರ್ನಾಟಕ 180/5, ತಮಿಳುನಾಡು 179/6

ಸೂರತ್: ರೋಚಕ ಫೈನಲ್ ಪಂದ್ಯದಲ್ಲಿ ತ್ಮಿಳುನಡು ತಂಡವನ್ನು ಮಣಿಸಿ ಕರ್ನಾಟಕ ಸೈಯದ್ ಮುಷ್ತಾಕ್ ಅಲಿ t-20 ಚಾಂಪಿಯನ್ಶಿಪ್ ಗೆದ್ದುಕೊಂಡಿದೆ.

ಪಂದ್ಯ ಗೆಲ್ಲಲು 181 run ಗಳಿಸಬೇಕಿದ್ದ ತಮಿಳುನಾಡು 6 ವಿಕೆಟ್ ನಷ್ಟಕ್ಕೆ 179 ರನ್ ಮಾತ್ರ ಗಳಿಸಿ ಸೋಲೊಪ್ಪಿಕೊಂಡಿತು.

ಇದನ್ನೂ ಓದಿ: ತೆಲಂಗಾಣ ವೈದ್ಯೆಯ ಹತ್ಯಾಚಾರ, ತ್ವರಿತ ವಿಚಾರಣೆಗೆ ವಿಶೇಷ ಕೋರ್ಟ್: ಕೆಸಿಆರ್

ಟಾಸ್ ಗೆದ್ದ ತಮಿಳುನಾಡು ಮೊದಲು ಬ್ಯಾಟ್ ಮಾಡಲು ಕರ್ನಾಟಕಕ್ಕೆ ಅವಕಾಶ ನೀಡಿತು. ಎಚ್ಚರಿಕೆಯಿಂದಲೇ ಇನಿಂಗ್ಸ್ ಆರಂಭಿಸಿದ ರಾಹುಲ್ (22) ಮತ್ತು ದೇವದತ್ತ ಜೋಡಿ ಮೊದಲ ವಿಕೆಟ್‌ಗೆ 39 ರನ್ ಪೇರಿಸಿ ಬೇರ್ಪಟ್ಟಿತು. ರಾಹುಲ್‌ರನ್ನು ತಮ್ಮ ಬಲೆಗೆ ಕೆಡವಿದ ಅಶ್ವಿನ್ ಮರು ಎಸೆತದಲ್ಲಿಯೇ ಮಾಯಂಕ್‌ರನ್ನು ಸಹ ಬಲಿ ಪಡೆದರು.

ಈ ಹಂತದಲ್ಲಿ ಕೊಂಚ ಆತಂಕಕ್ಕೆ ಈಡಾದ ಕರ್ನಾಟಕವನ್ನು ನಾಯಕ ಮನೀಶ್ ಪಾರು ಮಾಡಿದರು. ಮೂರನೇ ವಿಕೆಟ್‌ಗೆ ದೇವದತ್ (32) ಜೊತೆ 48 ರನ್ ಜೊತೆಯಾಟ ನಿಭಾಯಿಸಿದ ಮನೀಶ್ ನಂತರ ರೋಹನ್ ಕದಂ (35) ಅವರೊಂದಿಗೆ ನಾಲ್ಕನೇ ವಿಕೆಟ್ಟಿಗೆ 65 ರನ್ ಪೇರಿಸಿ ತಂಡದ ಮೊತ್ತ ಉಬ್ಬಿಸಿದರು.

ಸೋಮವಾರ ವೈವಾಹಿಕ ಜೀವನಕ್ಕೆ ಕಾಲಿಡಲಿರುವ ಮನೀಶ್ ತಮಿಳುನಾಡಿನ ದಾಳಿಯ ಮೊನಚನ್ನು ಮಸುಕಾಗಿಸುವಲ್ಲಿ ಭರ್ಜರಿ ಯಶಸ್ಸು ಕಂಡರು. ತಂಡ ಸಂಕಷ್ಟದಲ್ಲಿದ್ದ ಸಂದರ್ಭದಲ್ಲಿ ಕಣಕ್ಕಿಳಿದ ಮನೀಶ್ ಪಾಂಡೆ 45 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 4 ಬೌಂಡರಿ ಒಳಗೊಂಡ 60 ರನ್ ಗಳಿಸಿ ಅಜೇಯರಾಗುಳಿದರು.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...