sullya ಈ ಶಾಲೆಯಲ್ಲಿ ಸ್ವಚ್ಛತೆ ನಾಸ್ತಿ, ಮಕ್ಕಳಿಗಿಲ್ಲ ನೆಮ್ಮದಿ

hapless children

sullya  ಸುಳ್ಯದ ಜಯನಗರ ಶಾಲೆಯ ದುರವಸ್ಥೆ

ಸುಳ್ಯ: ಒಂದು ಕಡೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಶಾಲೆಗಳಲ್ಲಿ ಗ್ರಾಮ ವಾಸ್ತವ್ಯ ( sullya  ) ಆರಂಭಿಸಿದ್ದರೆ, ಮತ್ತೊಂದೆಡೆ ಅಸಂಖ್ಯಾತ ಶಾಲೆಗಳು ಮೂಲ ಸೌಕರ್ಯಗಳಿಲ್ಲದೇ ಸೊರಗುತ್ತಿವೆ.

ಇದನ್ನೂ ಓದಿ: ಮಧ್ಯಾಹ್ನದ ಹೊತ್ತು ಮಲಗಿದರೆ, ಅದ್ಬುತ ಪ್ರಯೋಜನಗಳು

ಪ್ರಾಥಮಿಕ ಶಿಕ್ಷಣಕ್ಕೆ ಸರಕಾರಗಳ ಅನಾದರದ ಮತ್ತೊಂದು ಸಂಕೇತವಾಗಿ ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯ ಮೂರನೇ ವಾರ್ಡ್‌‌ನ
ಜಯನಗರ ಶಾಲೆ ನಿಂತಿದೆ.

sullya
pathetic contion of the school in sullya

ಪ್ರತಿದಿನ ಮಕ್ಕಳಿಗೆ ಬಿಸಿಯೂಟವೇನೋ ನೀಡುತ್ತಾರೆ. ಆದರೆ ಮಕ್ಕಳು ಊಟ ಮಾಡಿದ ತಟ್ಟೆಯನ್ನು ಹಿಡಿದುಕೊಂಡು ತೊಳೆಯಲು ನೀರಿಗಾಗಿ ಪಕ್ಕದ ರಸ್ತೆಯಲ್ಲಿ ಓಡಾಡುವ ದೃಶ್ಯ ಇಲ್ಲಿ ಸರ್ವೇ ಸಾಮಾನ್ಯ. ಕಾರಣ ಶಾಲೆಯಲ್ಲಿ ನೀರಿಲ್ಲ.

ಮಕ್ಕೆಳ ಈ ಪಡಿಪಾಟಲನ್ನು ಕಂಡ ನಗರ ಪಂಚಾಯತ್ ಸದಸ್ಯ ಬಾಲಕೃಷ್ಣ ಭಟ್ ತಕ್ಷಣ ಶಾಲೆಗೆ ಬೇಟಿ ನೀಡಿ ವಿಚಾರಿಸಿದಾಗಲೇ ತಿಳಿದಿದ್ದು ಕಳೆದ ಮೂರು ದಿನಗಳಿಂದ ಶಾಲೆಗೆ ನೀರು ಬಂದಿಲ್ಲ ಎಂದು.

ಕುಡಿಯುವ ನೀರಿನ ಟ್ಯಾಂಕ್ ಮತ್ತು ಶೌಚಾಲಯ ಸ್ವಚ್ಚತೆ ಇಲ್ಲದೇ ದುರ್ವಾಸನೆ ಬರುತ್ತಿದ್ದು, ಶಾಲಾ ಸುತ್ತಮುತ್ತಲಿನಲ್ಲಿ ಸ್ವಚ್ಚತೆ ಇಲ್ಲದಂತಾಗಿದೆ.

ಮಕ್ಕಳಿಗೆ ಇಷ್ಟೆಲ್ಲ ತೊಂದರೆ ಆಗುತ್ತಿದ್ದರೂ ಈ ವಿಚಾರವನ್ನು ತಮ್ಮ ಗಮನಕ್ಕೆ ತಾರದ ಬಗ್ಗೆ ಭಟ್ ಅವರು ಶಾಲಾ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಈ ಸಂದರ್ಭದಲ್ಲಿ ವಸಂತ ಕುದ್ಪಾಜೆ, ಬಾಬು ಕೆ.ಪಿ, ಸೆಪಿಕ್ ಜಯನಗರ, ವಿವೇಕ್ ಕುದ್ಪಾಜೆ ಮುಂತಾದವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...