statue fight ಏಸು ಪ್ರತಿಮೆ ವಿವಾದ: ಡಿಕೆಶಿ ತವರಲ್ಲಿ ಹಿಂದೂ ಶಕ್ತಿ ಪ್ರದರ್ಶನ

statue fight ಕಪಾಲ ಬೆಟ್ಟದಲ್ಲಿ ಏಸು ಅಲ್ಲ ಮನೇಶ್ವರ ನೆಲೆಸಲಿದ್ದಾನೆ: ಕಲ್ಲಡ್ಕ ಪ್ರಭಾಕರ ಭಟ್ ಗುಡುಗು

ಕನಕಪುರ: ಕಳೆದ ನಾಲ್ಕು ದಶಕಗಳಿಂದ ಡಿಕೆ ಶಿವಕುಮಾರ್ ಸೋದರರ ( statue fight ) ಭದ್ರಕೋಟೆಯಾಗಿರುವ ಕನಕಪುರದಲ್ಲಿ ಏಸು ಪ್ರತಿಮೆ ನಿರ್ಮಾಣ ವಿರೋಧಿಸಿ ಹಿಂದು ಜಾಗರಣ ಮಂಚದ ನೇತೃತ್ವದಲ್ಲಿ ಸೋಮವಾರ ಹಿಂದೂ ಶಕ್ತಿ ಪ್ರದರ್ಶನ ನಡೆಯಿತು.

ಇದನ್ನೂ ಓದಿ: ಏಸು ಪ್ರತಿಮೆಗೆ ವಿರೋಧ: ಕನಕಪುರದಲ್ಲಿ 1000 ಪೊಲೀಸರ ಸರ್ಪಗಾವಲು

ಹಾರೋಬೆಲೆಯಲ್ಲಿ ದಾಖಲೆಯೆ ಎತ್ತರದ ಏಸು ಪ್ರತಿಮೆ ನಿರ್ಮಾಣ ಮಾಡುವ ಶಿವಕುಮಾರ್‍ ಅವರ ಪ್ರಯತ್ನದ ವಿರುದ್ಧ ವಿವಿಧ ಹಿಂದೂಪರ ಸಂಘಟನೆಗಳು ಸೋಮವಾರ ಕನಕಪುರ ಚಲೋ ಆಯೋಜಿಸಿದ್ದವು. ಸುಮಾರು ಹತ್ತು ಸಾವಿರ ಕಾರ್‍ಯತಕರ್ತರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು ಎನ್ನಲಾಗಿದೆ.

ಕಪಾಲ ಬೆಟ್ಟವನ್ನು ಮುನೇಶ್ವರ ಬೆಟ್ಟವನ್ನಾಗಿಸಿ ಅಲ್ಲಿ ಏಸು ಬದಲು ಮುನೇಶಾವರ ಭವ್ಯ ಮೂರ್ತಿಯನ್ನು ನಿರ್ಮಿಸಿಯೇ ಸಿದ್ಧ. ಸಾಧ್ಯವಾದರೆ ಇದನ್ನು ತಡೆಯಿರಿ ಎಂದು ಜಾಥಾದ ಮುಖಂಡತ್ವ ವಹಿಸಿಕೊಂಡಿದ್ದ ಕಲ್ಲಡ್ಕ ಪ್ರಭಾಕರ ಭಟ್ ನೇರವಾಗಿ ಡಿಕೆಶಿಗೆ ಸವಾಲು ಹಾಕಿದರು.

ಹಲವು ವರ್ಷಗಳಿಂದ ಈ ಭಾಗದಲ್ಲಿ ಮುಗ್ದರು, ಬಡವರನ್ನು ಗುರಿಯಾಗಿಟ್ಟುಕೊಂಡು ಹಣದ ಆಮಿಷವೊಡ್ಡಿ ಮತಾಂತರ ನಡೆಸಲಾಗುತ್ತಿದೆ. ಈಗ ಏಸು ಪ್ರತಿಮೆ ನಿರ್ಮಾಣ ಮಾಡಿದರೆ ಮತಾಂತರಕ್ಕೆ ನೇರವಾದ ವೇದಿಕೆ ಕಲ್ಪಿಸಿದಂತಾಗುತ್ತದೆ ಎಂದು ಪ್ರಭಾಕರ್ ಭಟ್ ಆರೋಪಿಸಿದರು.

ಕಪಾಲ ಬೆಟ್ಟದಲ್ಲಿ ಯಾವುದೇ ಕಾರಣಕ್ಕೂ ಏಸು ಪ್ರತಿಮೆ ಸ್ಥಾಪನೆಗೆ ಅವಕಾಶ ನೀಡುವುದಿಲ್ಲ ೆಂದು ಗುಡುಗಿದ ಭಟ್ಟರು ನಮ್ಮ ತಾಕತ್ತು ಏನು ಎಂದು ಅವರಿಗೆ (ಡಿಕೆಶಿ) ತೋರಿಸುತ್ತೇವೆ ಎಂದರು.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...