spg protection ಸೋನಿಯಾ, ರಾಹುಲ್, ಪ್ರಿಯಾಂಕಾ ಎಸ್‍ಪಿಜಿ ಭದ್ರತೆ ರದ್ದು

spg protection
the nehru-ganshi family

spg protection ಸೋನಿಯಾ ಕುಟುಂಬದ ಭದ್ರತೆ z+ ಶ್ರೇಣಿಗೆ ಇಳಿಕೆ

ಹೊಸದಿಲ್ಲಿ: ಕಾಂಗ್ರೆಸ್‌ನ ಅಗ್ರ ಕುಟುಂಬಕ್ಕೆ ( spg protection) ನೀಡಲಾಗುತ್ತಿರುವ ವಿಶೇಷ ಭದ್ರತೆ ಶೀಘ್ರವೆ ಕೊನೆಗೊಳ್ಳುವ ಸಾಧ್ಯತೆಗಳಿವೆ. ಸೋನಿಯಾ ಆಗಲೀ ಅಥವ ಅವರ ಮಕ್ಕಳಾದ ರಾಹುಲ್ ಮತ್ತು ಪ್ರಿಯಾಂಕಾ ಅವರಿಗಾಗಲೀ ಯಾವುದೇ ಅಪಾಯದ ಭೀತಿ ಇಲ್ಲ ಎಂದು ಗೃಹ ಸಚಿವಾಲಯ ಅಭಿಪ್ರಾಯ ವ್ಯಕ್ತಪಡಿಸಿದೆ.

ಇದನ್ನೂ ಓದಿ: ನಾನು ಬಿಜೆಪಿ ಬಲೆಗೆ ಬೀಳುವುದಿಲ್ಲ: ರಜನಿಕಾಂತ್ ಗುಡುಗು

ಈ ಅಭಿಪ್ರಾಯದ ಹಿನ್ನೆಲೆಯಲ್ಲಿ ಸೋನಿಯಾ ಕುಟುಂಬಕ್ಕೆ ಈಗ ಒದಗಿಸಲಾಗುತ್ತಿರುವ ಅತ್ಯುಚ್ಛ ಶ್ರೇಣಿಯ ಭದ್ರತಾ ವ್ಯವಸ್ಥೆಯಾದ ಎಸ್‌ಪಿಜಿ ರಕ್ಷಣೆಯನ್ನು ಹಿಂತೆದುಕೊಂಡು ಅವರಿಗೆ z+ ಶ್ರೇಣಿಯ ಭದ್ರತೆಯನ್ನು ಮಾತ್ರ ಮುಂದುವರಿಸಲಾಗುತ್ತದೆ.

ಮಾಜಿ ಪ್ರಧಾನ ಮಂತ್ರಿ ರಾಜೀವ್ ಗಾಂಧೀ ಅವರ ಹತ್ಯೆಯ ನಂತರ ಎಸ್‌ಪಿಜಿ ಕಮಾಂಡೊ ಪಡೆಯ ಭದ್ರತೆಯನ್ನು ಆರಂಭಿಲಾಗಿತ್ತು. ಸೋನಿಯಾ ಕುಟುಂಬಕ್ಕೆ ಆಗಿನಿಮದಲೂ ಎಸ್‌ಪಿಜಿ ಭದ್ರತಾ ವ್ಯವಸ್ಥೆ ನೀಡಲಾಗಿತ್ತು.

ಕೆಲ ದಿನಗಳ ಹಿಂದಷ್ಟೇ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ನೀಡಲಾಗಿದ್ದ ಎಸ್‌ಪಿಜಿ ಭದ್ರತೆಯನ್ನು ಹಿಂಪಡೆದು ಅವರಿಗೆ z+ ಭದ್ರತೆಯನ್ನು ಮಾತ್ರ ಮುಂದುವರಿಸಲಾಗಿತ್ತು. ಈಗ ಸೋನಿಯಾ ಕುಟುಂಬಕ್ಕೂ ಅದೇ ನೀರಿ ಅನುಸರಿಸಲು ಕೇಂದ್ರ ಮುಂದಾಗಿದೆ.

ಸೋನಿಯಾ, ಪ್ರಿಯಾಂಕಾ ಹಾಗೂ ರಾಹುಲ್ ಗಾಂಧಿ ಅವರಿಗೆ ಇರುವ ಅಪಾಯದ ಬಗ್ಗೆ ನಾನಾ ಭದ್ರತಾ ಸಂಸ್ಥೆಗಳು ಅಧ್ಯಯನ ನಡೆಸಿ ಎಸ್‌ಪಿಜಿ ಕೊಟೆಯ ಅಗತ್ಯ ಇವರಿಗಿಲ್ಲ ಎಂಬ ಅಭಿಪ್ರಾಯಕ್ಕೆ ಬಂದಿವೆ ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...