siddu targets ಕುಮಾರಸ್ವಾಮಿ ಬಿಜೆಪಿಯ ಆಪ್ತಮಿತ್ರ: ಸಿದ್ದರಾಮಯ್ಯ ಟಾಂಗ್

siddu targets
siddaramaiah talking to press

siddu targets ಕುಮಾರಸ್ವಾಮಿ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು

ಬೆಂಗಳೂರು: ಯಾವುದೇ ಕಾರಣಕ್ಕೂ ಯಡಿಯೂರಪ್ಪ ಅವರ ಸರಕಾರ ( siddu targets ) ಬೀಳಲು ಬಿಡುವುದಿಲ್ಲ ಎಂಬ ಕುಮಾರಸ್ವಾಮಿ ಅವರ ಹೇಳಿಕೆಗೆ ಮಾಜಿ ಸಿಎಂ ಸಿದ್ದರಾಮಯ್ಯ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ನಾನು ನಂಬಿದವರೇ ನನಗೆ ಕೈಕೊಟ್ಟರು: ಕುಮಾರಸ್ವಾಮಿ ವಿಷಾದ

ಈ ಸರಕಾರಕ್ಕೆ ಜೆಡಿಎಸ್ ಬೆಂಬಲ ಇದೆ ಎಂಬ ಅಂಶ ಈ ಹೇಳಿಕೆಯಿಂದ ವ್ಯಕ್ತವಾಗುತ್ತೆ. ಎಷ್ಟೇ ಆದರೂ ಕುಮಾರಸ್ವಾಮಿ ಬಿಜೆಪಿಯ ಮಿತ್ರರಲ್ಲವೇ ಎಂದು ಸಿದ್ದರಾಮಯ್ಯ ಮೂದಲಿಸಿದ್ದಾರೆ.

ಈ ಹಿಂದೆ ಇದೇ ಬಿಜೆಪಿ ಜೊತೆ ಕೈಜೋಡಿಸಿ ಸರಕಾರ ಮಾಡಿದವರು ಕುಮಾರಸ್ವಾಮಿ. ಹೀಗಾಗಿ ಬಿಜೆಪಿ ಮೇಲಿನ ಅವರ ಪ್ರೀತಿ ಕರಗಿಹೋಗಲು ಸಾಧ್ಯವೇ ಎಂದು ಸಿದ್ದು ಪ್ರಶ್ನಿಸಿದ್ದಾರೆ. ಕುಮಾರಸ್ವಾಮಿ ಅವರ ಹೇಳಿಕೆಯಿಂದ ಈ ಸರಕಾರಕ್ಕೆ ಜೆಡಿಎಸ್ ಪಕ್ಷದ ಬೆಂಬಲ ಇದೆ. ಎಂಬುದು ಸ್ಪಷ್ಟವಾಗುತ್ತದೆ ಎಂದೂ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ಚುನಾವಣೆ ಮುಗಿದ ಮೇಲೆ ಸರಕಾರ ಬೀಳುತ್ತದೆ ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ಸ್ಪಂದಿಸಿದ್ದ ಕುಮಾರಸ್ವಾಮಿ ಯವುದೇ ಕಾಣಕ್ಕೆ ತಾವು ಈ ಸರಕಾರ ಬೀಳಲು ಅವಕಾಶ ನೀಡುವುದಿಲ್ಲ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದರು. ಉಪ ಚುನಾವಣೆ ಹಿನೆನ್ಲೆಯಲ್ಲಿ ಇಬ್ಬರು ನಾಯಕರ ಪರಸ್ಪರ ವಾಕ್ಸಮರ ತಾರಕ ಮುಟ್ಟಿದ್ದು, ದಿನಲೂ ಪರಸ್ಪರರ ಮೇಲೆ ಆರೋಪ-ಪ್ರತ್ಯಾರೋಪ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...