shivaji ರಮೇಶ್ ಅರವಿಂದ್ ಜನ್ಮದಿನಕ್ಕೆ ’ಶಿವಾಜಿ’ ಟೀಸರ್

shivaji
ramesh aravind in shivaji suratkal

shivaji  ರಮೇಶ್ ಅಭಿನಯದ ಶಿವಾಜಿ ಸೂರತ್ಕಲ್ ಚಿತ್ರೀಕರಣ ಪೂರ್ಣ

ಬೆಂಗಳೂರು: ಸ್ಟಿಲ್ಸ್‌ಗಳಿಂದಲೇ ತೀವ್ರ ಕುತೂಹಲ ಕೆರಳಿಸಿರುವ ( shivaji ) ರಮೇಶ್ ಅರವಿಂದ್ ನಟನೆಯ ಶಿವಾಜಿ ಸೂರತ್ಕಲ್ ಚಿತ್ರದ ಮೊದಲ ಟೀಸರ್‍ ಇದೇ 10ರಂದು ಅವರ ಜನ್ಮದಿನದೇ ಬಿಡುಗೆಯಾಗಲಿದೆ.

ಇದನ್ನೂ ಓದಿ: ವರ್ಷಾಂತ್ಯಕ್ಕೆ ’ಮದಕರಿ ನಾಯಕ’ನಾಗಿ ಕಂಗೊಳಿಸಲಿದ್ದಾರೆ ದರ್ಶನ್

ರಮೇಶ್ ಅರವಿಂದ್‌ ಅವರ 101 ನೇ ಚಿತ್ರವಾದ “ಶಿವಾಜಿ ಸುರತ್ಕಲ್” ದ ಕೇಸ್ ಆಫ್ ರಣಗಿರಿ ರಹಸ್ಯ ಚಿತ್ರದ ಟೀಸರ್ ಅನ್ನು ರಮೇಶ್ ಅರವಿಂದ್ ಅವರ ಹುಟ್ಟು ಹಬ್ಬ ದಂದು ಬಿಡುಗಡೆ ಮಾಡಲು ನಿರ್ಧಾರ ಮಾಡಲಾಗಿದೆ ಎಂದು ಚಿತ್ರ ತಂಡ ಹೇಳಿದೆ.

ಸಾಕಷ್ಟು ಕುತೂಹಲ ಕೆರಳಿಸಿರುವ ಚಿತ್ರದ ಚಿತ್ರೀಕರಣ ಪೂರ್ಣವಾಗಿ ಮುಗಿದಿದ್ದು, ಪಾತ್ರಗಳಿಗೆ ಮಾತಿನ ಜೋಡಣೆಯ ಕೆಲಸ ಸಹ ತನ್ನ ಅಂತಿಮ ಚರಣದಲ್ಲಿದೆ.

ಚಿತ್ರದ ಮುಖ್ಯ ಪಾತ್ರದಲ್ಲಿ ರಮೇಶ್ ಅರವಿಂದ್, ರಾಧಿಕಾ ಚೇತನ್, ಆರೋಹಿ ನಾರಾಯಣ್ ಅವರುಗಳಿದ್ದು, ಬದ್ಮಾಶ್, ಸುಳ್ಳೇ ಸತ್ಯ ಮುಂತಾದ ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ್ದ ಆಕಾಶ್ ಶ್ರೀವತ್ಸ ನಿರ್ದೇಶನ ಮಾಡಲಿದ್ದಾರೆ.

ಅಂಜನಾದ್ರಿ ಸಿನಿ ಕ್ರಿಯೇಶನ್ ಬ್ಯಾನರಿನಡಿ ರೇಖಾ.ಕೆ.ಎನ್, ಅನೂಪ್ ಗೌಡ ಚಿತ್ರವನ್ನು ನಿರ್ಮಾಣ ಮಾಡಿದ್ದು, ಗುರುಪ್ರಸಾದ್ ಛಾಯಾಗ್ರಹಣ ಹಾಗೂ ಜೂಡೋ ಸ್ಯಾಮಡಿ ಸಂಗೀತ ನಿರ್ದೇಶನವಿದೆ.