siddu warns ಭಾಗ್ಯ ಯೋಜನೆಗಳಿಗೆ ಕಲ್ಲು: ಬಿಎಸ್ವೈ ವಿರುದ್ಧ ಸಿದ್ದು ಕೆಂಡ, ಹೋರಾಟದ ಎಚ್ಚರಿಕೆ

siddu warns
former cm siddaramaiah

siddu warns ಯಡಿಯೂರಪ್ಪ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆಂದ ಸಿದ್ದು

ಬೆಂಗಳೂರು: ತಮ್ಮ ಅಧಖಾರದ ಅವಧಿಯಲ್ಲಿ ಜಾರಿಗೆ ತರಲಾದ ವಿವಿಧ ಭಾಗ್ಯ ( siddu warns ) ಯೋಜನೆಗಳನ್ನು ಅಕ್ರಮದ ನೆಪದಲ್ಲಿ ಸ್ಥಗಿತಗೊಳಿಸಲು ಸರಕಾರ ಮುಂದಾಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.

ಇದನ್ನೂ ಓದಿ: ಜೆಡಿಎಸ್‌ನಲ್ಲಿ ನನಗೆ ಬೇಸರವಾಗಿದೆ ಎಂದ ದೇವೇಗೌಡ್ರು

ಬಡಜನರ ಕಲ್ಯಾಣಕ್ಕೆಂದು ಜಾರಿಗೆ ತರಲಾದ ಈ ಜನಪ್ರಿಯ ಯೋಜನೆಗಳಲ್ಲಿ ಅಕ್ರಮ ಇದೆ ಎಂದು ಹೇಳಿ ತನಿಖೆಗೆ ಆದೇಶಿಸುವ ಮೂಲಕ ಅವುಗಳನ್ನು ತಟಸ್ಥಗೊಳಿಸುವ ಹುನ್ನಾರಕ್ಕೆ ಸಿಎಂ ಯಡಿಯೂರಪ್ಪ ಕೈಹಾಕಿದ್ದಾರೆ ಎಂದು ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯನವರು ಸರಕಾರದ ನಡೆಯನ್ನು ಖಂಡಿಸಿದ್ದಾರೆ. ಅಲ್ಲದೇ ಅಗತ್ಯ ಬಿದ್ದರೇ ಸರಕಾರದ ಈ ಕ್ರಮದ ವಿರುದ್ಧ ಬೀದಿಗಿಳಿದು ಹೋರಾಟ ಮಾಡಲು ಹಿಂಜರಿಯುವುದಿಲ್ಲ ಎಂದೂ ಹೇಳಿದ್ದಾರೆ.

ನಮ್ಮ ಸರ್ಕಾರದ ಜನಪರ ಯೋಜನೆಗಳನ್ನು ಸ್ಥಗಿತಗೊಳಿಸಲು ಅವರು ಹೊಸ ತಂತ್ರಗಳ ಹುಡುಕಾಟದಲ್ಲಿದ್ದಾರೆ. ತನಿಖಾ ಪ್ರಹಸನ ಇದರಲ್ಲೊಂದು. ತನಿಖೆಯನ್ನು ಬೇಡ ಎನ್ನುವುದಿಲ್ಲ, ತನಿಖೆಯ ನೆಪದಲ್ಲಿ ಯೋಜನೆಗಳನ್ನು ನಿಲ್ಲಿಸಿದರೆ ಬೀದಿಗಿಳಿಯುವ ಜನರ ಜತೆ ನಾನೂ ಇರುತ್ತೇನೆ ಎಂದು ಅವರು ಎಚ್ಚರಿಸಿದ್ದಾರೆ.

ನಮ್ಮ ಸರ್ಕಾರದ ಅವಧಿಯ 5 ಯೋಜನೆಗಳನ್ನು ಯಡಿಯೂರಪ್ಪ ಅವರು ತನಿಖೆಗೆ ಒಳಪಡಿಸುತ್ತಿರುವುದು ಬಹಳ ಸಂತೋಷ. ಬೆಟ್ಟ ಅಗೆದು ಇಲಿ ಹಿಡಿಯುವುದಿದ್ದರೆ ನಾವ್ಯಾಕೆ ಬೇಡ ಎನ್ನಲಿ! ಇದು ತಮ್ಮ ಆಡಳಿತ ವೈಫಲ್ಯವನ್ನು ಮುಚ್ಚಿಹಾಕಲು ಪ್ರಾರಂಭಿಸಿರುವ ಹೊಸ ನಾಟಕ ಎನ್ನುವುದನ್ನು ಅರಿಯದಷ್ಟು ರಾಜ್ಯದ ಜನ ಮುಗ್ಧರಲ್ಲ ಎಂದು ಸಿದ್ದರಾಮಯ್ಯ ಜರೆದಿದ್ದಾರೆ.

ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆದ ದಿನದಿಂದ ವರ್ಗಾವಣೆ ಮತ್ತು ದ್ವೇಷ ರಾಜಕಾರಣ ಬಿಟ್ಟು ಬೇರೇನು ಮಾಡುತ್ತಿಲ್ಲ. ಪ್ರವಾಹದಿಂದ ಎಲ್ಲವನ್ನೂ ಕಳೆದುಕೊಂಡವರ ಬದುಕು ಬೀದಿಗೆ ಬಂದಿದೆ, ಈಶ್ವರಪ್ಪನವರು ಈ ನಿರಾಶ್ರಿತರಿಗೆ ಹತ್ತು ಸಾವಿರ ರೂಪಾಯಿ ಕೊಟ್ಟಿರುವುದೇ ಹೆಚ್ಚು ಎನ್ನುತ್ತಾರೆ. ಇಂಥವರಿಗೆ ಜನರ ಬಗ್ಗೆ ಕಾಳಜಿ, ಕರುಣೆ ಏನಾದರೂ ಇದೆಯೇ? ಎಂದು ಸಿದ್ದು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...