siddu advises ಕೆಪಿಸಿಸಿ ಅಧ್ಯಕ್ಷತೆ: ಆತುರ ಬೇಡಂದ ಸಿದ್ದು, ಗೊಂದಲದಲ್ಲಿ ಹೈಕಮಾಂಡ್

siddu advises

siddu advises ಎಂಬಿ ಪಾಟೀಲ್ ಪರ ಬ್ಯಾಟ್ ಬೀಸಿದ ಸಿದ್ದರಾಮಯ್ಯ, ಗೊಂದಲದಲ್ಲಿ ಕಾಂಗ್ರೆಸ್ ಹೈಕಮಾಂಡ್

ಹೊಸದಿಲ್ಲಿ: ಕೆಪಿಸಿಸಿ ಅಧ್ಯಕ್ಷತೆ ವಿಚಾರದಲ್ಲಿ (siddu advises) ಆತುರಕ್ಕೆ ಬಿದ್ದು ಯಾರಿಗೂ ಪಟ್ಟ ಕಟ್ಟುವುವುದು ಬೇಡ. ಅಳೆದು ತೂಗಿ ಸೂಕ್ತ ಅಭ್ಯರ್ಥಿಯನ್ನು ನೇಮಿಸಿ ಎಂದು ಮಾಝಿ ಸಿಎಂ ಸಿದ್ದರಾಮಯ್ಯ ವರಿಷ್ಠರಿಗೆ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ಡಿಕೆಶಿ ಆಯ್ತು ಈಗ ಜಾರ್ಜ್‌‌ಗೆ ’ಜಾರಿ’ ಕಂಟಕ

ಪ್ರದೇಶ ಕಾಂಗ್ರೆಸ್ ಅಧ್ಯಕ್ಷತೆಗೆ ಎಂಬಿ ಪಾಟೀಲ್ ಪರವಾಗಿ ಬ್ಯಾಟ್ ಬೀಸಿರುವ ಸಿದ್ದರಾಮಯ್ಯ ಒತ್ತಡಕ್ಕೆ ಬಿದ್ದು ಯಾರನ್ನೂ (ಪರೋಕ್ಷವಾಗಿ ಡಿಕೆಶಿ) ನೇಮಕ ಮಾಡಬೇಡಿ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಕಿವಿ ಮಾತು ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಒಂದು ಹಂತದಲ್ಲಿ ಡಿಕೆ ಶೀವಕುಮಾರ್ ಅವರಿಗೆ ಪಟ್ಟ ಕಟ್ಟಲು ಕಾಂಗ್ರೆಸ್ ವರಿಷ್ಠರು ನಿರ್ಧರಿಸಿದ್ದರಾದರೂ ಸಿದ್ದರಾಮಯ್ಯ ಅವರ ಜೊತೆಗಿನ ಮಾತುಕತೆಯ ನಂತರ ಗೊಂದಲಕ್ಕೆ ಬಿದ್ದಿದ್ದು, ಸದ್ಯ ಯಾರೂ ನೇಮಕಗೊಳ್ಳುವು ಸೂಚನೆ ಇಲ್ಲ.

ಎಂ.ಬಿ. ಪಾಟೀಲ್ ಅವರ ಹೆಸರನ್ನು ಸಿದ್ದರಾಮಯ್ಯ ಅವರು ಪ್ರಸ್ತಾಪಿಸಿದ್ದಾರೆ. ಎಂಬಿ ಪಾಟೀಲ್ ಅವರಿಗೆ ಏಕೆ ಅಧ್ಯಕ್ಷ ಸ್ಥಾನ ನೀಡಬೇಕು, ಅದರಿಂದ ಪಕ್ಷಕ್ಕೆ ಆಗುವ ಅನುಕೂಲಗಳೇನು ಎಂಬುದನ್ನು ವಿವರಿಸಿ ಹೇಳಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...