siddu appointed ನಡೆಯದ ಹಿರಿಯರ ಆಟ: ಸಿದ್ದರಾಮಯ್ಯ ಪ್ರತಿಪಕ್ಷ ನಾಯಕ

siddu appointed
former cm siddaramaiah

siddu appointed ಬಹುಪಾಲು ಶಾಸಕರ ಭಾವನೆಗೆ ಸ್ಪಂದಿಸಿದ ಕೈಕಮಾಂಡ್

ಬೆಂಗಳೂರು: ಬಹುಪಾಳು ಶಾಸಕರ ಅಭಿಪ್ರಾಯಕ್ಕೆಮಣಿದ ( siddu appointed ) ಕಾಂಗ್ರೆಸ್ ಹೈಕಮಾಂಡ್ ಪ್ರತಿಪಕ್ಷ ನಾಯಕರನ್ನಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ನೇಮಕ ಮಾಡಿದೆ.

ಇದನ್ನೂ ಓದಿ: ಸಿದ್ದರಾಮಯ್ಯ ನಾಯಕತ್ವಕ್ಕೆ ಮುಕ್ಕಾಲುಪಾಲು ಶಾಸಕರ ಒಲವು

ಶಾಸಕರ ಅಭಿಪ್ರಾಯ ಸಂಗ್ರಹಿಸಿ ವೀಕ್ಷಕರು ಕೊಟ್ಟ ವರದಿ ಆಧಾರದ ಮೇಲೆ ಸಿದ್ದರಾಮಯ್ಯ ಅವರನ್ನೇ ಪ್ರತಿಪಕ್ಷದ ನಾಐಕರನ್ನಾಗಿ ನೇಮಿಸಿ ಕೈಕಮಾಂಡ್ ಬುಧವಾರ ರಾತ್ರಿ ಅಧಿಕೃತ ಪ್ರಕಟಣೆ ಹೊರಡಿಸಿದೆ.

ಪಕ್ಷದ ನಿರ್ಧಾರದಿಂದಾಗಿ ಪ್ರತಿಪಕ್ಷ ನಾಯಕನ ಸ್ಥಾನದ ಮೇಲೆ ಕಣ್ಣೀಟ್ಟಿದ್ದ ಎಚ್ಕೆ ಪಾಟೀಲ್, ಪರಮೇಶ್ವರ ಅವರಿಗೆ ಭಾರೀ ಹಿನ್ನಡೆಯಾದಂತಾಗಿದೆ. ಎಚ್ಕೆ ಪಾಟೀಲ್ ಅವರಂತು ಪ್ರತಿಪಕ್ಷ ನಾಯಕನ ಸ್ಥಾನಕ್ಕಾಗಿ ದಿಲ್ಲಿ ಮಟ್ಟದಲ್ಲಿ ಪ್ರಯತ್ನ ನಡೆಸಿದ್ದರು.

ಇನ್ನು ಸಿದ್ದರಾಂಯ್ಯ ಅವರನ್ನು ನಾಯಕತ್ವದಿಂದ ದೂರ ನೀಡಬೇಕೆಂಬ ಪಕ್ಷದ ಹಲವಾರು ಹಿರಿತಲೆಗಳ ಅಭಿಪ್ರಾಯಕ್ಕೂ ಹೈಕಮಾಂಡ್ ಸೊಪ್ಪು ಹಾಕಿಲ್ಲ.

ಇದೇ ವೇಳೆ ಮೇಲ್ಮನೆಯಲ್ಲಿ ಪ್ರತಿಪಕ್ಷದ ನಾಯಕರನ್ನಾಗಿ ಹಿರಿಯ ಶಾಸಕ ಎಸ್.ಆರ್. ಪಾಟೀಲ್ ಅವರನ್ನು ನೇಮಕ ಮಾಡಿರುವುದಾಗಿ ಕರ್ನಾಟಕದ ಉಸ್ತುವಾರಿ ಹೊತ್ತಿರುವ ವೇಣುಗೋಪಾಲ್ ಹೇಳಿದ್ದಾರೆ.

ಶಾಸಕಾಂಗ ನಾಯಕನ ಆಯ್ಕೆ ಸಂಬಂಧ ಅಭಿಪ್ರಾಯ ಸಂಗ್ರಹಣೆಗೆ ಬಂದಿದ್ದ ಹೈಕಮಾಂಡ್ ದೂತ ಮಧುಸೂದನ್ ಮಿಸ್ತ್ರಿ ಮುಂದೆ ಮಾಜಿ ಸಿಎಂ ಸಿದ್ದರಾಮಯ್ಯ ಪರವಾದ ದನಿಯೇ ಮುಂದಾಗಿತ್ತು

ಮುಕ್ಕಾಳುಪಾಲು ಶಾಸಕರು ಸಿದ್ದರಾಮಯ್ಯ ಅವರ ನಾಯಕತ್ವಕ್ಕೇ ಉಘೇ ಎನ್ನುವ ಮೂಲಕ ಯಾವುದೇ ಬದಲಾವಣೆಯ ಅಗತ್ಯವಿಲ್ಲ ಎಂಬುದನ್ನು ಸಾರಿ ಹೇಳಿದ್ದರು.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...