sivan ಚಂದ್ರನೂರಲ್ಲಿ ಪತ್ತೆಯಾದರೂ ಇನ್ನೂ ಸಂಪರ್ಕಕ್ಕೆ ಸಿಗದ ವಿಕ್ರಂ ಲ್ಯಾಂಡರ್‍

isro loses hope
isro chief sivan and vikram lander (file photo)

sivan ಸಂಪರ್ಕ ಸಾಧಿಸುವ ಪ್ಯಯತ್ನ ನಡೆದಿದ ಎಂದ ಇಸ್ರೊ ಮುಖ್ಯಸ್ಥ

ಬೆಂಗಳೂರು: ಚಂದ್ರನ ಮೇಲೆ ನಿಗದಿತ ಗುರಿ ತಲುಪಲು ಕೇವಲ ( sivan ) 2.1 ಕಿಮೀ ಇದ್ದಾಗ ನಾಪತ್ತೆಯಾದ ಚಂದ್ರಯಾನ-2 ಬಾಹ್ಯಾಕಾಶ ನೌಕೆಯ ವಿಕ್ರಂ ಲ್ಯಾಂಡರ್‌ನ ಅತಾಪತಾ ದೊಕಿದೆಯಾದರೂ ಅದಿನ್ನೂ ವಿಜ್ಞಾನಿಗಳ ಸಂಪರ್ಕಕ್ಕೆ ಸಿಗುತ್ತಿಲ್ಲ.

ಇದನ್ನೂ ಓದಿ: ಚಂದ್ರನ ಸನಿಹ ಕಳೆದುಹೋದ ಭಾರತದ ‘ವಿಕ್ರಮ’

ಲ್ಯಾಂಡರ್‍ ಎಲ್ಲಿದೆ ಎಂಬ ಮಾಹಿತಿ ಚಿತ್ರ ಸಮೇತ ಇಸ್ರೋಗೆ ಲಭ್ಯವಾಗಿದೆ. ಆದರೆ ಅದರ ಸಂಪರ್ಕ ಸಾಧ್ಯವಾಗುತ್ತಿಲ್ಲ. ಅದಕ್ಕಾಗಿ ವಿಜ್ಞಾನಿಗಳು ಸತತ ಪರಿಶ್ರಮದಲ್ಲಿ ನಿರತರಾಗಿದ್ದಾರೆ ಎಂದು ಇಸ್ರೋ ಮುಖ್ಯಸ್ಥ ಶಿವನ್ ಹೇಳಿದ್ದಾರೆ.

ಆರ್ಬಿಟರ್ ಕಳುಹಿಸಿರುವ ಥರ್ಮಲ್ ಚಿತ್ರದಿಂದ ವಿಕ್ರಮ್ ಲ್ಯಾಂಡರ್ ನ ಬಗ್ಗೆ ಮಾಹಿತಿ ಇಸ್ರೊಗೆ ಸಿಕ್ಕಿದೆ. ಆದರೆ ‘ವಿಕ್ರಮ್ ‘ ಲ್ಯಾಂಡರ್ ಈ ವರೆಗೆ ಇಸ್ರೊದ ಸಂಪರ್ಕಕ್ಕೆ ಸಿಕ್ಕಿಲ್ಲ. ಸಂಪರ್ಕಕ್ಕೆ ಇಸ್ರೊ ನಿರಂತರ ಪ್ರಯತ್ನ ನಡೆಸುತ್ತಿದೆ ಎಂದು ಶಿವನ್ ಹೇಳೀಕೆ ನೀಡಿದ್ದಾರೆ..

ಚಂದ್ರನ ಭೂಸ್ಪರ್ಶದ ಅಂತಿಮ ಕ್ಷಣದ ಕಾರ್‍ಯಾಚರಣೆಯಲ್ಲಿ ನಾವು ಲ್ಯಾಂಡರ್‌ ಸಂಪರ್ಕವನ್ನು ಕಳೆದುಕೊಂಡಿದ್ದೇವೆ ಮತ್ತು ತರುವಾಯ ಸಂಪರ್ಕ ಸಾಧ್ಯವಾಗಲಿಲ್ಲ. ಇದೀಗ ಸಂವಹನ ಕಳೆದುಹೋಗಿದೆ. ಮುಂದಿನ 14 ದಿನಗಳವರೆಗೆ ಇಸ್ರೋ ಸಂಪರ್ಕಿಸಲು ಪ್ರಯತ್ನ ನಡೆಸಲಿದೆ ಎಂದು ಶಿವನ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...