supriya ಸುಪ್ರಿಯಾಗೆ ಮಂತ್ರಿಗಿರಿ ಆಫರ್ ಮಾಡಿದ್ದ ಮೋದಿ: ಪವಾರ್ ಹೊಸ ಬಾಂಬ್

supriya
pawar, supriya and pm modi

supriya ಪಿಎಂ ಮೋದಿ ಒಡ್ಡಿದ್ದ ಆಮಿಷವನ್ನು ನಾನೇ ತಿರಸ್ಕರಿಸಿದೆ ಎಂದ ಶರದ್ ಪವಾರ್

ಮುಂಬೈ: ತಮ್ಮ ಪುತ್ರಿ ಸುಪ್ರಿಯಾ ಸುಳೆಗೆ ಕೇಂದ್ರ ಸಂಪುಟದಲ್ಲಿ ( supriya ) ಮಂತ್ರಿ ಮಾಡುವ ಆಫರನ್ನು ಖುದ್ದು ಪ್ರಧಾನಿ ನರೇಂದ್ರ ಮೋದಿ ನೀಡಿದ್ದರು, ಆದರೆ ನಾನೇ ಅದನ್ನು ತಿರಸ್ಕರಿಸಲು ಹೇಳಿದೆ ಎಂದು ಎನ್ಸಿಪಿ ಅಧ್ಯಕ್ಷ ಶರದ್ ಪವಾರ್ ಹೊಸ ಬಾಂಬ್ ಸಿಡಿಸಿದ್ದಾರೆ.

ಇದನ್ನೂ ಓದಿ: ಇಸ್ರೊ, ನಾಸಾ ಮಾಡಲಾಗದ್ದನ್ನು ಮಾಡಿ ತೋರಿಸಿದ ಯುವಕ

ತಮ್ಮೊಂದಿಗೆ ಕೆಲಸ ಮಾಡುವಂತೆ ಮೋದಿ ಹಲವು ಬಾರಿ ನನಗೆ ಆಹ್ವಾನ ನಿಡಿದ್ದರು. ಆದರೆ ನಿಮ್ಮ ಜೊತೆ ಕೈಜೋಡಿಸಲು ಸಿದ್ಧಾಂತ ಅಡ್ಡಬರುತ್ತದೆ ಎಂದು ಅವರಿಗೆ ನೇರವಾಗಿಯೇ ತಿಳಸಿದ್ದೆ ಎಂದು ಪವಾರ್ ಮರಾಠಿ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಮಹಾರಾಷ್ಟ್ರ ಸರಕರಾಸ ರಚನೆ ಬಿಕ್ಕಟ್ಟಿನ ಸಂದರ್ಭದಲ್ಲಿ ತಮಗೆ ರಾಷ್ಟ್ರಪತಿ ಹುದ್ದೆಯ ವೀಳ್ಯ ನೀಡಲಾಗಿತ್ತು ಎಂಬ ವರದಿಗಳನ್ನು ಸ್ಪಷ್ಟವಾಗಿ ನಿರಾಕರಿಸಿದ ಶರದ್ ಪವಾರ್‍, ಆದರೆ ನನ್ನ ಮಗಳನ್ನು ಮಂತ್ರಿ ಮಾಡುವ ಆಫರ್‍ ಅಂತೂ ಇತ್ತು ಎಂದಿದ್ದಾರೆ.

ಮಹಾರಾಷ್ಟ್ರದಲ್ಲಿ ಮತ್ರಿ ಸರಕಾರ ರಚನೆಗೂ ಮುನ್ನ ಮೋದಿ ಹಾಗೂ ಪವಾರೆ ಪರಸ್ಪರ ಭೇಟಿಯಾಗಿದ್ದು ಸಾಕಷ್ಟು ಊಹಾಪೋಹಗಳಿಗೆ ಕಾರಣವಾಗಿತ್ತು. ಶರದ್ ಪವಾರ್‍ ಮತ್ತವರ ಎನ್ಸಿಪಿಯು ಬಿಜೆಪಿ ಜೊತೆ ಹೋಗಬಹುದು ಎಂಬ ಶಂಕೆ ಹುಟ್ಟುಹಾಕಿತ್ತು. ಆದರೆ ನಂತರದಲ್ಲಿ ಅದು ಹುಸಿಯಾಯಿತು.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...