swiss bank ಭಾರತದ ಕೈಸೇರಿತು ಸ್ವಿಸ್ ಬ್ಯಾಂಕ್ ಕಾಳಕುಬೇರರ ಪಟ್ಟಿ

swiss bank
swiss bank headquarters

swiss bank ಮೋದಿ ಸರಕಾರದ ಐದು ವರ್ಷದ ಹಿಂದಿನ ಭರವಸೆ ಸಾಕಾರ

ಹೊಸದಿಲ್ಲಿ: ದೇಶದ ಹೊರಗೆ ಅದರಲ್ಲಿಯೂ ಸ್ವಿಸ್ ಬ್ಯಾಂಕಿನಲ್ಲಿ ( swiss bank ) ಕಾಪಿಡಲಾಗಿರುವ ಕಾಳಧನವನ್ನು ಹೊರತೆಗೆವ ಮೋದಿ ಸರಕಾರದ ಐದು ವರ್ಷಗಳ ಹಿಂದಿನ ಶಪಥ ಈಡೇರುವ ಕಾಲ ಬಂದಿದೆ. ತನ್ನ ಬ್ಯಾಂಕಿನಲ್ಲಿ ರಹಸ್ಯವಾಗಿ ಹಣ ಇಟ್ಟಿರುವ ಕಾಳಕುಬೇರರ ಮೊದಲ ಪಟ್ಟಿಯನ್ನು ಸ್ವಿಸ್ ಅಧಿಕಾರಿಗಳು ಭಾರತಕ್ಕೆ ಒಪ್ಪಿಸಿದ್ದಾರೆ.

ಇದನ್ನೂ ಓದಿ: ಮುಂಬಯಿ ಭಿಕ್ಷುಕನ ಮನೆಯಲ್ಲಿತ್ತು 10 ಲಕ್ಷ ರೂ!

ಸ್ವಿಜರ್ಲೆಂಡ್ ಫೆಡರಲ್‌ ಟ್ಯಾಕ್ಸ್‌ ಅಡ್ಮಿನಿಸ್ಟೇಷನ್‌ (ಎಫ್‌ಟಿಎ) 75 ರಾಷ್ಟ್ರಗಳ ಒಟ್ಟಾರೆ 3.1 ಮಿಲಿಯನ್‌ ಖಾತೆದಾರರ ಮಾಹಿತಿಯನ್ನು ವಿನಿಮಯ ಮಾಡಿಕೊಂಡಿದೆ. ಇದರ ಅಂಗವಾಗಿ ಭಾರತದ ಜೊತೆಗೂ ಮಾಹಿತಿ ಹಂಚಿಕೊಂಡಿದೆ.

ಈ ಮಾನದಂಡದ ಅಡಿಯಲ್ಲಿ ಭಾರತಕ್ಕೆ ತನ್ನ ನಾಗರಿಕರ ಸ್ವಿಸ್‌ ಬ್ಯಾಂಕ್‌ ಖಾತೆಗಳ ವಿವರ ಕುರಿತ ಮಾಹಿತಿ ಲಭ್ಯವಾಗಿದೆ. ಸದ್ಯ ಸಕ್ರೀಯವಾಗಿರುವ ಖಾತೆಗಳು ಮತ್ತು 2018ರಲ್ಲಿ ರದ್ದಾದ ಖಾತೆಗಳ ಮಾಹಿತಿಗಳೂ ಈ ಪಟ್ಟಿಯಲ್ಲಿ ಇದೆ ಎಂದು ಹೇಳಲಾಗುತ್ತಿದೆ.

ಸ್ವಿಸ್‌ ಬ್ಯಾಂಕ್ ಹಂಚಿಕೊಂಡಿರುವ ಮಾಹಿತಿಯಲ್ಲಿ ಖಾತೆದಾರನ ಹೆಸರು, ವಿಳಾಸ, ಖಾತೆಯಲ್ಲಿ ನಡೆಸಿರುವ ವ್ಯವಹಾರದ ಮಾಹಿತಿ, ಒಟ್ಟು ಹಣ, ಆದಾಯ, ಆದಾಯದ ಮೂಲದ ಬಗ್ಗೆ ಖಾತೆದಾರ ನೀಡಿರುವ ಮಾಹಿತಿ ಎಲ್ಲವೂ ಒಳಗೊಂಡಿದೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...