srinivas gowda ಬಿಜೆಪಿ ಸೇರುವ ಸೂಚನೆ ಕೊಟ್ಟ ಕೋಲಾರ ಗೌಡರು

srinivas gowda
kolar mla srinivas gowda

srinivas gowda  ಜೆಡಿಎಸ್ ಗೋಡೆ ಹಾರುವ ಮುನ್ಸೂಚನೆ ನೀಡಿದ ಶ್ರೀನಿವಾಸ ಗೌಡರು

ಕೋಲಾರ: ಸ್ಥಳೀಯ ಶಾಸಕ ಶ್ರೀನಿವಾಸ ಗೌಡರು ಜಾತ್ಯತೀತ ( srinivas gowda ) ಜನತಾ ದಳ ಬಿಟ್ಟು ಬಿಜೆಪಿ ಸೇರುವ ಸುಳಿವು ನೀಡಿದ್ದಾರೆ. ಜೆಡಿಎಸ್ ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ. ಅನೇಕರು ಹೊರನಡೆಯಬಹುದು ಎಂಬ ವರದಿಗಳ ಬೆನ್ನಲ್ಲಿಯೇ ಶ್ರೀನಿವಾಸ ಗೌಡರ ಹೇಳಿಕೆಗಳು ಕಾರ್ಯಕರ್ತರಲ್ಲಿ ಅನುಮಾನ ಮೂಡಿಸಿದೆ.

ಇದನ್ನೂ ಓದಿ: ಮತ್ತೆ ರಾಷ್ಟ್ರ ರಾಜಕಾರಣಕ್ಕೆ ದೇವೇಗೌಡ್ರು: ಎಚ್ಡಿಕೆ ಸುಳಿವು

ಕಳೆದ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಇದ್ದರೂ ಕಾಂಗ್ರೆಸ್ ಅಭ್ಯರ್ಥಿ ಮುನಿಯಪ್ಪ ವಿರುದ್ಧಶ ಬಿಜೆಪಿಯ ಮುನಿರಾಜು ಪರ ಕೆಲಸ ಮಾಡಿ ಅವರ ಗೆಲುವಿಗೆ ಕಾರಣರಾಗಿದ್ದ ಶ್ರೀನಿವಾಸ ಗೌಡರು ತಮ್ಮ ಮುಂದಿನ ನಿಲ್ದಾಣ ಯಾವುದು ಎಂಬುದನ್ನೂ ಈಗಲೇ ಹೇಳಲಾಗದು ಎನ್ನುವ ಮೂಲಕ ಪಕ್ಷ ತೊರೆಯುವ ಸುಳಿವು ನೀಡಿದ್ದಾರೆ.

ಎಲ್ಲ ಪಕ್ಷಗಳನ್ನೂ ನೋಡಿದ್ದೇನೆ. ರಾಜಕೀಯ ಎಂಬುದು ನಿಂತ ನೀರಲ್ಲ. ನಾಳೆ ಏನಾಗುತ್ತದೆ ಎಂದು ಇಂದು ಹೇಳಲು ಬರುವುದಿಲ್ಲ. ಸಂದರ್ಭಗಳಿ ಅನುಸಾರ ತೀರ್ಮಾನಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದು ಶ್ರೀನಿವಾಸ ಗೌಡರು ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತ ಹೇಳಿದ್ದು, ಇದು ನಾನಾ ಊಹಾಪೋಹಗಳಿಗೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...