sunil ಮಾಜಿ ಐಎಎಸ್ ಸೆಂದಿಲ್‌ ಬೆನ್ನಿಗೆ ಬಿದ್ದ ಬಿಜೆಪಿ ನಾಯಕರು

sunil
mla sunil kumar

sunil ಅನಂತ್ ಕುಮಾರ್ ಹೆಗಡೆ ಬಳಿಕ ಈಗ ಸುನಿಲ್ ಕುಮಾರ್ ಟೀಕಾಸ್ತ್ರ

ಬೆಂಗಳೂರು: ಪ್ರಜಾಭುತ್ವಕ್ಕೆ ಧಕ್ಕ್‌ಎ ಎದುರಾಗಿದೆ ಎಂಬ ನೆಪವೊಡ್ಡಿ ( sunil ) ಐಎಎಸ್‌ಗೆ ರಾಜೀನಾಮೆ ನೀಡಿದ್ದ ಅಧಿಕಾರಿ ಸಸಿಕಾಂತ್ ಸೆಂಡಿಲ್ ವಿರುದ್ಧ ಬಿಜೆಪಿ ನಾಯಕರ ವಾಗ್ದಾಳಿ ನಿರಂತರವಾಗಿ ಮುಂದುವರಿದಿದೆ.

ಇದನ್ನೂ ಓದಿ: ದೇಶದ ವಿವಿಧತೆಗೆ ಧಕ್ಕೆ: ದಕ ಜಿಲ್ಲಾಧಿಕಾರಿ ಶಶಿಕಾಂತ್ ರಾಜೀನಾಮೆ

ರಾಜೀನಾಮೆ ನೀಡುವಾಗ ಪರೋಕ್ಷವಾಗಿ ಕೇಂದ್ರ ಸರಕಾರದ ನೀತಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದ ಸೆಂದಿಲ್ ಅವರನ್ನು ಗದ್ದಾರ್‍ ಎನ್ನುವ ರಿತಿಯಲ್ಲಿ ಜರೆದು ಪಾಕಿಸ್ತಾನಕ್ಕೆ ಹೋಗುವಂತೆ ಸಂಸದ ಅನಂತ್ ಕುಮಾರ್‍ ಹೆಗಡೆ ಟ್ವೀಟಿಸಿದ್ದರು.

ಅದರ ಬೆನ್ನಲ್ಲಿಯೇ ಈಗ ಶಾಸಕ ಸುನೀಲ್ ಕುಮಾರ್‍ ಸಹ ಸೆಂದಿಲ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಿ ಮೋದಿ ಅವರು ದೇಶದ ಹಿತದೃಷ್ಟಿಯಿಂದ ತೆಗೆದುಕೊಳ್ಳುವ ನಿರ್ಧಾರಗಳು ಪಥ್ಯವಾಗದವರು (ನಿಮ್ಮಂತಹವರು), ಅಂತಹ ಮನಸ್ಥಿತಿ ಹೊಂದಿರುವವರು ಮುಂದೆ ಆತ್ಮಹತ್ಯೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಬರಬಹುದು ಎಂದು ಸುನಿಲ್ ಹೇಳಿದ್ದಾರೆ.

ಕಾಶ್ಮೀರದ ಬಗ್ಗೆ ದಿಟ್ಟ ನಿಲುವು ತಳೆದ ಮೋದಿ ಸರಕಾರ ಮುಂದೆ ರಾಮ ಮಂದಿರ ವಿಚಾರದಲ್ಲಿ ಸಹ ಖಚಿತ ಹೆಜ್ಜೆ ಇಡಲಿದೆ. ಅಷ್ಟೇ ಏಕೆ ಪಾಕ್ ಆಕ್ರಮಿತ ಕಾಶ್ಮೀರವನ್ನು ವಾಪಸ್ ಪಡೆಉಲಿದೆ. ಇದೆಲ್ಲ ನೋಡಬಯಸದ ಮನಸ್ಥಿತಿ ಉಳ್ಳವರು ಆತ್ಮಹತ್ಯೆ ಮಾಡಿಕೊಳ್ಳಬೇಕಾದ ಸ್ಥಿತಿ ಬರಬಹುದು ಎಂದು ಸುನಿಲ್ ಕಿಚ್ಚು ಹಚ್ಚಿದ್ದಾರೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...