sudeep pailwaan ಚೀನಾಕ್ಕೆ ಹೊರಟ ಕಿಚ್ಚ ಪೈಲ್ವಾನ್

sudeep pailwaan
sudeep in pailwan

sudeep pailwaan ಸೂಪರ್ ಹಿಟ್ ಪೈಲ್ವಾನ್ ಈಗ ಚೀನಿ ಭಾಷೆಗೆ ಡಬ್

ಬೆಂಗಳೂರು: ಭರ್ಜರಿ ಯಶಸ್ಸಿನ ಹಾದಿಯಲ್ಲಿ ನಾಗಾಲೋಟದಲ್ಲಿ ( sudeep pailwaan ) ಮುನ್ನುಗ್ಗುತ್ತಿರುವ ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಇದೀಗ ದೇಶದ ಗಡಿ ದಾಟಿ ಹೋಗುವ ಸಿದ್ಧತೆಯಲ್ಲಿದೆ.

ಇದನ್ನೂ ಓದಿ: ಯಾರನ್ನೋ ತುಳಿದು ಉದ್ಧಾರ ಆಗೋ ಅವಶ್ಯಕತೆ ನನಗಿಲ್ಲ: ಸುದೀಪ

ಹೌದು ಈಗಾಗಲೇ ಪಂಚ ಭಾಷೆಗಳಲ್ಲಿ ಬಿಎಉಗಡೆ ಕಂಡು ಯಶಸ್ವಿಯೂ ಆಗಿರುವ ಪೈಲ್ವಾನ್ ಚಿತ್ರವನ್ನು ಚೀನಾಕ್ಕೆ ಕೊಂಡೊಯ್ಯಲು ಚಿತ್ರತಂಡ ಸಿದ್ಧತೆ ನಡೆಸಿದೆ.

ಚೀನೀ ಮಾರುಕಟ್ಟ ಬೃಹತ್ ಮಟ್ಟದ್ದಾಗಿದ್ದು ಅಲ್ಲಿ ಭಾರತೀಯ ಚಿತ್ರಗಳಿಗೆ ಉತ್ತಮ ಸ್ಪಂದನೆಯೂ ಇದೆ. ಆಮಿರ್‍ ಖಾನ್ ಅವರ ಅನೇಕ ಚಿತ್ರಗಳು ಚೀನಿ ಮಾರುಕಟ್ಟಯಲ್ಲಿ ದುಡ್ಡು ಕೊಳ್ಳೆ ಹೊಡೆದಿವೆ.

ಇದೇ ಜಾಡನ್ನು ಹಿಡಿದು ಚೀನಿ ಪ್ರೇಕ್ಷಕರಿಗೆ ಕಿಚ್ಚನ ಪೈಲ್ವಾನನ ದರ್ಶನವನ್ನು ಮಾಡಿಸುವ ಭರಾಟೆಯಲ್ಲಿ ನಿರ್ದೇಶಕ ಕೃಷ್ಣ ನಿರತರಾಗಿದ್ದಾರೆ.

ಖುದ್ದು ಚಿತ್ರ ನಿರ್ಮಾಪಕರೂ ಆಗಿರುವ ಕೃಷ್ಣ ಚೀನಿ ಭಾಷೆಗೆ ಚಿತ್ರವನ್ನು ದಬ್ ಮಾಡುವ ಕೆಲಸದಲ್ಲಿ ಇದೀಗ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಚೀನೀಯರು ಸಹ ’ಬಂದ ನೋಡು ಪೈಲ್ವಾನ್’ ಎಂದು ಹೇಳುವ ಕಾಲ ದೂರವಿಲ್ಲ ಎನ್ನುತ್ತದೆ ಚಿತ್ರತಂಡ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...