suresh ಅನುಕರಣೀಯ ಕೆಲಸ: ದರ್ಶನ್ ಅಭಿಮಾನಿಗಳ ಬೆನ್ನು ತಟ್ಟಿದ ಸಚಿವ ಸುರೇಶ್

suresh
education minister suresh kumar and darshan

suresh ಸರಕಾರಿ ಶಾಲೆ ದತ್ತು ಪಡೆದ ದರ್ಶನ್ ಅಭಿಮಾನಿಗಳಿಗೆ ಸುರೇಶ್ ಮೆಚ್ಚುಗೆ

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್‍ ದರ್ಶನ್ ( suresh ) ಅಭಿಮಾನಿಗಳು ಮಾಡಿರುವ ಒಂದು ಉತ್ತಮ ಕೆಲಸ ಸರಿಯಾದ ಕಾರಣಗಳಿಗಾಗಿಯೇ ಪ್ರಶಂಸೆಗೆ ಪಾತ್ರವಾಗುತ್ತಿದೆ.

ಇದನ್ನೂ ಓದಿ: ಆಯುಷ್ಮಾನ್‌ಗೆ ಮಾತುಕೊಟ್ಟ ಶಿವಣ್ಣ

ಹಾಸನದ ಕುಗ್ರಾಮವೊಂದರ ಸರಕಾರಿ ಶಾಲೆಯನ್ನು ದತ್ತು ಪಡೆದ ದರ್ಶನ್ ಅಭಿಮಾನಿಗಳ ಸ್ತುತ್ಯಾರ್ಹ ಕೆಲಸ ಈಗ ಸರಕಾರದ ಗಮನವನ್ನೂ ಸೆಳೆದಿದೆ. ದರ್ಶನ್ ಅಭಿಮಾನಿಗಳು ಈ ಉದಾತ್ತ ಕ್ರಮವನ್ನು ಶಿಕ್ಷಣ ಸಚಿವ ಸುರೇಶ್ ಕುಮಾರ್‍ ಅವರು ಮುಕ್ತಕಂಠದಿಂದ ಶ್ಲಾಘನೆ ಮಾಡಿದ್ದಾರೆ.

ಈ ಅನುಕರಣೀಯ ಕಾರ್ಯ ಮಾಡಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ (ಡಿಬಾಸ್) ಅಭಿಮಾನಿಗಳಿಗೆ ರಾಜ್ಯದ ಶಿಕ್ಷಣ ಸಚಿವನಾಗಿ ನನ್ನ ಹೃತ್ಪೂರ್ವಕ ಅಭಿನಂದನೆಗಳು ಎಂದು ಸುರೇಶ್ ಕುಮಾರ್‍ ಹೇಳಿದ್ದಾರೆ.

ಹಾಸನದ ಸಕಲೇಶಪುರ ತಾಲೂಕಿನ ರಾಮೇನಹಳ್ಳಿ ಗ್ರಾಮದಲ್ಲಿರುವ ಸರಕಾರಿ ಶಾಲೆಯನ್ನು ಎರಡು ವರ್ಷದ ಅವಧಿಗೆ ನಟ ದರ್ಶನ್ ಅಭಿಮಾನಿಗಳು ದತ್ತು ಪಡೆದಿದ್ದಾರೆ.

ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುವ ಮಕ್ಕಳಿಗೆ ಸಮವಸ್ತ್ರ, ಪುಸ್ತಕ, ಶಾಲಾ ಕಟ್ಟಡಕ್ಕೆ ಬಣ್ಣ, ಪೀಠೋಪಕರಣ ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳನ್ನು ನೀಡುವ ವಾಗ್ದಾನವನ್ನು ದರ್ಶನ್ ಅಭಿಮಾನಿಗಳು ನೀಡಿದ್ದಾರೆ ಎಂದು ಪಬ್ಲಿಕ್ ಟಿವಿ ವರದಿ ಮಾಡಿತ್ತು.

ಕನ್ನಡ ಸಿನಿ ತಾರೆಯರ ಸಾಮಾಜಿಕ ಕಳಕಳಿ ಹೊಸದೇನಲ್ಲ. ಆದರೂ ಒಂದಿಡೀ ಶಾಲೆಯನ್ನು ಅವರ ಅಭಿಮಾನಿಗಳು ದತ್ತು ಪಡೆದು ಅಭಿವೃದ್ಧಿ ಮಾಡಬಯಸಿರುವುದು ನಿಜಕ್ಕೂ ದೊಡ್ಡ ವಿಷಯವೇ ಸರಿ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...