ಮಾಜಿ ಮುಖ್ಯಮಂತ್ರಿ siddaramaiah ಅವರ ನೋವಿನ ಮಾತು

ಚಾಮರಾಜನಗರ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅನುಭವಿಸಿದ ಸೋಲಿನ ಕಹಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮನಸ್ಸನ್ನು ಇನ್ನಿಲ್ಲದಂತೆ ಘಾಸಿಗೊಳಿಸಿದೆ. ಈ ಕಹಿ ನುಂಗಿಕೊಂಡು ಮುನ್ನಡೆಯುತ್ತಿರುವಂತೆ ಕಂಡರೂ ಅದರ ನೆನಪು ಅವರನ್ನು ಕಾಡುತ್ತಲೇ ಇದೆ.

ಐದು ವರ್ಷಗಳ ಕಾಲ ರಾಜ್ಯಕ್ಕೆ ಜನೋಪಕಾರಿ, ನಿಷ್ಕಳಂಕ ಆಡಳಿತ ನೀಡಿದರೂ ತಮಗೆ ಮತ್ತೊಂದು ಅವಧಿಗೆ ಜನಾದೇಶ ದೊರಕದಿರುವ ಬಗ್ಗೆ ಸಿದ್ದರಾಮಯ್ಯನವರಿಗೆ ಮನದಾಳದಲ್ಲಿ ಬೇಸರ ಇದ್ದೇ ಇದೆ, ಮತ್ತು ಆ ಬೇಸರ ಸಕಾರಣವೂ ಹೌದು.

ಇದನ್ನೂ ಓದಿ: ಸಿದ್ದರಾಮಯ್ಯಗೆ ಅನ್ಯಾಯ, ಕೊಡಗಿಗೆ ಪ್ರಳಯ

ಈಗಾಗಲೇ ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಚುನಾವಣಾ ಹಿನ್ನಡೆಯ ಬಗ್ಗೆ ಸಾಕಷ್ಟು ವ್ಯಾಖ್ಯಾನ ಮಾಡಿದ್ದಾರೆ. ಅದರ ಕಾರಣಗಳನ್ನೂ ಜನರ ಮುಂದೆ ಬಿಚ್ಚಿಡ್ಡಿದ್ದಾರೆ.

ಸದ್ಯ ಚಾಮರಾಜನಗರದಲ್ಲಿ ನಡೆದ ಕಾರ್‍ಯಕ್ರಮದಲ್ಲಿ ಸಹ ಸಿದ್ದರಾಮಯ್ಯನವರು ತಮ್ಮ ಮನದ ಬೇಗುದಿಯನ್ನು, ನೋವನ್ನು ಸಾರ್ವಜನಿಕವಾಗಿ ತೋಡಿಕೊಂಡಿದ್ದಾರೆ.

ತಮ್ಮ ಅಡಳಿತಾವಧಿಯಲ್ಲಿ ಜಾರಿಗೆ ತರಲಾದ ಅನ್ನಭಾಗ್ಯ ಎಲ್ಲ ಸಮುದಾಯದವರಿಗೂ ಅನ್ವಯವಾಗುವ ಕಲ್ಯಾಣ ಕಾರ್‍ಯಕ್ರಮವಾಗಿದ್ದು, ಅದರಿಂದ ಸಮಾಜದ ಸಮಸ್ತರೂ ಲಾಭ ಪಡೆದಿದ್ದಾರೆ ಎಂಬುದು ಸಿದ್ದರಾಮಯ್ಯನವರ ನಂಬಿಕೆಯಾಗಿದೆ.

siddaramaiah
siddaramaiah releasing farmer app

ಹಾಗಾಗಿಯೇ ತಮ್ಮನ್ನು ವಿರೋಧಿಸುವವರು ಮನೆಯಲ್ಲಿ ಅನ್ನಭಾಗ್ಯದ ಅಕ್ಕಿಯ ಅನ್ನ ತಿನ್ನುತ್ತಿಲ್ಲವೇ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.

ಜಾತಿ ಎನ್ನುವ ಕೊಳಕು ಮನಸ್ಥಿತಿಯಿಂದ ನಾನು ಮತ್ತೆ ಮುಖ್ಯಮಂತ್ರಿ ಆಗುವುದನ್ನು ತಡೆದರು. ನನ್ನನ್ನು ವಿರೋಧಿಸುವವರು ಮನೆಯಲ್ಲಿ ಅನ್ನಭಾಗ್ಯದ ಅಕ್ಕಿಯ ಅನ್ನ ತಿನ್ನುತ್ತಿಲ್ಲವೇ ಎಂದು ವಾಗ್ಧಾಳಿ ನಡೆಸಿದ್ದಾರೆ.

ರಾಜ್ಯದ ನಾಲ್ಕು ಕೋಟಿ ಮಂದಿಗೆ ಪಡಿತರ ಚೀಟಿ ನೀಡಿದ್ದೇನೆ. ಜಾತಿಯಿಂದಾಗಿ ನನ್ನನ್ನು ವಿರೋಧಿಸುವವರು ಮನೆಯಲ್ಲಿ ಅನ್ನ ತಿನ್ನುವುದಿಲ್ಲವೇ? ಎಂದು ಖಾರವಾಗಿಯೇ ನುಡಿದಿದ್ದಾರೆ.

ಅಷ್ಟೇ ಅಲ್ಲದೇ ಸಮಾಜದಲ್ಲಿ ಎಲ್ಲ ಬಡ ರೈತರಿಗೂ ಸಾಲಮನ್ನಾ ಮಾಡಿದ್ದೀನಿ. ನನ್ನನ್ನು ವಿರೋಧಿಸುವವರಿಗೇ ಜಾಸ್ತಿ ಅನೂಕೂಲವಾಗಿರುವುದು. ಹಾಲಿಗೆ ಸಬ್ಸಿಡಿ ಕೊಟ್ಟೆ. ನನ್ನ ವಿರೋಧ ಮಾಡುವವರೇ ಹೆಚ್ಚು ಹಾಲು ಕರೆಯುವವರು ಎಂದು ಸಿದ್ದರಾಮಯ್ಯ ಬೇಸರದ ಮಾತುಗಳನ್ನಾಡಿದ್ದಾರೆ.