shirdi saibaba ಕಣ್ಮನ ಸೆಳೆಯುತ್ತಿರುವ ಶಿರಡಿ ಸಾಯಿ ನಿಜರೂಪದ ಮೇಣದ ಪ್ರತಿಮೆ

shirdi saibaba
wax statue of shirdi sai baba

shirdi saibaba ಜೆ ಪಿ ನಗರದ ಶಿರಡಿ ಸಾಯಿ ಬಾಬ ದೇವಸ್ಥಾನದಲ್ಲಿ ಪ್ರತಿಷ್ಠಾಪನೆ

ಬೆಂಗಳೂರು: ಜೆಪಿ ನಗರದ 6ನೇ ಹಂತದಲ್ಲಿರುವ ಶ್ರೀ ಸತ್ಯಗಣಪತಿ ಶಿರಡಿ ( shirdi saibaba ) ಸಾಯಿಬಾಬಾ ದೇವಸ್ಥಾನದಲ್ಲಿ ರಾಜ್ಯದಲ್ಲಿಯೇ ಮೊತ್ತಮೊದಲ ಬಾರಿಗೆ ಶಿರಡಿ ಸಾಯಿ ಬಾಬಾ ಅವರ ನಿಜರೂಪದ ದರ್ಶನ ನೀಡುವ ಮೇಣದ ಪ್ರತಿಮೆಯನ್ನು ಮಂಗಳವಾರ ಪ್ರತಿಷ್ಠಾಪಿಸಲಾಯಿತು.

ಇದನ್ನೂ ಓದಿ: ಬೆಂಗಳೂರಲ್ಲಿ ಶಿರಡಿ ಸಾಯಿ ನಿಜರೂಪದ ಮೇಣದ ಪ್ರತಿಮೆ

ಗುರು ಪೂರ್ಣಿಮೆಯ ಅಂಗವಾಗಿ ಶಿರಡಿ ಸಾಯಿ ಬಾಬ ಅವರ ಸನ್ನಿಧಾನ ಹೊರತುಪಡಿಸಿದರೆ ಬೆಂಗಳೂರು ನಗರದಲ್ಲೇ ಅತ್ಯಂತ ವಿಭಿನ್ನ ಹಾಗೂ ವಿಶೇಷವಾದ ಅಲಂಕಾರವನ್ನು ಈ ದೇವಸ್ಥಾನದಲ್ಲಿ ಮಾಡಲಾಗಿದೆ.

ಗುರುಪೂರ್ಣಿಮೆಯ ಸಂದರ್ಭ ಭಕ್ತರಿಗೆ ಹೊಸ ಅನುಭವವನ್ನು ನೀಡುವುದು ನಮ್ಮ ಉದ್ದೇಶ. ಈ ಬಾರಿ ಶಿರಡಿ ಸಾಯಿ ಬಾಬಾ ಅವರ ನಿಜರೂಪದ ದರ್ಶನ ನೀಡಲು, ಅವರ ಮೇಣದ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿದೆ ಎಂದು ಶ್ರೀ ಸತ್ಯಗಣಪತಿ ಶಿರಡಿ ಸಾಯಿ ಟ್ರಸ್ಟಿನ ವ್ಯವಸ್ಥಾಪಕ ಟ್ರಸ್ಟಿ ರಾಮ್ ಮೊಹನ ರಾಜ್ ಹೇಳಿದ್ದಾರೆ.

ಗುರು ಪೂರ್ಣಿಮೆ ಅಂಗವಾಗಿ ದೇವಸ್ಥಾನವನ್ನು ತೆಂಗಿನ ಕಾಯಿ, ಫಲಪುಷ್ಪಾದಿಗಳಿಂದ ಅಲಂಕರಿಸಲಾಗಿದೆ. 20ಕ್ಕೂ ಹೆಚ್ಚು ಕಲಾವಿದರು ಕಳೆದ 7 ದಿನಗಳಿಂದ ಈ ಆಲಂಕಾರವನ್ನು ಮಾಡಿದ್ದಾರೆ.

ಬೆಳಿಗ್ಗೆ 6 ಗಂಟೆಗೆ ಸಾಮೂಹಿಕ ಅಭಿಷೇಕದಿಂದ ಪ್ರಾರಂಭವಾದ ವಿಶೇಷ ಕಾರ್ಯಕ್ರಮಗಳು, ದತ್ತಾತ್ರೇಯ ಅಭಿಷೇಕ, ಫಲಪಂಚಾಮೃತ ಅಭಿಷೇಕ ಮತ್ತು ಸಾಮೂಹಿಕ ಹಾಲಿನ ಅಭಿಷೇಕ ನಡೆಯಿತು.

ಅಲ್ಲದೆ ಸುದರ್ಶನ ಹೋಮ ಮತ್ತು ಸಾಯಿನಾಥ ಹೋಮವನ್ನು ನಡೆಸಲಾಯಿತು, ಮಧ್ಯಾಹ್ನ 12.30ಕ್ಕೆ ಮಹಾಮಂಗಳಾರತಿ ಹಾಗೂ ತೀರ್ಥಪ್ರಸಾದ ವಿನಿಯೋಗ ನಡೆಯಿತು.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...