siddu roars ರಾಜ್ಯದ ಬಡಜನ ದಂಗೆ ಎದ್ದಾರು ಹುಶಾರ್: ಬಿಎಸ್ವೈಗೆ ಸಿದ್ದು ಎಚ್ಚರಿಕೆ

siddu chants
former cm siddaramaiah

siddu roars ವಿವಿಧ ಭಾಗ್ಯಗಳಿಗೆ ಬಿಎಸ್ವೈ ಕೊಕ್: ಸಿದ್ದು ಕೆಂಡಾಮಂಡಲ

ಬೆಂಗಳೂರು: ತಮ್ಮ ಆಡಳಿತ ಅವಧಿಯಲ್ಲಿ ಬಡಜನರಿಗಾಗಿ ಜಾರಿಗೆ ( siddu roars ) ತರಲಾದ ವಿವಿಧ ಭಾಗ್ಯ ಯೋಜನೆಗಳನ್ನು ಸ್ಥಗಿತಗೊಳಿಸುವುದರ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಕೆಂಡ ಕಾರಿದ್ದಾರೆ.

ಇದನ್ನೂ ಓದಿ: ಕೇಂದ್ರದ ಪರಿಹಾರ ದಾನವೂ ಅಲ್ಲ, ಭಿಕ್ಷೆಯೂ ಅಲ್ಲ. ಅದು ನಮ್ಮ ಹಕ್ಕು: ಸಿದ್ದರಾಮಯ್ಯ

ಅನ್ನಭಾಗ್ಯ ಸೇರಿದಂತೆ ಜಾರಿಯಲ್ಲಿರುವ ಹಲವಾರು ಭಾಗ್ಯ ಯೋಜನೆಗಳಿಗೆ ಕತ್ತರಿ ಹಾಕಲು ಮುಖ್ಯಮಂತ್ರಿ ಯಡಿಯೂರಪ್ಪ ಮುಂದಾಗಿದ್ದಾರೆ ಎಂಬ ವರದಿಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ ಅವರು ಇದರಿಂದ ರಾಜ್ಯದಲ್ಲಿ ಬಡಜನ ದಂಗೆ ಏಳುವಂತಹ ಪರಿಸ್ಥಿತಿ ಬರಲಿದೆ ಎಂದು ಟ್ವೀಟಿಸಿದ್ದಾರೆ.

ನಮ್ಮ ಸರ್ಕಾರ ಜಾರಿಗೆ ತಂದಿದ್ದ ಜನಪರ ಯೋಜನೆಗಳನ್ನು ಈಗಿನ ಸರ್ಕಾರ ರದ್ದುಪಡಿಸುವ, ನಿರ್ಲಕ್ಷಿಸುವ ದುರಾಲೋಚನೆ ಮಾಡಿದರೆ ರಾಜ್ಯದ ಬಡಜನತೆ ದಂಗೆ ಏಳಬಹುದು,ಎಚ್ಚರ ಇರಲಿ. ಇಂತಹ ಜನವಿರೋಧಿ ನಿಲುವುಗಳನ್ನು ನಾವು ಸಹಿಸಿಕೊಳ್ಳುವವರಲ್ಲ, ಹೋರಾಟದ ಮೂಲಕ ಉತ್ತರ ನೀಡಬೇಕಾಗುತ್ತದೆ ಎಂದಿದ್ದಾರೆ.

ಅನ್ನಭಾಗಯ್ದಲ್ಲಿ ಫಲಾನುಭವಿಗಳ ಅರ್ಹತೆ ಪರಿಶೀಲನೆಗೆ ಬಿಎಸ್ವೈ ಸೂಚನೆ ನೀಡಿರುವುದು ಮತ್ತು ಸಂಪನ್ಮೂಲ ಕ್ರೋಢೀಕರಣದ ದೃಷ್ಟಿಯಿಂದ ಕೆಲವು ಯೋಜನೆಗಳನ್ನು ಸ್ಥಗಿತಗೊಳಿಸುವ ಇಂಗಿತ ವ್ಯಕ್ತಪಡಿಸಿರುವುದು ಈ ಪ್ರತಿಕ್ರಿಯೆಗೆ ಕಾರಣವಾಗಿದೆ.

ಈ ಮಧ್ಯೆ ರಾಜ್ಯದಲ್ಲಿ ನೆರೆ ವಿಚಾರವಾಗಿ ಕೇಂದ್ರಸ ಸರಕಾರದ ಧೋರಣೆಯನ್ನೂ ಸಿದ್ದರಾಮಯ್ಯ ಖಂಡಿಸಿದ್ದಾರೆ. ಅಷ್ಟೇ ಅಲ್ಲದೇ ನೆರೆ ಪರಿಹಾರ ಕೇಳಲು ಹೋದ ಸಿಎಂಗೂ ಪ್ರಧಾನಿ ಮೋದಿ ಅನಾದರ ತೊರಿದ್ದಾರೆ ಎಂದು ಜರೆದಿದ್ದಾರೆ.

ನೆರೆ ಇಲ್ಲವೆ ಬರ ಪರಿಸ್ಥಿತಿ ಎದುರಿಸಿದ ಸಂದರ್ಭಗಳಲ್ಲಿ , ವಾಜಪೇಯಿ ಸರ್ಕಾರವೂ ಸೇರಿದಂತೆ ಹಿಂದಿನ ಯಾವ ಕೇಂದ್ರ ಸರ್ಕಾರವೂ, ಯಾವ ಪ್ರಧಾನಿಯೂ ಕರ್ನಾಟಕ ರಾಜ್ಯವನ್ನು ಈ ರೀತಿ ನಿರ್ಲಕ್ಷಿಸಿಲ್ಲ, ಮುಖ್ಯಮಂತ್ರಿಯನ್ನು ಈ ರೀತಿ ಅವಮಾನಿಸಿಲ್ಲ. ಸ್ವಾಭಿಮಾನಿ, ಸ್ವಾವಲಂಬಿ ಕರ್ನಾಟಕ ಇದನ್ನು ಸಹಿಸದು ಎಂದಿದ್ದಾರೆ.